ಪಟಿಯಾಲ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ(Punjab assembly elections) ಪಟಿಯಾಲ ವಿಧಾನಸಭಾ ಕ್ಷೇತ್ರದಿಂದ (Patiala assembly constituency) ಸ್ಪರ್ಧಿಸುವುದಾಗಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ (Amarinder Singh )ಘೋಷಿಸಿದ್ದಾರೆ. “ನಾನು ಪಟಿಯಾಲದಿಂದ ಸ್ಪರ್ಧಿಸುತ್ತೇನೆ. ಪಟಿಯಾಲ 400 ವರ್ಷಗಳಿಂದ ನಮ್ಮೊಂದಿಗಿದೆ ಮತ್ತು ಸಿಧು ಕಾರಣ ನಾನು ಅದನ್ನು ಬಿಡಲು ಹೋಗುವುದಿಲ್ಲ” ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಪಟಿಯಾಲಾ ಸಿಂಗ್ ಅವರ ಕುಟುಂಬದ ಭದ್ರಕೋಟೆಯಾಗಿದೆ. ಅವರು ನಾಲ್ಕು ಬಾರಿ ಸ್ಥಾನವನ್ನು ಗೆದ್ದಿದ್ದಾರೆ ಮತ್ತು ಅವರ ಪತ್ನಿ ಪ್ರಣೀತ್ ಕೌರ್ 2014 ರಿಂದ 2017 ರವರೆಗೆ ಮೂರು ವರ್ಷಗಳ ಕಾಲ ಅದನ್ನು ಪ್ರತಿನಿಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿಂಗ್ಅವರ ತಂದೆ ಮಹಾರಾಜ ಸರ್ ಯಾದವಿಂದರ್ ಸಿಂಗ್ ಅವರು ಪಟಿಯಾಲ ರಾಜವಂಶದ ಕೊನೆಯ ಮಹಾರಾಜರಾಗಿದ್ದರು.
ಸಿಂಗ್ ಈ ತಿಂಗಳ ಆರಂಭದಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಎಂಬ ತಮ್ಮದೇ ರಾಜಕೀಯ ಪಕ್ಷವನ್ನು ಘೋಷಿಸಿದ್ದರು ಮತ್ತು ರಾಜ್ಯದ ಎಲ್ಲಾ 117 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.
ಈ ವರ್ಷ ಎಪ್ರಿಲ್‌ನಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ನಡುವೆ ನಡೆಯುತ್ತಿರುವ ಕಲಹದ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕದಲ್ಲಿ ಪೂರ್ಣ ಪ್ರಮಾಣದ ಬಿಕ್ಕಟ್ಟಿಗೆ ಸಿಲುಕಿ ರಾಜ್ಯದ ಮುಖ್ಯಮಂತ್ರಿ ಸ್ಥಾನ ತೊರೆದಾಗ ಈ ಸ್ಥಾನದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಸಿಂಗ್ ಸವಾಲು ಹಾಕಿದ್ದರು.
2017 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಜನರಲ್ (ನಿವೃತ್ತ) ಜೆಜೆ ಸಿಂಗ್ ಅವರಂತೆಯೇ ಸಮಗ್ರವಾಗಿ ಸೋಲಿಸಲಾಗುವುದು ಎಂದು ಸಿಂಗ್ ಅವರು ಸಿಧುಗೆ ತಿಳಿಸಿದ್ದರು. ಆದರೆ ಸಿಧು ಅವರು 60,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು ಮತ್ತು ಜೆಜೆ ಸಿಂಗ್ ಸಿಧು ಅವರಿಗಿಂತ ಕೇವಲ 11.1 ರಷ್ಟು ಮತಗಳನ್ನು ಗಳಿಸಿ ಠೇವಣಿ ಕಳೆದುಕೊಂಡಿದ್ದರು.
“ಪಂಜಾಬ್‌ನ ಆತ್ಮಸಾಕ್ಷಿಯನ್ನು ಹಳಿತಪ್ಪಿಸುವ ಪ್ರಯತ್ನಗಳು ವಿಫಲವಾಗುತ್ತವೆ. ನನ್ನ ಆತ್ಮ ಪಂಜಾಬ್ ಮತ್ತು ಪಂಜಾಬ್‌ನ ಆತ್ಮ ಗುರು ಗ್ರಂಥ ಸಾಹಿಬ್ಜಿ. ನಮ್ಮ ಹೋರಾಟ ನ್ಯಾಯಕ್ಕಾಗಿ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕಾಗಿ.ಅಸೆಂಬ್ಲಿ ಸ್ಥಾನ ಒಂದೇ ಉಸಿರಿನಲ್ಲಿ ಚರ್ಚೆ ಮಾಡುವಂತದಲ್ಲ ಎಂದು ಸಿಧು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ನಾಳೆ ರೈತರ ಮಹಾಪಂಚಾಯತ್; ಲಖನೌ ಚಲೋಗೆ ಕರೆ ನೀಡಿದ ಟಿಕಾಯತ್
Published On - 7:20 pm, Sun, 21 November 21