ವಿಮಾನಯಾನ ಸಂಸ್ಥೆಯಿಂದ ಎಚ್ಚರಿಕೆ; ಮುಷ್ಕರ ಕೈಬಿಟ್ಟ ಅಲಯನ್ಸ್ ಏರ್ ಪೈಲಟ್‌ಗಳು
ಪೈಲಟ್‌ಗಳ ಈ ವರ್ತನೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಕಂಪನಿಯ ಆದಾಯದಲ್ಲಿ ಕುಸಿತಕ್ಕೆ ಕಾರಣವಾಯಿತು ಎಂದು ಏರ್‌ಲೈನ್ಸ್ ಹೇಳಿದೆ.
ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಅಲಯನ್ಸ್ ಏರ್ (Alliance Air) ಪೈಲಟ್‌ಗಳು ತಮ್ಮ ಮುಷ್ಕರವನ್ನು (strike) ಹಿಂತೆಗೆದುಕೊಂಡಿದ್ದಾರೆ. ವಿಮಾನಯಾನ ಸಂಸ್ಥೆಯು ಮುಷ್ಕರ ನಿರತ ಸಿಬ್ಬಂದಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದು 24 ಗಂಟೆಗಳ ಒಳಗೆ ಕೆಲಸಕ್ಕೆ ವರದಿ ಮಾಡುವಂತೆ ಕೇಳಿಕೊಂಡ ನಂತರ ಅವರು ಕೆಲಸವನ್ನು ಪುನರಾರಂಭಿಸಿದರು. ಭತ್ಯೆಗಳನ್ನು ಪಾವತಿಸಲು ಮತ್ತು ವೇತನವನ್ನು ತಮ್ಮ ಕೋವಿಡ್-ಪೂರ್ವ ಮಟ್ಟಕ್ಕೆ ಮರುಸ್ಥಾಪಿಸಲು ವಿಫಲವಾದುದನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಒಟ್ಟು 70 ರಿಂದ 80 ಪೈಲಟ್‌ಗಳು ಮುಷ್ಕರದಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಇದು ಮಂಗಳವಾರ ಸುಮಾರು 70 ಅಲಯನ್ಸ್ ಏರ್ ವಿಮಾನಗಳ ಮೇಲೆ ಪರಿಣಾಮ ಬೀರಿತು.
ಪೈಲಟ್‌ಗಳ ಒಪ್ಪಂದಗಳನ್ನು ಮರುಸಂಧಾನ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಆದರೆ ಅವರಲ್ಲಿ ಕೆಲವರು ವಿಮಾನಯಾನ ಸಂಸ್ಥೆಗೆ ಯಾವುದೇ ಪೂರ್ವ ಸೂಚನೆ ನೀಡದೆ ಮುಷ್ಕರಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಲಾಜಿಸ್ಟಿಕ್ ಸರಪಳಿಯಲ್ಲಿನ ಅನಿರೀಕ್ಷಿತ ಅಡ್ಡಿಯು ಉದ್ಯಮದಲ್ಲಿ ಬಿಡಿಭಾಗಗಳ ಸಕಾಲಿಕ ಲಭ್ಯತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಸುರಕ್ಷತೆಯ ಕಾರಣಗಳಿಂದ ವಿಮಾನವನ್ನು ಹಾರಿಸಲು ವಿಮಾನಯಾನವನ್ನು ನಿರ್ಬಂಧಿಸುತ್ತದೆ ಮತ್ತು ಯಾವುದೇ ಪೂರ್ವ ಸೂಚನೆಯನ್ನು ನೀಡದೆ ಸಾಮೂಹಿಕವಾಗಿ ಪೈಲಟ್‌ಗಳ ವಿಭಾಗವು ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ 24 ಮಾರ್ಗಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪೈಲಟ್‌ಗಳ ಈ ವರ್ತನೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ಕಂಪನಿಯ ಆದಾಯದಲ್ಲಿ ಕುಸಿತಕ್ಕೆ ಕಾರಣವಾಯಿತು ಎಂದು ಏರ್‌ಲೈನ್ಸ್ ಹೇಳಿದೆ.
ಇದನ್ನೂ ಓದಿ: Bomb Threat To Delhi School: ಶಾಲೆಯ ಆವರಣದಲ್ಲಿ ಬಾಂಬ್ ಇಟ್ಟಿದ್ದೇವೆ ಎಂಬ ಬೆದರಿಕೆಯ ಇ-ಮೇಲ್: ಮಕ್ಕಳ ಸ್ಥಳಾಂತರ
ಮುಂದಿನ 24 ಗಂಟೆಗಳಲ್ಲಿ ಪೈಲಟ್‌ಗಳು ಕೆಲಸಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದ್ದರೂ, ಬುಧವಾರವೂ ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Wed, 12 April 23