ಪುಣೆ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರಿಗೆ ಬೆಂಕಿ; ರಜೆಯಲ್ಲಿದ್ದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ

ಕಾರಿಗೆ ಬೆಂಕಿ ಹತ್ತಿಕೊಂಡಿದ್ದರ ಅರಿವಿಲ್ಲದ ಚಾಲಕ ಸುಮಾರು 1.5 ಕಿಲೋಮೀಟರ್ ವರೆಗೆ ಕಾರು ಚಲಾಯಿಸುತ್ತಲೇ ಇದ್ದ. ನಂತರ ದಾರಿಹೋಕರು ಆತನನ್ನು ಎಚ್ಚರಿಸಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು.

ಪುಣೆ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರಿಗೆ ಬೆಂಕಿ; ರಜೆಯಲ್ಲಿದ್ದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ
ಬಿಎಂಡಬ್ಲ್ಯು ಕಾರಿಗೆ ಬೆಂಕಿ ಹತ್ತಿಕೊಂಡಿರುವುದು
Follow us
ರಶ್ಮಿ ಕಲ್ಲಕಟ್ಟ
|

Updated on:Apr 12, 2023 | 3:18 PM

ಪುಣೆ: ಚಲಿಸುತ್ತಿದ್ದ ಬಿಎಂಡಬ್ಲ್ಯು(BMW) ಕಾರಿಗೆ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಘಟನೆ ಪುಣೆಯ(Pune) ಉಂಡ್ರಿ ಪ್ರದೇಶದಲ್ಲಿ ನಡೆದಿದೆ. ರಜೆಯಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ರಕ್ಷಣೆಗೆ ಬಂದು ಸಮೀಪದ ಪೆಟ್ರೋಲ್ ಪಂಪ್‌ನಲ್ಲಿದ್ದ ಅಗ್ನಿಶಾಮಕ ಯಂತ್ರವನ್ನು ಬಳಸಿ ಬೆಂಕಿ ನಿಯಂತ್ರಿಸಿದ್ದಾರೆ. ಬೆಂಕಿಯ ತೀವ್ರತೆ ಕ್ರಮೇಣ ಹೆಚ್ಚಿ ಇದ್ದು ಪುಣೆ ರಸ್ತೆಯಲ್ಲಿಯೂ ಬೆಂಕಿ ಆವರಿಸಿದೆ. ಕಾರಿಗೆ ಬೆಂಕಿ ಹತ್ತಿಕೊಂಡಿದ್ದರ ಅರಿವಿಲ್ಲದ ಚಾಲಕ ಸುಮಾರು 1.5 ಕಿಲೋಮೀಟರ್ ವರೆಗೆ ಕಾರು ಚಲಾಯಿಸುತ್ತಲೇ ಇದ್ದ. ನಂತರ ದಾರಿಹೋಕರು ಆತನನ್ನು ಎಚ್ಚರಿಸಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು.ಆಗ ಅಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಹರ್ಷ ಯೆವಳೆ ಸಮೀಪದ ಪೆಟ್ರೋಲ್ ಪಂಪ್‌ನಿಂದ ಅಗ್ನಿಶಾಮಕ ಯಂತ್ರವನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತಂದರು. ನಂತರ ಕೊಂಡ್ವಾ ಬುದ್ರುಕ್ ಅಗ್ನಿಶಾಮಕ ದಳದ ಸಿಬ್ಬಂದಿ ನೆರವು ನೀಡಿದ್ದು ಅವರು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.

ಕಾರಿಗೆ ಭಾರೀ ಹಾನಿಯಾಗಿದ್ದರೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿಎಂಡಬ್ಲ್ಯು ಇಂಧನ ಟ್ಯಾಂಕ್ ಸೋರಿಕೆಯೇ ಬೆಂಕಿಗೆ ಕಾರಣ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪುಣೆ ಮುನ್ಸಿಪಲ್ ಕಾರ್ಪೊರೇಷನ್‌ನ ಅಗ್ನಿಶಾಮಕ ದಳದ ಹರ್ಷ ಯೆವಳೆ,ಮೊದಲು ಬೆಂಕಿಯ ತೀವ್ರತೆ ಕಡಿಮೆಯಾಗಿತ್ತು ಆದರೆ ನಂತರ ನಿಧಾನವಾಗಿ ಬೆಂಕಿ ಹೆಚ್ಚಾಯಿತು. ಇಡೀ ಬಿಎಂಡಬ್ಲ್ಯು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬಿಎಂಡಬ್ಲ್ಯು ಇಂಧನ ಟ್ಯಾಂಕ್ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿದೆ. ಘಟನೆಯ ಅರಿವಿಲ್ಲದೆ ಕಾರಿನಲ್ಲಿದ್ದ ಚಾಲಕ ಕಾರಿಗೆ ಬೆಂಕಿ ಹೊತ್ತಿಕೊಂಡ ನಂತರ ಸುಮಾರು ಒಂದೂವರೆ ಕಿಲೋಮೀಟರ್ ಓಡಿಸಿದ್ದಾನೆ. ಚಾಲಕನಿಗೆ ಮಾಹಿತಿ ನೀಡಿದ ನಂತರವೇ ಆತ ಕಾರು ನಿಲ್ಲಿಸಿದ್ದು.

ಇದನ್ನೂ ಓದಿ: Vande Bharat Express: ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಮೊದಲು ಅಗ್ನಿಶಾಮಕ ಯಂತ್ರವನ್ನು ಬಳಸಿ ಅಗ್ನಿಶಾಮಕ ಟೆಂಡರ್ ಬರುವವರೆಗೆ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದೆ. ಆದರೆ ಭಾರೀ ಪ್ರಮಾಣದ ಬೆಂಕಿಯಿಂದಾಗಿ ಅದು ಕಷ್ಟವಾಗಿತ್ತು. ನಂತರ ಅಗ್ನಿಶಾಮಕದಳದವರು ಬಂದು ಬೆಂಕಿ ನಂದಿಸಿದ್ದಾರೆ ಎಂದು ಯೆವಳೆ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Wed, 12 April 23