ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಐತಿಹಾಸಿಕ ಹೆಜ್ಜೆ: ರಾಹುಲ್, ನಿತೀಶ್ ಮಹತ್ವದ ಭೇಟಿ
ಕಾಂಗ್ರೆಸ್ ಪಕ್ಷ ಇತರ ಪಕ್ಷಗಳ ಜತೆಗೆ ಸೇರಿ ಮುಂದಿನ ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹಲವಾರು ಕಾರ್ಯತಂತ್ರಗಳನ್ನು ಮಾಡುತ್ತಿದೆ.

ದೆಹಲಿ: 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರತಿಪಕ್ಷಗಳು ಒಗ್ಗಟಿನ ಶಕ್ತಿ ಪ್ರದರ್ಶನ ಮಾಡಿದೆ. ಕಾಂಗ್ರೆಸ್ ಪಕ್ಷ ಇತರ ಪಕ್ಷಗಳ ಜತೆಗೆ ಸೇರಿ ಮುಂದಿನ ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಹಲವಾರು ಕಾರ್ಯತಂತ್ರಗಳನ್ನು ಮಾಡುತ್ತಿದೆ. ಕಾಂಗ್ರೆಸ್, ಜನತಾ ದಳ (ಯುನೈಟೆಡ್) (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ದ ಪ್ರಮುಖ ನಾಯಕರು ಇಂದು ದೆಹಲಿಯಲ್ಲಿ ಭೇಟಿಯಾದರು. ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಲು ತಯಾರಿ ನಡೆಸಿದಂತಿದೆ ಈ ಭೇಟಿ.
ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಬಿಹಾರದ ಉಪಮುಖ್ಯಮಂತ್ರಿ, ಆರ್‌ಜೆಡಿ ಅಧ್ಯಕ್ಷ ತೇಜಸ್ವಿ ಯಾದವ್ ಉಪಸ್ಥಿತರಿದ್ದರು. ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಮತ್ತು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.
#WATCH | “We will try to unite as many political parties as we can and move forward together,” says Bihar CM Nitish Kumar pic.twitter.com/Qfa5LRPxYU
— ANI (@ANI) April 12, 2023
ಇದನ್ನೂ ಓದಿ: ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಇಂದು ಕೇಜ್ರಿವಾಲ್, ಶರದ್ ಪವಾರ್ ಜೊತೆ ಸಿಎಂ ನಿತೀಶ್ ಕುಮಾರ್ ಭೇಟಿ
ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಗ್ಗಟ್ಟಿಗಾಗಿ ವಿರೋಧ ಪಕ್ಷಗಳು “ಐತಿಹಾಸಿಕ ಹೆಜ್ಜೆ” ಇಡಲಾಗಿದೆ ಎಂದು ಹೇಳಿದರು. ನಮ್ಮ ಜತೆಗೆ ದೇಶದ ಬೇರೆ ಬೇರೆ ನಾಯಕರು ಕೈಜೋಡಿಸಲಿದ್ದಾರೆ. ಈ ಬೆಳವಣಿಗೆ ದೇಶದ ಪ್ರತಿಪಕ್ಷಗಳ ದೃಷ್ಟಿಕೋನವನ್ನು ಬದಲಾವಣೆಗೊಳಿಸಿದೆ ಎಂದು ಹೇಳಿದರು.
Published On - 3:15 pm, Wed, 12 April 23