Amarnath Cloudburst: ಅಮರನಾಥ ಮೇಘಸ್ಫೋಟದಲ್ಲಿ 16 ಜನ ಸಾವು; ಜಮ್ಮು ಕಾಶ್ಮೀರ ಆಡಳಿತದಿಂದ ಸಹಾಯವಾಣಿ ಆರಂಭ

Amarnath Helpline: ಅಮರನಾಥ ಯಾತ್ರಾರ್ಥಿಗಳ ಸಂಬಂಧಿಕರಿಗೆ ಮಾಹಿತಿ‌ ನೀಡಲು ಸಹಾಯವಾಣಿ ಆರಂಭಿಸಲಾಗಿದೆ.

Amarnath Cloudburst: ಅಮರನಾಥ ಮೇಘಸ್ಫೋಟದಲ್ಲಿ 16 ಜನ ಸಾವು; ಜಮ್ಮು ಕಾಶ್ಮೀರ ಆಡಳಿತದಿಂದ ಸಹಾಯವಾಣಿ ಆರಂಭ
ಅಮರನಾಥ್ ಯಾತ್ರೆಯ ಪರಯಾಣಿಕರುImage Credit source: Live Mint
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 09, 2022 | 11:34 AM

ಅಮರನಾಥ: ಜಮ್ಮು ಕಾಶ್ಮೀರದ ಅಮರನಾಥ (Amarnath) ಗುಹೆ ಮಾರ್ಗದಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟದಿಂದ (Cloudburst)  ದಿಢೀರ್ ಪ್ರವಾಹ ಉಂಟಾಗಿದೆ. ಟೆಂಟ್​ಗಳಲ್ಲಿದ್ದ ಯಾತ್ರಾರ್ಥಿಗಳು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.‌ ಅಮರನಾಥ ಗುಹೆ ಬಳಿ ಸಂಭವಿಸಿದ ಮೇಘಸ್ಪೋಟದಿಂದ 16 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.‌ ಇನ್ನೂ 45 ಮಂದಿ ನಾಪತ್ತೆಯಾಗಿದ್ದಾರೆ.‌ ಅಮರನಾಥ ಯಾತ್ರಾರ್ಥಿಗಳ ಸಂಬಂಧಿಕರಿಗೆ ಮಾಹಿತಿ‌ ನೀಡಲು ಸಹಾಯವಾಣಿ (Helpline) ಆರಂಭಿಸಲಾಗಿದೆ.

ಜಮ್ಮು ಕಾಶ್ಮೀರದ ಪವಿತ್ರ ಕ್ಷೇತ್ರವಾದ ಅಮರನಾಥ ಗುಹೆ ಬಳಿಯೇ ಶುಕ್ರವಾರ ಸಂಜೆ 5.30ರ ಸುಮಾರಿಗೆ ಮೇಘಸ್ಪೋಟ ಸಂಭವಿಸಿದೆ. ಇದರಿಂದ ಅಮರನಾಥ ಯಾತ್ರೆ ಮಾರ್ಗದಲ್ಲಿ ದೀಢೀರನೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿ, ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಧಿಡೀರನೇ ಜೋರಾಗಿ ನೀರು ಹರಿದು ಬಂದಿದ್ದರಿಂದ ಯಾತ್ರೆಯ ಮಾರ್ಗದಲ್ಲಿ ಯಾತ್ರಾರ್ಥಿಗಳು ತಂಗಲು ನಿರ್ಮಿಸಿದ್ದ ಟೆಂಟ್ ಗಳು ಪ್ರವಾಹದ ನೀರಿನ ಹೊಡೆತಕ್ಕೆ ‌ಸಿಕ್ಕು ಕೊಚ್ಚಿಕೊಂಡು ಹೋಗಿವೆ.‌ ಈ ಟೆಂಟ್ ಗಳಲ್ಲಿದ್ದ 16 ಯಾತ್ರಾರ್ಥಿಗಳು ಪ್ರವಾಹದ ನೀರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.‌

ಇದನ್ನೂ ಓದಿ
Image
Amarnath Shrine Cloudburst: ಅಮರನಾಥ ಯಾತ್ರೆ ವೇಳೆ ಮೇಘ ಸ್ಫೋಟ, ಆತಂಕದ ದೃಶ್ಯಗಳು ಇಲ್ಲಿವೆ ನೋಡಿ
Image
Amarnath Yatra 2022: ಇಂದಿನಿಂದ ಅಮರನಾಥ ಯಾತ್ರೆ ಆರಂಭ; ಹಿಮಾಲಯದಲ್ಲಿ ಬಿಗಿ ಭದ್ರತೆ
Image
Char Dham Yatra 2022: ಚಾರ್​ಧಾಮ್ ಯಾತ್ರೆ ವೇಳೆ ಈ ಬಾರಿ 201 ಭಕ್ತರು ಸಾವು
Image
Amarnath Yatra: ಅಮರನಾಥ ಯಾತ್ರೆಗೆ ಹೆಸರು ನೋಂದಾಯಿಸುವುದು ಹೇಗೆ? ಏನೇನು ನಿರ್ಬಂಧಗಳಿವೆ?

ಮೇಘಸ್ಪೋಟದ ಅನಾಹುತ ಬಳಿಕ ಅಮರನಾಥ ಯಾತ್ರೆಯನ್ನು‌‌ ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತೀಯ ಸೇನೆಯ ಆರು ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.‌ ಯುದ್ದೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭಾರತೀಯ ಸೇನೆ, ಐಟಿಬಿಪಿ, NDRF, ಜಮ್ಮು ‌ಕಾಶ್ಮೀರ ಪೊಲೀಸರು ಸಮನ್ವಯದಿಂದ ರಕ್ಷಣಾ ‌ಕಾರ್ಯಾಚರಣೆ ನಡೆಸುತ್ತಿದ್ದಾರೆ.‌

ಇದನ್ನೂ ಓದಿ: Amarnath shrine cloudburst ಅಮರನಾಥ ಗುಹೆ ಬಳಿ ಮೇಘ ಸ್ಫೋಟ; ಹಠಾತ್​​ ಪ್ರವಾಹದಲ್ಲಿ 15 ಸಾವು, ಕರ್ನಾಟಕದವರಿಗಾಗಿ ಹೆಲ್ಪ್​​ ಲೈನ್​

ಅಮರನಾಥ ಯಾತ್ರೆ ವೇಳೆ ಪ್ರವಾಹದಲ್ಲಿ ಸಿಲುಕಿರುವವರ ಸಹಾಯಕ್ಕೆಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಶುಕ್ರವಾರ ಸಹಾಯವಾಣಿಯನ್ನು ಸ್ಥಾಪಿಸಿದೆ. ಹಲವಾರು ಯಾತ್ರಿಕರು ನಾಪತ್ತೆಯಾಗುತ್ತಲೇ ಇದ್ದಾರೆ. ಹೀಗಾಗಿ, ಲೆಫ್ಟಿನೆಂಟ್ ಗವರ್ನರ್ ಆಡಳಿತ ಮತ್ತು ಅಮರನಾಥ ದೇಗುಲ ಮಂಡಳಿ (SASB) ನಾಲ್ಕು ದೂರವಾಣಿ ಸಂಖ್ಯೆಗಳನ್ನು ನೀಡಿದೆ. ಇದರ ಮೂಲಕ ಮೇಘಸ್ಫೋಟದ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

NDRF: 011-23438252 011-23438253

ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240

ಶ್ರೈನ್ ಬೋರ್ಡ್ ಸಹಾಯವಾಣಿ: 0194-2313149

ಆರು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎರಡು ಹೆಚ್ಚುವರಿ ವೈದ್ಯಕೀಯ ತಂಡಗಳನ್ನು ಸಹ ಕಳುಹಿಸಲಾಗಿದೆ. ಎರಡು ಶೋಧ ಮತ್ತು ಪಾರುಗಾಣಿಕಾ ಶ್ವಾನದಳಗಳನ್ನು ಪಟ್ಟನ್ ಮತ್ತು ಷರೀಫಾಬಾದ್‌ನಿಂದ ವಿಮಾನದ ಮೂಲಕ ಪಂಜತರ್ನಿಗೆ ಮತ್ತು ನಂತರ ಪವಿತ್ರ ಗುಹೆಗೆ ಸೇರಿಸಲಾಯಿತು, ”ಎಂದು ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಲ್ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಎ ಶಾ ತಿಳಿಸಿದ್ದಾರೆ.

ಭಾರತೀಯ ಸೇನೆ, ವಾಯುಪಡೆಯ ಹೆಲಿಕಾಪ್ಟರ್ ಬಳಸಿ ಯಾತ್ರಾರ್ಥಿಗಳ ರಕ್ಷಣಾ ‌ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರ್ಮಿಯ ಹೆಲಿಕಾಪ್ಟರ್ ಗಳು ರಕ್ಷಣಾ ಕಾರ್ಯಾಚರಣೆಗೆ ಸನ್ನದ್ದ ಸ್ಥಿತಿಯಲ್ಲಿವೆ.. ಅಮರನಾಥ ಗುಹೆ ಬಳಿ ಸಂಭವಿಸಿದ ಮೇಘಸ್ಪೋಟದಿಂದ ಜೀವ ಹಾನಿ ಸಂಭವಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.‌ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ‌ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೆ ಮಾತನಾಡಿದ್ದಾರೆ.‌ ಕೇಂದ್ರ ಸರ್ಕಾರದಿಂದ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಅಮರನಾಥ ಗುಹೆ ಬಳಿ ಮೇಘ ಸ್ಫೋಟ: ಮೈಸೂರಿನ ಆರು ಪ್ರವಾಸಿಗರು ಸೇಫ್

ಕಳೆದ 2 ವರ್ಷ ಕೊರೊನಾದಿಂದ ಅಮರನಾಥ ಯಾತ್ರೆ ನಡೆದಿರಲಿಲ್ಲ. ಈ ವರ್ಷ ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇರುವ ಕಾರಣದಿಂದ ಅಮರನಾಥ ಯಾತ್ರೆಗೆ ಅವಕಾಶ ನೀಡಲಾಗಿದೆ. ಪಾಕಿಸ್ತಾನದ ಭಯೋತ್ಪಾದಕರ ದಾಳಿಯ ಭೀತಿಯ ಮಧ್ಯೆಯೂ ಅಮರನಾಥ ಯಾತ್ರೆ ನಡೆಯುತ್ತಿದೆ. ಆದರೆ, ಕಳೆದ 2-3 ದಿನಗಳಿಂದ ಭಾರೀ ಮಳೆಯಿಂದ ಯಾತ್ರೆಗೆ ತೊಂದರೆ ಆಗಿತ್ತು.‌ ಶುಕ್ರವಾರ ಸಂಜೆ ಮೇಘಸ್ಪೋಟ ಸಂಭವಿಸಿ ಮತ್ತೆ ಅನಾಹುತ ಸಂಭವಿಸಿದೆ.‌

ಧಾರ್ಮಿಕ ಸ್ಥಳಗಳ ಯಾತ್ರೆ ವೇಳೆ ಮೇಘಸ್ಪೋಟದಿಂದ ಯಾತ್ರಾರ್ಥಿಗಳು ಸಾವನ್ನಪ್ಪಿರುವುದು ಇದೇ ಮೊದಲೇನೂ ಅಲ್ಲ. ಉತ್ತರಾಖಂಡ ರಾಜ್ಯದ ಕೇದಾರನಾಥ ದೇವಾಲಯ ಬಳಿ 2013ರ ಜೂನ್ ತಿಂಗಳಲ್ಲಿ ಮೇಘ ಸ್ಪೋಟ ಸಂಭವಿಸಿ ದಿಡೀರ್ ಪ್ರವಾಹ ಉಂಟಾಗಿತ್ತು. ‌ಆಗ 9ರಿಂದ 10 ಸಾವಿರ ಭಕ್ತಾದಿಗಳು ದಿಢೀರ್ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದರು. ‌‌ಈಗ ಅಂಥದ್ದೇ ದುರಂತ ಅಮರನಾಥ ಯಾತ್ರೆಯಲ್ಲೂ ಮರು ಕಳಿಸಿದೆ.‌ ಈ ಬಾರಿ ಅಮರನಾಥ ಯಾತ್ರೆಯನ್ನು‌‌ ಬಿಗಿಯಾದ ಪೊಲೀಸ್, ರಕ್ಷಣಾ ಪಡೆಗಳ ಭದ್ರತೆಯಲ್ಲಿ ನಡೆಸಲಾಗುತ್ತಿದೆ. ಯಾತ್ರಾರ್ಥಿಗಳಿಗೆ RFID ಟ್ಯಾಗ್ ನೀಡಲಾಗಿದೆ.‌ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್ ನೀಡಿದ್ದು, ಯಾತ್ರಾರ್ಥಿಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ.‌ ಹೀಗಾಗಿ ನಾಪತ್ತೆಯಾದ ಯಾತ್ರಾರ್ಥಿಗಳನ್ನು‌ ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್ ಮೂಲಕ ಸುಲಭವಾಗಿ ಟ್ರ್ಯಾಕ್ ಮಾಡಬಹುದು.

Published On - 11:29 am, Sat, 9 July 22