ರಾಜ್ಯದಲ್ಲಿ ಏಪ್ರಿಲ್ 1 ರಿಂದ ಎಲ್ಲಾ ಓಪನ್ ಏರ್ ಬಾರ್ಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಮದ್ಯವನ್ನು ಕುಡಿಯಲು ಬಯಸುವವರು ಅದನ್ನು ಮನೆಗೆ ತೆಗೆದುಕೊಂಡು ಹೋಗಬೇಕು, ರಾಜ್ಯದಲ್ಲಿರುವ ಎಲ್ಲಾ ಓಪನ್ ಏರ್ ಬಾರ್ಗಳನ್ನು ಮುಚ್ಚಲು ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿತ್ತು. ಮದ್ಯವನ್ನು ಅಂಗಡಿಯ ಕೌಂಟರ್ಗಳಲ್ಲಿ ಮಾತ್ರ ಖರೀದಿಸಬಹುದು, ಮಾರಾಟ ಮಾಡಬಹುದು. ರಾಜ್ಯದಲ್ಲಿ 2010ರಿಂದ ಯಾವುದೇ ಮದ್ಯದಂಗಡಿಯನ್ನು ಮುಚ್ಚಿರಲಿಲ್ಲ.
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಪರವಾನಗಿಯನ್ನು ರದ್ದುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಂಪುಟ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಶಿಯೋಪುರ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಶಿವರಾಜ್ಸಿಂಗ್ ಚೌಹಾಣ್ ಮಾಹಿತಿ ನೀಡಿದರು.
ನೀವು ಮದ್ಯಪಾನ ಮಾಡಿ, ಅದು ದೇಹದ ಒಳಕ್ಕೆ ಪ್ರವೇಶ ಪಡೆದಾಗ ಪರಿಣಾಮ ಬೀರಲು ಆರಂಭವಾಗುತ್ತದೆ. ಮೊದಲು ಹೊಟ್ಟೆಯೊಳಕ್ಕೆ ಸೇರುವ ಮಧ್ಯ ಗ್ಯಾಸ್ಟ್ರಿಕ್ ಅಂಶವನ್ನು ಸೃಷ್ಟಿಸುತ್ತದೆ. ಬಳಿಕ, ಕರುಳು ಮಧ್ಯವನ್ನು ಹೀರಿಕೊಳ್ಳುತ್ತದೆ. ಆ ಮೂಲಕವಾಗಿ ಲಿವರ್ನ್ನು ಸೇರುತ್ತದೆ.
ಮತ್ತಷ್ಟು ಓದಿ: ಮದ್ಯಪಾನ ಏನು ಪರಿಣಾಮ ಬೀರುತ್ತದೆ? ಕುಡಿದ ಮೇಲೆ ದೇಹದೊಳಗೆ ಏನಾಗುತ್ತದೆ?
ಒಂದು ವರದಿಯ ಪ್ರಕಾರ, ಲಿವರ್ ಬಹುತೇಕ ಮದ್ಯದ ಅಂಶವನ್ನು ಕಡಿಮೆ ಅಥವಾ ನಾಶ ಮಾಡುತ್ತದೆ. ಹಾಗೂ ಲಿವರ್ಗೆ ನಾಶ ಮಾಡಲು ಸಾಧ್ಯವಾಗದೇ ಉಳಿದ ಮದ್ಯದ ಅಂಶವು ಮೆದುಳನ್ನು ತಲುಪುತ್ತದೆ. ಈ ವೇಳೆಗೆ ಮದ್ಯಪಾನವು ದೇಹದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ. ಮದ್ಯವು ಮೆದುಳಿನ ಮೂಲಕ ನರಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದಾಗಿ ಮೆದುಳಿನ ಕಣಗಳ ಕೆಲಸ ನಿಧಾನವಾಗುತ್ತದೆ ಹಾಗೂ ದೇಹದ ಮೇಲೆಯೂ ಪರಿಣಾಮ ಹೆಚ್ಚಾಗುತ್ತದೆ. ದೇಹದ ಮೇಲೆ ಹಿಡಿತವನ್ನೇ ಕಳೆದುಕೊಳ್ಳುವಂತೆಯೂ ಮಾಡುತ್ತದೆ.
ಮದ್ಯಪಾನದಿಂದಾಗಿ ಬಹುತೇಕ ಜನರಿಗೆ ಕಾಡುವ ಸಮಸ್ಯೆ ಎಂದರೆ ಅದು ಲಿವರ್ನದ್ದು. ಹೆಚ್ಚು ಕುಡಿತದ ಅಭ್ಯಾಸ ಹೊಂದಿರುವ ವ್ಯಕ್ತಿಗೆ ಲಿವರ್ ಸಮಸ್ಯೆ ಕಂಡುಬರಬಹುದು. ಹಾಗೆಂದು ಲಿವರ್ ಸಮಸ್ಯೆಯು ನೋವು ಮುಂತಾದ ಸೂಚನೆಗಳ ಮೂಲಕ ತಿಳಿದುಬರುವುದಿಲ್ಲ. ಬದಲಾಗಿ, ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಂಡಾಗ ತಿಳಿದುಬರಬಹುದು. ಹಾಗಾಗಿ, ಅತಿಯಾಗಿ ಮದ್ಯಪಾನ ಸೇವನೆ ಮಾಡುವುದು ಲಿವರ್ ಸಮಸ್ಯೆಗೆ ಕಾರಣವಾಗಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ