ಮನಸ್ಸು ಮಾತ್ರವಲ್ಲ ಅನೇಕ ಬಾರಿ ದೇಹವನ್ನು ಅರ್ಪಿಸಿದ್ದೆ, ಆದ್ರೂ ಲವ್ ಬ್ರೇಕಪ್ಗೆ ಒಪ್ಪದಿದ್ದಾಗ ಕೊಂದೆ: ತನಿಖೆಯಲ್ಲಿ ಯುವತಿಯ ಸ್ಫೋಟಕ ಸಂಗತಿ ಬಯಲು
ಕೇರಳದ ಪಾರಸಾಲಯಲ್ಲಿ 2022ರ ಅಕ್ಟೋಬರ್ 14ರಂದು ತಾನು ಪ್ರೀತಿಸಿದ ಹುಡುಗನಿಗೆ ವಿಷ ನೀಡಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಯೊಂದನ್ನು ಪೊಲೀಸರು ತಮ್ಮ ಚಾರ್ಜ್ ಶೀಟ್ನಲ್ಲಿ ತಿಳಿಸಿದ್ದಾರೆ.
ತಿರುವನಂತಪುರಂ: ಕೇರಳದ ಪಾರಸಾಲಯಲ್ಲಿ 2022ರ ಅಕ್ಟೋಬರ್ 14ರಂದು ತಾನು ಪ್ರೀತಿಸಿದ ಹುಡುಗನಿಗೆ ವಿಷ ನೀಡಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿಯೊಂದನ್ನು ಪೊಲೀಸರು ತಮ್ಮ ಚಾರ್ಜ್ ಶೀಟ್ನಲ್ಲಿ ತಿಳಿಸಿದ್ದಾರೆ. ಶರೋನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ತನಿಖೆಯನ್ನು ನಡೆಸಿ ಕೋರ್ಟ್ಗೆ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಆಘಾತಕಾರಿ ಮಾಹಿತಿಗಳನ್ನು ನೀಡಿದ್ದಾರೆ. ತಾನು ಪ್ರೀತಿಸಿದ ಹುಡುಗ ಶರೋನ್ ಜತೆಗೆ ಗ್ರೀಷ್ಮಾ ಹಲವಾರು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಗ್ರೀಷ್ಮಾ 2022 ಅಕ್ಟೋಬರ್ 14ರ ಬೆಳಿಗ್ಗೆ ಶರೋನ್ಗೆ ಸೆಕ್ಸ್ ಮಾಡಲು ಮನೆಗೆ ಬರುವಂತೆ ಹೇಳಿ, ವಿಷ ನೀಡಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ನೀಡಿರುವ ಚಾರ್ಜ್ ಶೀಟ್ನಲ್ಲಿ ಹೇಳಲಾಗಿದೆ. ಶರೋನ್ ಸಾಯುವ ಮುನ್ನ ಐಸಿಯುನಲ್ಲಿ ನಡೆದ ಘಟನೆಯ ಬಗ್ಗೆ ತನ್ನ ಮನೆಯವರಿಗೆ ಹೇಳಿದ್ದಾನೆ ಎಂದು ಚಾರ್ಜ್ ಶೀಟ್ನಲ್ಲಿ ಹೇಳಲಾಗಿದೆ
2022 ಅಕ್ಟೋಬರ್ 13ರಂದು ಇಬ್ಬರೂ ಒಂದು ಗಂಟೆ ಏಳು ನಿಮಿಷಗಳ ಕಾಲ ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡಿದ್ದಾರೆ. ಅಕ್ಟೋಬರ್ 14 ರಂದು ಬೆಳಿಗ್ಗೆ ಗ್ರೀಷ್ಮಾ ಲೈಂಗಿಕ ಕ್ರಿಯೆ ನಡೆಸಲು ಬರುವಂತೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ ಎಂದು ತಾನು ಸಾಯುವ ಮುನ್ನ ತನ್ನ ಮನೆಯವರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದ ಔಷಧದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾಳೆ. ನಂತರ ತಮ್ಮ ನಡುವೆ ನಡೆದ ಮೆಸೇಜ್ ಸಂಭಾಷಣೆಗಳನ್ನು ಶರೋನ್ ಸತ್ತ ನಂತರ ಗ್ರೀಷ್ಮಾ ಅಳಿಸಿದ್ದಾಳೆ. ನಂತರ ತಾನು ಡಿಲೀಟ್ ಮಾಡಿದ ಮೆಸೇಜ್ಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಆಕೆ ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಈ ಬಗ್ಗೆ ಹುಡುಕಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬ್ರೇಕ್ ಅಪ್ ಮಾಡಲು ನಿರಾಕರಿಸಿದ್ದಕ್ಕೆ ಪ್ರೀತಿಸಿದ ಹುಡುಗನಿಗೆ ವಿಷ ನೀಡಿದ ಪ್ರೇಯಸಿ
ಗ್ರೀಷ್ಮಾ ಮಾರ್ಚ್ 4ರಂದು ಸೇನೆಯಲ್ಲಿ ಕೆಲಸ ಮಾಡುವ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಂತರ ಗ್ರೀಷ್ಮಾ ಮತ್ತು ಶರೋನ್ ಇಬ್ಬರು ಸಂಬಂಧವನ್ನು ಕಡಿದುಕೊಂಡಿದ್ದಾರೆ. ಆದರೆ, ಮೇ ತಿಂಗಳಿನಿಂದ ಮತ್ತೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ನವೆಂಬರ್‌ನಲ್ಲಿ ಶರೋನ್ ಮತ್ತು ಗ್ರೀಷ್ಮಾ ವೆಟ್ಟುಕಾಡ್ ಚರ್ಚ್‌ನಲ್ಲಿ ವಿವಾಹವಾಗಿದ್ದಾರೆ. ಇದಾದ ಬಳಿಕ ತ್ರಿಪ್ಪರಪುವಿನ ಹೊಟೇಲ್‌ನಲ್ಲಿ ರೂಂ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ.
ಇದನ್ನೂ ಓದಿ: ತನ್ನ ಕಿರಿ ವಯಸ್ಸಿನ ಯುವಕನ ಜತೆ ಸಲಿಂಗ ಸಂಬಂಧ: ಬೆಂಗಳೂರಿನ ಉದ್ಯಮಿ ಜೀವಕ್ಕೆ ಕುತ್ತು ತಂದ ಸಲಿಂಗಕಾಮ
ಆದರೆ ಗ್ರೀಷ್ಮಾಗೆ ಈ ಮೊದಲೇ ಬೇರೊಂದು ಹುಡುಗನ ಜೊತೆಗೆ ನಿಶ್ಚಿತಾರ್ಥವಾಗಿದ್ದು, ಮನೆಯಲ್ಲಿ ಮದುವೆ ತಯಾರಿ ನಡೆಸುತ್ತಿದ್ದಾಗ, ತನ್ನ ಮದುವೆಗೆ ಈತ ತೊಂದರೆ ಆಗುತ್ತಾನೆ ಎಂದು ಶರೋನೆಯನ್ನು ಕೊಲೆ ಮಾಡಲು ನಿರ್ಧಾರಿಸಿದ್ದಾಳೆ. ಆತನಿಗೆ ನೀಡಿದ ವಿಷ ಪ್ಯಾರಸಿಟಮಾಲ್ ಬಗ್ಗೆ ಗೂಗಲ್‌ನಲ್ಲಿ ಹುಡುಕಿದ್ದಾಳೆ ಎಂದು ಹೇಳಲಾಗಿದೆ. ಅಕ್ಟೋಬರ್ 25 ರಂದು ಶರೋನ್ಗೆ ಗ್ರೀಷ್ಮಾ ಜ್ಯೂಸ್ನಲ್ಲಿ ವಿಷ ನೀಡಿ ಕೊಂದಿದ್ದಾಳೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಗ್ರೀಷ್ಮಾ ಇಂದಿಗೂ ಜೈಲಿನಲ್ಲಿದ್ದಾಳೆ.
Published On - 2:09 pm, Tue, 7 March 23