AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarinder Singh: ಕುತೂಹಲ ಕೆರಳಿಸಿದ ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್- ಅಮಿತ್ ಶಾ ಭೇಟಿ

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಅಮರೀಂದರ್ ಸಿಂಗ್ ಮತ್ತು ಅಮಿತ್ ಶಾ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

Amarinder Singh: ಕುತೂಹಲ ಕೆರಳಿಸಿದ ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್- ಅಮಿತ್ ಶಾ ಭೇಟಿ
ಅಮರಿಂದರ್ ಸಿಂಗ್​
TV9 Web
| Updated By: ಸುಷ್ಮಾ ಚಕ್ರೆ|

Updated on:Oct 28, 2021 | 12:54 PM

Share

ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Amarinder Singh) ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೃಷಿ ತಜ್ಞರ ಜೊತೆ ಅಮರೀಂದರ್ ಸಿಂಗ್ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ಉತ್ತರ ರಾಜ್ಯದ ರೈತರು ಕೃಷಿ ಕಾಯ್ದೆಯ (Agriculture Act) ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಿದರೆ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ಅಮರೀಂದರ್ ಸಿಂಗ್ ಮತ್ತು ಅಮಿತ್ ಶಾ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.

ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅಮರೀಂದರ್ ಸಿಂಗ್ ಪಂಜಾಬ್​ನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸುವ ಬಗ್ಗೆ ಮತ್ತು ಅಮಿತ್ ಶಾ ಅವರೊಂದಿಗಿನ ಭೇಟಿಯ ಬಗ್ಗೆ ಘೋಷಿಸಿದರು. ನಾನು ಪಂಜಾಬ್‌ನ ಮುಖ್ಯಮಂತ್ರಿಯಾಗಿರುವುದರಿಂದ ಮತ್ತು ಕೃಷಿಕನಾಗಿರುವುದರಿಂದ ರೈತರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ನನ್ನಿಂದ ಸಹಾಯವಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅಮರೀಂದರ್ ಸಿಂಗ್ ನಿನ್ನೆ ಹೇಳಿದ್ದಾರೆ. ಹಾಗೇ, ರಾಷ್ಟ್ರದ ಹಿತಾಸಕ್ತಿಗೆ ಆದ್ಯತೆ ನೀಡುವ ಯಾರೊಂದಿಗಾದರೂ ನಮ್ಮ ಹೊಸ ಪಕ್ಷ ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು.

ಅಮರೀಂದರ್ ಸಿಂಗ್ ಇನ್ನೂ ತಮ್ಮ ಹೊಸ ಪಕ್ಷದ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ‘ಸಮಯ ಬಂದಾಗ ನಾವು ಎಲ್ಲಾ 117 ಸ್ಥಾನಗಳಲ್ಲಿ ಹೋರಾಡುತ್ತೇವೆ, ನಾವು ಬೇರೆ ಪಕ್ಷದೊಂದಿಗಿನ ಮೈತ್ರಿಯಲ್ಲಿ ಹೋರಾಡುತ್ತೇವೆಯೇ ಅಥವಾ ನಾವು ನಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಡುತ್ತೇವೆಯೇ ಎಂಬುದನ್ನು ಕಾದು ನೋಡಿ. ನನ್ನನ್ನು ಭೇಟಿಯಾಗಲು ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದಾರೆ. ಹೊಸ ಪಕ್ಷದ ಘೋಷಣೆಗೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ’ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಗುರುವಾರ ನಾನು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದೇನೆ. ನನ್ನೊಂದಿಗೆ 25-30 ಜನರು ಕೂಡ ಬರಲಿದ್ದಾರೆ ಎಂದು ಅಮರೀಂದರ್ ಸಿಂಗ್ ನಿನ್ನೆ ಹೇಳಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಇದು ಅಮರೀಂದರ್ ಸಿಂಗ್ ಹಾಗೂ ಅಮಿತ್ ಶಾ ಅವರ ಮೂರನೇ ಭೇಟಿಯಾಗಿದೆ.

ಇದನ್ನೂ ಓದಿ: Amarinder Singh: ಅಮರೀಂದರ್ ಸಿಂಗ್ ಹೊಸ ಪಕ್ಷದ ಹೆಸರು ಪಂಜಾಬ್ ವಿಕಾಸ್ ಪಾರ್ಟಿ?; ಕಾಂಗ್ರೆಸ್​ಗೆ ಮತ್ತೊಂದು ಹೊಡೆತ

Amarinder Singh: ನಾನು ಪಂಜಾಬ್ ಮಾಜಿ ಮುಖ್ಯಮಂತ್ರಿಯಲ್ಲ, ನನ್ನ ಬಿಟ್ಟುಬಿಡಿ; ಅಮರೀಂದರ್ ಸಿಂಗ್ ಹೀಗೆ ಹೇಳಿದ್ದೇಕೆ?

Published On - 12:49 pm, Thu, 28 October 21