ದೆಹಲಿ: ಪತ್ರಕರ್ತೆ ರಾಣಾ ಅಯೂಬ್ (Rana Ayyub)ಅವರ ಮೇಲಿನ ನ್ಯಾಯಾಂಗ ಕಿರುಕುಳದ ಆರೋಪಗಳು “ಆಧಾರರಹಿತ ಮತ್ತು ಅನಪೇಕ್ಷಿತ” ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆಯ (United Nations )ತಜ್ಞರು, ಆಕೆಯ ಮೇಲೆ ನಡೆಯುತ್ತಿರುವ ನಿರ್ದಿಷ್ಟ ಸ್ತ್ರೀದ್ವೇಷ ಮತ್ತು ಪಂಥೀಯ ದಾಳಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಕರೆ ನೀಡಿದ್ದರು. ನ್ಯಾಯಾಂಗ ಕಿರುಕುಳ ಎಂದು ಕರೆಯಲ್ಪಡುವ ಆರೋಪಗಳು ಆಧಾರರಹಿತ ಮತ್ತು ಅನಗತ್ಯ. ಭಾರತವು ಕಾನೂನಿನ ನಿಯಮವನ್ನು ಎತ್ತಿಹಿಡಿಯುತ್ತದೆ, ಆದರೆ ಯಾರೂ ಕಾನೂನಿಗಿಂತ ಮೇಲಲ್ಲ ಎಂಬುದು ಅಷ್ಟೇ ಸ್ಪಷ್ಟ. ವಿಶೇಷ ತಜ್ಞರು ವಸ್ತುನಿಷ್ಠ ಮತ್ತು ನಿಖರವಾಗಿ ತಿಳಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ತಪ್ಪುದಾರಿಗೆಳೆಯುವ ನಿರೂಪಣೆಯನ್ನು ಮುಂದುವರಿಸುವುದು ವಿಶ್ವಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುತ್ತದೆ ಎಂದು ಯುಎನ್ ಮಾನವ ಹಕ್ಕುಗಳ ವೆಬ್‌ಸೈಟ್‌ನಲ್ಲಿ ಪ್ರಕಟವಾದ ತಜ್ಞರ ಅಭಿಪ್ರಾಯದ ಕುರಿತು ಯುಎನ್ ಟ್ವೀಟ್‌ಗೆ ಭಾರತ ಪ್ರತಿಕ್ರಿಯಿಸಿದೆ. ವಿಶೇಷ ರಾಪಟರ್ಸ್ ಮತ್ತು ಸ್ವತಂತ್ರ ತಜ್ಞರು ಮಾನವ ಹಕ್ಕುಗಳ ಮಂಡಳಿಯ ವಿಶೇಷ ಕಾರ್ಯವಿಧಾನಗಳು ಎಂದು ಕರೆಯಲ್ಪಡುವುದರ ಭಾಗವಾಗಿದ್ದಾರೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ವ್ಯವಸ್ಥೆಯಲ್ಲಿ ಸ್ವತಂತ್ರ ತಜ್ಞರ ಅತಿದೊಡ್ಡ ಸಂಸ್ಥೆ, ಅವರು ಕೌನ್ಸಿಲ್‌ನ ಸ್ವತಂತ್ರ ಸತ್ಯಶೋಧನೆ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳ ಭಾಗವಾಗಿದ್ದಾರೆ.
Allegations of so-called judicial harassment are baseless & unwarranted. India upholds the rule of law, but is equally clear that no one is above the law.
We expect SRs to be objective & accurately informed. Advancing a misleading narrative only tarnishes @UNGeneva’s reputation https://t.co/3OyHq4HncD— India at UN, Geneva (@IndiaUNGeneva) February 21, 2022
ದೇಶದಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ವರದಿ ಮಾಡಿದ ಪರಿಣಾಮವಾಗಿ ದಾಳಿಗಳು, ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸರ್ಕಾರವನ್ನು ಟೀಕಿಸುವುದು ಮತ್ತು ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗಳ ಇತ್ತೀಚಿನ ನಿಷೇಧದ ಕುರಿತು ಅವರ ಕಾಮೆಂಟ್‌ಗಳ ಪರಿಣಾಮವಾಗಿ ದಾಳಿಗಳನ್ನು ತಜ್ಞರು ಸೂಚಿಸಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
ಅಯೂಬ್ ಅವರು ಹಲವಾರು ವರ್ಷಗಳಿಂದ ತನ್ನ ವರದಿಗೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳಿಂದ ಕಾನೂನು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಯುಎನ್ ತಜ್ಞರು ಹೇಳಿದ್ದಾರೆ. ಅವರ ಬ್ಯಾಂಕ್ ಖಾತೆ ಮತ್ತು ಇತರ ಆಸ್ತಿಗಳನ್ನು ಸ್ಥಗಿತಗೊಳಿಸಿರುವುದನ್ನು ಉಲ್ಲೇಖಿಸಿದ್ದು ಅಕ್ರಮ ಹಣ ವ್ಯವಹಾರ ಮತ್ತು ತೆರಿಗೆ ವಂಚನೆಯ ಮೇಲ್ನೋಟಕ್ಕೆ ಆಧಾರರಹಿತ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಸಾಂಕ್ರಾಮಿಕ ರೋಗದಿಂದ ಪೀಡಿತರಿಗೆ ಸಹಾಯವನ್ನು ಒದಗಿಸಲು ಕ್ರೌಡ್-ಫಂಡಿಂಗ್ ಅಭಿಯಾನಗಳಿಗೆ ಸಂಬಂಧಿಸಿದ್ದಾಗಿದೆ. ಸುಳ್ಳು ಆರೋಪಗಳನ್ನು ಬಲಪಂಥೀಯ ಸಾಮಾಜಿಕ ಮಾಧ್ಯಮ ಗುಂಪಿನಿಂದ ಗುರುತಿಸಬಹುದು.
“ಹಿಂದೂ ಐಟಿ ಸೆಲ್” ಎಂಬ ಎನ್‌ಜಿಒ ಸಂಸ್ಥಾಪಕ ಮತ್ತು ಗಾಜಿಯಾಬಾದ್‌ನ ಇಂದಿರಾಪುರಂನ ನಿವಾಸಿ ವಿಕಾಸ್ ಸಾಂಕೃತ್ಯಾಯನ್ ಅವರ ದೂರಿನ ಮೇರೆಗೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿ ಅಯೂಬ್ ವಿರುದ್ಧ ಅಕ್ರಮ ಹಣ ವ್ಯವಹಾರದ ಪ್ರಕರಣವನ್ನು ಮಾಡಲಾಗಿದೆ.
2020 ಮತ್ತು 2021ರ ನಡುವೆ ಚಾರಿಟಬಲ್ ಉದ್ದೇಶಗಳಿಗಾಗಿ ಕೆಟ್ಟೊ ಎಂಬ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪತ್ರಕರ್ತೆ ₹ 2.69 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಯದ ಮೂಲಗಳು ಆರೋಪಿಸಿದ ದಾಖಲೆಯ ಪ್ರಕಾರ ಸಂಸ್ಥೆಯು ಕಂಡುಹಿಡಿದಿದೆ. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು, ಸಂಸ್ಥೆಯು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ 1.77 ಕೋಟಿ ರೂ. ಸ್ಥಗಿತ ಮಾಡಿತ್ತು.
ಅಯೂಬ್ ಆರೋಪಗಳನ್ನು ತಳ್ಳಿಹಾಕಿದ್ದು ಇದು ಕಳಂಕಗೊಳಿಸುವ ಅಭಿಯಾನ ಎಂದು ಕರೆದಿದ್ದಾರೆ. ನನ್ನ ವಿರುದ್ಧ ಹೊರಿಸಲಾದ ಆರೋಪಗಳು ಯಾವುದೇ ನ್ಯಾಯಯುತ ಮತ್ತು ಪ್ರಾಮಾಣಿಕ ಪರಿಶೀಲನೆಯನ್ನು ತಡೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Published On - 10:25 am, Tue, 22 February 22