ರಾಜಸ್ಥಾನದಲ್ಲಿ 300 ವರ್ಷ ಹಳೆಯ ಶಿವನ ದೇವಸ್ಥಾನ ನೆಲಸಮ; ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಈ ಘಟನೆಯ ಬಗ್ಗೆ ಟೀಕಿಸಿರುವ ಅಮಿತ್ ಮಾಳವಿಯಾ, ಏ. 18ರಂದು ಯಾವುದೇ ಸೂಚನೆ ನೀಡದೆ, ಆಡಳಿತವು ರಾಜಸ್ಥಾನದ ರಾಜ್‌ಗಢ ಪಟ್ಟಣದಲ್ಲಿ 85 ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಜೆಸಿಬಿಯಿಂದ ಧ್ವಂಸ ಮಾಡಿದೆ ಎಂದು ಆರೋಪಿಸಿದ್ದಾರೆ.

ರಾಜಸ್ಥಾನದಲ್ಲಿ 300 ವರ್ಷ ಹಳೆಯ ಶಿವನ ದೇವಸ್ಥಾನ ನೆಲಸಮ; ಗೆಹ್ಲೋಟ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ಶಿವನ ದೇವಸ್ಥಾನ ಧ್ವಂಸ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 22, 2022 | 3:15 PM

ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಾಯ್ ಮೊಹಲ್ಲಾದಲ್ಲಿ 300 ವರ್ಷ ಪ್ರಾಚೀನ ಶಿವನ ದೇವಾಲಯವನ್ನು (Shiva Temple) ಕೆಡವಲಾಗಿದೆ. ಈ ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯಾ (Amit Malviya) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರೌಲಿ ಮತ್ತು ಜಹಾಂಗೀರಪುರಿಯಲ್ಲಿ ಕಣ್ಣೀರು ಸುರಿಸಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತಿರುವುದು ಕಾಂಗ್ರೆಸ್‌ನ ಜಾತ್ಯತೀತತೆಯಾಗಿದೆ ಎಂದು ಕಿಡಿ ಕಾರಿದ್ದಾರೆ. ನಗರ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ (ಇಒ), ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಪುರಸಭೆಯ ರಾಜಗಢ ಶಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ದೂರು ದಾಖಲಿಸಲಾಗಿದೆ.

ಈ ಘಟನೆಯ ಬಗ್ಗೆ ಟ್ವೀಟ್​ನಲ್ಲಿ ಟೀಕಿಸಿರುವ ಅಮಿತ್ ಮಾಳವಿಯಾ, ಏಪ್ರಿಲ್ 18ರಂದು ಯಾವುದೇ ಸೂಚನೆ ನೀಡದೆ, ಆಡಳಿತವು ರಾಜಸ್ಥಾನದ ರಾಜ್‌ಗಢ ಪಟ್ಟಣದಲ್ಲಿ 85 ಹಿಂದೂಗಳ ಮನೆಗಳು ಮತ್ತು ಅಂಗಡಿಗಳನ್ನು ಜೆಸಿಬಿಯಿಂದ ಧ್ವಂಸ ಮಾಡಿದೆ ಎಂದು ಆರೋಪಿಸಿದ್ದಾರೆ.

ಆದರೆ, ಬಿಜೆಪಿಯ ಹೇಳಿಕೆ ಸುಳ್ಳು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ. ಬಿಜೆಪಿ ಸದಸ್ಯರಾಗಿರುವ ರಾಜ್‌ಗಢ ನಗರ ಪಾಲಿಕೆಯ ಅಧ್ಯಕ್ಷರು ದೇವಾಲಯಗಳು ಮತ್ತು ಮನೆಗಳನ್ನು ಉರುಳಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಧ್ಯಕ್ಷರ ಆದೇಶದ ಮೇರೆಗೆ ದೇವಾಲಯವನ್ನು ಕೆಡವಲಾಯಿತು ಎಂದು ಖಚರಿಯಾವಾಸ್ ಆರೋಪಿಸಿದರು.

ಆ. 6ರಂದು ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ 86 ಮಂದಿಗೆ ನಗರಸಭೆ ನೋಟಿಸ್‌ ಜಾರಿ ಮಾಡಿತ್ತು. ಅಲ್ವಾರ್‌ನ ರಾಜ್‌ಗಢ್‌ನಲ್ಲಿ ಸ್ಥಳೀಯರು ವಿರೋಧಿಸಿದರೂ ಅಧಿಕಾರಿಗಳು ಮೂರು ದೇವಾಲಯಗಳನ್ನು ಕೆಡವಿದರು. ಈ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಿವ, ಹನುಮಂತ ಮತ್ತು ಇತರ ದೇವತೆಗಳ ವಿಗ್ರಹಗಳು ನಾಶವಾಗಿವೆ. ದೇವಾಲಯದಲ್ಲಿ ಪೂಜೆ ನಡೆಯುತ್ತಿದ್ದಾಗ ಅಧಿಕಾರಿಗಳು ಚಪ್ಪಲಿ ಧರಿಸಿ ವಿಗ್ರಹಗಳ ಬಳಿ ತೆರಳಿ ಕಟರ್ ಮೆಷಿನ್ ಬಳಸಿ ವಿಗ್ರಹಗಳನ್ನು ತೆಗೆಯಲು ಮುಂದಾದರು.

ಈ ಘಟನೆಯ ನಂತರ, ರಾಜ್‌ಗಢ ಶಾಸಕ ಜೋಹ್ರಿ ಲಾಲ್ ಮೀನಾ, ಎಸ್‌ಡಿಎಂ ಕೇಶವ್ ಕುಮಾರ್ ಮೀನಾ ಮತ್ತು ಮುನ್ಸಿಪಲ್ ಇಒ ಬನ್ವಾರಿ ಲಾಲ್ ಮೀನಾ ಅವರು ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಪೊಲೀಸರಿಗೆ ಲಿಖಿತ ದೂರು ನೀಡಿವೆ. ಆದರೆ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಸಂಘಟನೆಗಳ ಸದಸ್ಯರು ರಾಜ್‌ಗಢ್‌ನ ಪೊಲೀಸ್ ಠಾಣೆಯನ್ನು ತಲುಪಿ ಪ್ರತಿಭಟನೆ ನಡೆಸಿದರು ಮತ್ತು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.

ದೆಹಲಿಯ ಜಹಾಂಗೀರ್‌ಪುರಿ ಮತ್ತು ರಾಜಸ್ಥಾನದ ಕರೌಲಿಯಲ್ಲಿ ಕೋಮುಗಲಭೆ ವರದಿಯಾದ ಕೆಲವು ದಿನಗಳ ನಂತರ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು ಕೆಡವಿರುವುದು ಬೆಳಕಿಗೆ ಬಂದಿದೆ. ಜಹಾಂಗೀರ್‌ಪುರಿಯಲ್ಲಿನ ಅಕ್ರಮ ಒತ್ತುವರಿ ಧ್ವಂಸ ಮತ್ತು ರಾಜಕೀಯ ಪಟಾಕಿಗಳ ಕುರಿತು ತೀವ್ರ ಚರ್ಚೆಯ ನಡುವೆ ಇಂದು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಶಿವ ದೇವಾಲಯವನ್ನು ನೆಲಸಮ ಮಾಡಲಾಗಿದೆ. 300 ವರ್ಷಗಳಷ್ಟು ಹಳೆಯದಾದ ದೇವಾಲಯವನ್ನು ಬುಲ್ಡೋಜರ್‌ಗಳನ್ನು ನಿಯೋಜಿಸಿ ಧ್ವಂಸಗೊಳಿಸಲಾಯಿತು. ದೇವರ ವಿಗ್ರಹಗಳನ್ನು ಸ್ಥಳಾಂತರಿಸಲು ಕಟ್ಟರ್‌ಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಹನುಮಾನ್ ದೇವಸ್ಥಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ನೀಡಿದರು

ಗಣೇಶನ ದೇವಸ್ಥಾನದಲ್ಲಿ ದೇವರ ಬಲಗಡೆಯಿಂದ ಹೂವಿನ ಪ್ರಸಾದ ಸಿಕ್ಕು ಆತ್ಮವಿಶ್ವಾಸದಿಂದ ಬೀಗುತ್ತಿದ್ದಾರೆ ಈಶ್ವರಪ್ಪ

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ