ಮದ್ಯಪಾನ ಮಾಡುವಾಗ 2 ವಯಾಗ್ರ ಮಾತ್ರೆ ನುಂಗಿ ವ್ಯಕ್ತಿ ಸಾವು
ಮದ್ಯಪಾನ ಮಾಡುವಾಗ 2 ವಯಾಗ್ರ ಮಾತ್ರೆ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಾಗ್ಪುರದಲ್ಲಿ ವರದಿಯಾಗಿದೆ. ಆ ವ್ಯಕ್ತಿ ಸ್ನೇಹಿತನನ್ನು ಭೇಟಿಯಾಗಲು ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಎಂದು ವೈದ್ಯರು ಹೇಳಿದ್ದಾರೆ.
ಮದ್ಯಪಾನ ಮಾಡುವಾಗ 2 ವಯಾಗ್ರ ಮಾತ್ರೆ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಾಗ್ಪುರದಲ್ಲಿ ವರದಿಯಾಗಿದೆ. ಆ ವ್ಯಕ್ತಿ ಸ್ನೇಹಿತನನ್ನು ಭೇಟಿಯಾಗಲು ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿ ಅವರು ಮದ್ಯಪಾನ ಮಾಡುವಾಗ ಸಿಲ್ಡೆನಾಫಿಲ್ನ ಎರಡು 50 ಎಂಜಿ ಮಾತ್ರಗಳನ್ನು ಸೇವಿಸಿದ್ದಾರೆ. ಈ ಸಂಯೋಜನೆಯನ್ನು ವಯಾಗ್ರ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ವ್ಯಕ್ತಿಗೆ ಯಾವುದೇ ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸೆಯ ಇತಿಹಾಸವಿಲ್ಲ ಎಂಬುದು ತಿಳಿದುಬಂದಿದೆ.
ಮರುದಿನ ಬೆಳಗ್ಗೆಯಷ್ಟೊತ್ತಿಗೆ ಅವರ ಆರೋಗ್ಯ ಹದಗೆಡಲಾರಂಭಿಸಿತ್ತು. ವಾಂತಿ ಶುರುವಾಗಿತ್ತು, ಅವರ ಸ್ನೇಹಿತರು ವೈದ್ಯರನ್ನು ಭೇಟಿ ಮಾಡುವಂತೆ ಕೇಳಿದ್ದರು. ಆದರೆ ಆ ವ್ಯಕ್ತಿ ಆರೋಗ್ಯ ಈ ಮೊದಲು ಹದಗೆಟ್ಟಿತ್ತು ಹೀಗಾಗಿ ಸ್ವಲ್ಪ ಸಮಯದ ಬಳಿಕ ಸರಿ ಹೋಗುತ್ತೆ ಆಸ್ಪತ್ರೆಗೆ ಹೋಗುವುದು ಬೇಡ ಎಂದು ನಿರ್ಧರಿಸಿದ್ದರು.
ಸ್ವಲ್ಪ ಸಮಯದ ನಂತರ, ಅವರ ಸ್ಥಿತಿಯು ತೀರಾ ಹದಗೆಟ್ಟಾಗ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅಧ್ಯಯನದ ಪ್ರಕಾರ, ಈ ವ್ಯಕ್ತಿಯು ಸೆರೆಬ್ರೊವಾಸ್ಕುಲರ್ ಹೆಮರೇಜ್‌ನಿಂದ ಸಾವನ್ನಪ್ಪಿದ್ದಾನೆ, ಇದರಲ್ಲಿ ಮೆದುಳಿಗೆ ಆಮ್ಲಜನಕದ ಪೂರೈಕೆ ನಿಲ್ಲುತ್ತದೆ.
ಮತ್ತಷ್ಟು ಓದಿ: ಇದು ವಿಶ್ವದ ದುಬಾರಿ ವಯಾಗ್ರ; ಹಿಮಾಲಯದಲ್ಲಿ ಸಿಗುವ ಈ ಔಷಧದ ಬೆಲೆ ಕೆಜಿಗೆ 20 ಲಕ್ಷ ರೂಪಾಯಿ
ಮರಣೋತ್ತರ ಪರೀಕ್ಷೆಯಲ್ಲಿ 300mg ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿದೆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ, ವೈದ್ಯರು 300mg ಹೆಪ್ಪುಗಟ್ಟಿದ ರಕ್ತ ಹೆಪ್ಪುಗಟ್ಟುವಿಕೆ ಆಗಿರುವುದು ತಿಳಿದುಬಂದಿತ್ತು.
ಆಲ್ಕೋಹಾಲ್ ಮತ್ತು ಡ್ರಗ್ಸ್ ಮಿಶ್ರಣದಿಂದ ಅಧಿಕ ರಕ್ತದೊತ್ತಡದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುವುದು ಜೀವಕ್ಕೆ ಕುತ್ತುತರಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ