ದೆಹಲಿ: ಭ್ರಷ್ಟಾಚಾರ ಆರೋಪ (corruption case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ (Arvind Mayaram) ಅವರ ನಿವಾಸವನ್ನು ಕೇಂದ್ರ ತನಿಖಾ ದಳ (CBI) ಶೋಧಿಸುತ್ತಿದೆ. ಮಾಯಾರಾಮ್ ಹಣಕಾಸು ಕಾರ್ಯದರ್ಶಿಯಾಗಿದ್ದಾಗ ಕರೆನ್ಸಿ ಮುದ್ರಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮತ್ತು ಜೈಪುರದಲ್ಲಿ ದಾಳಿ ನಡೆಸಲಾಗುತ್ತಿದೆ. ಮಾಯಾರಾಮ್ ಜೊತೆಗೆ ಕೆಲವು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಅಧಿಕಾರಿಗಳನ್ನೂ ತನಿಖೆ ನಡೆಸಲಾಗುತ್ತಿದೆ. ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಅರವಿಂದ್ ಮಾಯಾರಾಮ್ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಮಾಯಾರಾಮ್ ಮತ್ತು ಅವರ ಪತ್ನಿ ಶೈಲ್ ರಾಹುಲ್ ಗಾಂಧಿಯೊಂದಿಗೆ ಕೈ ಕೈ ಹಿಡಿದು ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು
ಸದ್ಯಕ್ಕೆ ಈ ಬಗ್ಗೆ ಸಿಬಿಐ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದುವರೆಗೆ ಯಾರ ಬಂಧನವೂ ಆಗಿಲ್ಲ.
ಮಾಯಾರಾಮ್ ಅವರು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾಗ ಕರೆನ್ಸಿ ಮುದ್ರಣ ಪ್ರಕರಣದಲ್ಲಿ ಹಣಕಾಸು ಅಕ್ರಮಗಳ ಆರೋಪ ಎದುರಿಸುತ್ತಿದ್ದಾರೆ. ಮಾಯಾರಾಮ್ ಅವರು ಐದು ವರ್ಷಗಳ ಅವಧಿಗೆ ಭಾರತೀಯ ಬ್ಯಾಂಕ್ ನೋಟುಗಳಿಗೆ ಸೆಕ್ಯುರಿಟಿ ಥ್ರೆಡ್ ಪೂರೈಕೆಗಾಗಿ ಬ್ರಿಟಿಷ್-ಸಂಸ್ಥೆ ಡೆಲಾರೂಗೆ ಅಕ್ರಮ ವಿಸ್ತರಣೆಯನ್ನು ನೀಡಿದರು. ಬ್ರಿಟಿಷ್ ಸಂಸ್ಥೆಗೆ ಒದಗಿಸಿದ ಅನಪೇಕ್ಷಿತ ಸಹಾಯವು ಭಾರತೀಯ ಖಜಾನೆಗೆ ನಷ್ಟವನ್ನುಂಟುಮಾಡಿತು ಎಂದು ಆರೋಪಿಸಲಾಗಿದೆ
Published On - 6:24 pm, Thu, 12 January 23