ಗೋಹತ್ಯೆ ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ: ಗುಜರಾತ್ ಕೋರ್ಟ್

ಗೋವಿನ ಸಗಣಿಯಿಂದ ಮಾಡಿದ ಮನೆಗಳು ಪರಮಾಣು ವಿಕಿರಣದಿಂದ ಪ್ರಭಾವಿತವಾಗಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಗೋಮೂತ್ರದ ಬಳಕೆಯು ಅನೇಕ ಗುಣಪಡಿಸಲಾಗದ ಕಾಯಿಲೆಗಳಿಗೆ ಪರಿಹಾರವಾಗಿದೆ ಎಂದ ನ್ಯಾಯಾಧೀಶರು ಗೋವಿನಿಂದ ಧರ್ಮ ಹುಟ್ಟುತ್ತದೆ ಎಂದಿದ್ದಾರೆ

ಗೋಹತ್ಯೆ ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ: ಗುಜರಾತ್ ಕೋರ್ಟ್
ಗೋವು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 22, 2023 | 9:42 PM

ದೆಹಲಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ (transporting cattle) ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಗುಜರಾತ್‌ನ ನ್ಯಾಯಾಲಯವು (Gujarat Court) ಗೋಹತ್ಯೆಯ (cow slaughter) ಕುರಿತು ಕೆಲವು ಕುತೂಹಲಕಾರಿ ಅವಲೋಕನಗಳನ್ನು ಮಾಡಿದೆ. “ಗೋಹತ್ಯೆ ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ” ಎಂದು ತಾಪಿ ಜಿಲ್ಲಾ ನ್ಯಾಯಾಲಯದ ಪ್ರಿನ್ಸಿಪಲ್ ಡಿಸ್ಟ್ರಿಕ್ ಜಡ್ಜ್ ಸಮೀರ್ ವಿನೋದಚಂದ್ರ ವ್ಯಾಸ್ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ. ಸಮೀರ್ ವಿನೋದಚಂದ್ರ ವ್ಯಾಸ್ ಅವರು “ಹಸುವಿನ ಸಗಣಿಯಿಂದ ಮಾಡಿದ ಮನೆಗಳು  ವಿಕಿರಣದಿಂದ ಪ್ರಭಾವಿತವಾಗುವುದಿಲ್ಲ” ಮತ್ತು ಗೋಮೂತ್ರ ಬಳಕೆಯು “ಅನೇಕ ಗುಣಪಡಿಸಲಾಗದ ರೋಗಗಳಿಗೆ ಚಿಕಿತ್ಸೆ” ಎಂದು ಹೇಳಿದರು. “ಗೋವಿನ ಸಗಣಿಯಿಂದ ಮಾಡಿದ ಮನೆಗಳು ಪರಮಾಣು ವಿಕಿರಣದಿಂದ ಪ್ರಭಾವಿತವಾಗಿಲ್ಲ ಎಂದು ವಿಜ್ಞಾನವು ಸಾಬೀತುಪಡಿಸಿದೆ. ಗೋಮೂತ್ರದ ಬಳಕೆಯು ಅನೇಕ ಗುಣಪಡಿಸಲಾಗದ ಕಾಯಿಲೆಗಳಿಗೆ ಪರಿಹಾರವಾಗಿದೆ ಎಂದ ನ್ಯಾಯಾಧೀಶರು ಗೋವಿನಿಂದ ಧರ್ಮ ಹುಟ್ಟುತ್ತದೆ ಎಂದಿದ್ದಾರೆ.

ಅಂದಹಾಗೆ  ನ್ಯಾಯಾಧೀಶರ ಈ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

ನವೆಂಬರ್‌ನಲ್ಲಿ ಅಂಗೀಕರಿಸಿದ ಆದೇಶವು ಗೋಸಂರಕ್ಷಣೆಯ ಸುತ್ತಲಿನ ಎಲ್ಲಾ ಚರ್ಚೆಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಗೋವು ಕೇವಲ ಪ್ರಾಣಿ ಮಾತ್ರವಲ್ಲ ತಾಯಿ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳ ಜೀವಂತ ಗ್ರಹವಾಗಿದೆ. ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಬಾಧ್ಯತೆ ವಿವರಣೆಯನ್ನು ನಿರಾಕರಿಸುತ್ತದೆ. ನ್ಯಾಯಾಲಯವು ವಿವಿಧ ಶ್ಲೋಕಗಳನ್ನು ಉಲ್ಲೇಖಿಸಿದ್ದು “ಗೋವುಗಳನ್ನು ಅತೃಪ್ತಿಗೊಳಿಸಿದರೆ ನಮ್ಮ ಸಂಪತ್ತು ಮತ್ತು ಆಸ್ತಿ ಕಣ್ಮರೆಯಾಗುತ್ತದೆ” ಎಂದು ಹೇಳಿದೆ.

ನ್ಯಾಯಾಧೀಶರು ಗೋಹತ್ಯೆಗೂ ಹವಾಮಾನ ಬದಲಾವಣೆಗೂ ಸಂಬಂಧ ಕಲ್ಪಿಸಿದ್ದಾರೆ. ಇಂದು ಅಸ್ತಿತ್ವದಲ್ಲಿರುವ ಸಮಸ್ಯೆಗಳು ಸಿಡುಕುತನ ಮತ್ತು ಕೋಪದ ಹೆಚ್ಚಳದಿಂದ ಉಂಟಾಗಿವೆ. ಹೆಚ್ಚಳಕ್ಕೆ ಏಕೈಕ ಕಾರಣವೆಂದರೆ ಗೋಹತ್ಯೆ. ಇದನ್ನು ಸಂಪೂರ್ಣವಾಗಿ ನಿಷೇಧಿಸುವವರೆಗೆ ಸಾತ್ವಿಕ ಹವಾಮಾನ ಬದಲಾವಣೆಯು ಅದರ ಪರಿಣಾಮವನ್ನು ಬೀರುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ 16 ಕ್ಕೂ ಹೆಚ್ಚು ಹಸುಗಳನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಈ ವ್ಯಕ್ತಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ₹ 5 ಲಕ್ಷ ದಂಡವನ್ನೂ ವಿಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:37 pm, Sun, 22 January 23

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ