ಬೆಂಗಳೂರು: ವಾಯು ಸಾರಿಗೆಯಲ್ಲೂ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಮಹಿಳಾ ಪೈಲಟ್ ಮತ್ತು ಸಿಬ್ಬಂದಿ ಇದ್ದ ವಿಮಾನ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಏರ್ಇಂಡಿಯಾ 176 ಬೋಯಿಂಗ್ 777/200 LR ಫ್ಲೈಟ್ನಲ್ಲಿ ನಾಲ್ವರು ಮಹಿಳಾ ಪೈಲಟ್ ಮತ್ತು 12 ಗಗನಸಕಿಯರಿದ್ದರು. 13,993 ಕಿ.ಮೀ. ದೂರವನ್ನು 17 ಗಂಟೆಗಳ ನಿರಂತರ ಪ್ರಯಾಣ ಮಾಡಿ ಸದ್ಯ ಈಗ ಕೆಐಎಗೆ ಆಗಮಿಸಿದ್ದಾರೆ. 238 ಆಸನಗಳನ್ನೊಳಗೊಂಡ ನೂತನ ವಿಮಾನ ಇದಾಗಿದೆ. ಇನ್ನು ಮುಂದೆ ಈ ವಿಮಾನ ಸ್ಯಾನ್ ಪ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ವಾರದಲ್ಲಿ 2 ದಿನ ಪ್ರಯಾಣ ಬೆಳೆಸಲಿದೆ.
ಮಹಿಳಾ ಪೈಲಟ್ಗಳಿಗೆ ಏರ್ಪೋರ್ಟ್ ಸಿಬ್ಬಂದಿ ಸ್ವಾಗತ
ಮಹಿಳಾ ಪೈಲಟ್ಗಳಾದ ಜೋಯ ಅಗರ್ವಾಲ್, ಪಾಪಗರಿತನ್ಮಯ್, ಆಕಾಂಶ ಸೋನವೇರ್, ಶಿವಾನಿ ಮನ್ಹಾಸ್ರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಪ್ರಯಾಣಿಕರು, ಏರ್ಪೋಟ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಹೂಗುಚ್ಚ ನೀಡುವ ಮೂಲಕ ಬೆಂಗಳೂರಿಗೆ ಸ್ವಾಗತಿಸಿದ್ರು.