ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಪುನಃ ಕಾಡಿಗಟ್ಟಲು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಬಂದಿದ್ದಾರೆ

ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಪುನಃ ಕಾಡಿಗಟ್ಟಲು ನಾಗರಹೊಳೆಯಿಂದ ಭೀಮ ಮತ್ತು ಅರ್ಜುನ ಬಂದಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 28, 2022 | 8:39 PM

ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಅಧಕಾರಿಗಳು ಭೀಮ ಮತ್ತು ಅರ್ಜುನರನ್ನು ಕರೆತಂದಿದ್ದಾರೆ ಮತ್ತು ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಆನೆಗಳು ಬೀಡು ಬಿಟ್ಟಿವೆ

ಮಹಾಭಾರತ ಯುದ್ಧ ನೆನೆಯುವಾಗ ನಮಗೆ ಅರ್ಜುನ-ಕರ್ಣ (Arjun-Karna) ಮತ್ತು ಭೀಮ-ದುರ್ಯೋಧನ (Bhima-Duryodhana) ನಡುವೆ ನಡೆದ ವೈಯಕ್ತಿಕ ಕಾಳಗಗಳನ್ನು (personal battles) ರೋಮಾಂಚನ ಹುಟ್ಟಿಸುತ್ತವೆ. ಮೈಸೂರು ದಸರಾ ಉತ್ಸವದಲ್ಲಿ ಅಂಬಾರಿ ಹೊರುವ ಆನೆ ಅರ್ಜುನ ಮತ್ತು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಲ್ಲೊಂದಾಗಿರುವ ಭೀಮ ದಸರಾ ಇನ್ನೂ ಗಾವುದ ದೂರ ಇರುವಾಗಲೇ, ನಾಗರಹೊಳೆ ಆನೆ ಶಿಬಿರದಿಂದ ಚಿಕ್ಕಮಗಳೂರಿಗೆ ಒಂದು ಮಿಷನ್ ಗೋಸ್ಕರ ಕರೆತರಲಾಗಿದೆ. ಭೀಮಾರ್ಜುನರಂತೆ ಯುದ್ದ ಮಾಡುವ ಪ್ರಸಂಗವೇನೂ ಇಲ್ಲ, ಆದರೆ ಯುದ್ಧವನ್ನು ಹೋಲುವಂಥ ಕೆಲಸ ಇವರಿಂದ ಆಗಬೇಕಿದೆ. ಚಿಕ್ಕಮಗಳೂರಿನ ಬೀಕನಹಳ್ಳಿ ಮತ್ತು ಹಂಪಾಪುರದ ಜನ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ಎರಡು ಮೂರು ತಿಂಗಳುಗಳಿಂದ ಅವರು ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ವಿಷಯವನ್ನು ತರುತ್ತಿದ್ದರು. ಇಲಾಖೆ ಸಾಕಷ್ಟು ಪ್ರಯತ್ನಪಟ್ಟರೂ ಕಾಡಾನೆಗಳು ಊರುಗಳಿಗೆ ನುಗ್ಗಿ ಬೆಳೆದು ನಿಂತ ಪೈರುಗಳನ್ನು ಹಾಳು ಮಾಡುವುದು ಮುಂದುವರಿಸಿವೆ.

ಹಾಗಾಗಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆ ಅಧಕಾರಿಗಳು ಭೀಮ ಮತ್ತು ಅರ್ಜುನರನ್ನು ಕರೆತಂದಿದ್ದಾರೆ ಮತ್ತು ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಆನೆಗಳು ಬೀಡು ಬಿಟ್ಟಿವೆ. ಟಿವಿ9 ಚಿಕ್ಕಮಗಳೂರು ವರದಿಗಾರ ಪ್ರಶಾಂತ್ ವಲಯ ಅರಣ್ಯಾಧಿಕಾರಿ ಕ್ರಾಂತಿ ಅವರೊಂದಿಗೆ ಮಾತಾಡಿದ್ದಾರೆ.

ಕಾಡಾನೆಗಳ ಹಾವಳಿ ವಿರುದ್ಧ ನಡೆಯಲಿರುವ ಕಾರ್ಯಾಚರಣೆಯಲ್ಲಿ ಭೀಮ ಮತ್ತು ಅರ್ಜುನರೊಂದಿಗೆ ಸುಮಾರು 60-65 ಅರಣ್ಯ ಸಿಬ್ಬಂದಿ, ನಾಗರಹೊಳೆ ಆನೆ ಶಿಬಿರದ ಮಾವುತರು ಮತ್ತು ಇತರ ಸಿಬ್ಬಂದಿ ಸೇರಿ ಒಟ್ಟು 75 ಜನ ಭಾಗವಹಿಸಲಿದ್ದಾರೆ ಅಂತ ಕ್ರಾಂತಿ ಹೇಳಿದರು. ಅಧಿಕಾರಿ ಹೇಳುವ ಹಾಗೆ ರವಿವಾರ ರಾತ್ರಿ ಒಂದು ಆನೆ ಹಂಪಾಪುರದ ಬಳಿ ಕಾಣಿಸಿಕೊಂಡಿದೆಯಂತೆ. ಅದನ್ನು ಪುನಃ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಕೂಡಲೇ ಆರಂಭಿಸಲಾಗುವುದು ಅಂತ ಅವರು ಹೇಳಿದರು.

ಇದನ್ನೂ ಓದಿ:   ಕಾಫಿನಾಡಿನಲ್ಲಿ ಆನೆಗಳಿಂದ ಬೆಳೆಗಳನ್ನು ಉಳಿಸಲು ಗಿಡಗಳಿಗೆ ಮೈಕ್ ಸೆಟ್, ಡಿಜೆ ಸಿಸ್ಟಮ್ ಅಳವಡಿಸಿದ ರೈತರು!