ಬಿಪೋರ್ಜಾಯ್ ಚಂಡಮಾರುತ: ವಿಪತ್ತು ನಿರ್ವಹಣೆಗಾಗಿ ಮೂರು ಯೋಜನೆ ಘೋಷಿಸಿದ ಅಮಿತ್ ಶಾ
ನಗರ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು ಮತ್ತು ಭೂಕುಸಿತವನ್ನು ತಗ್ಗಿಸಲು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 825 ಕೋಟಿ ರೂಪಾಯಿಗಳ ಯೋಜನೆಯನ್ನು ಕೇಂದ್ರ ಗೃಹ ಸಚಿವರು ಘೋಷಿಸಿದ್ದಾರೆ,
ಬಿಪೋರ್ಜಾಯ್ ಚಂಡಮಾರುತ (Biporjoy cyclone )ಹಿನ್ನಲೆಯಲ್ಲಿ ವಿಪತ್ತು ನಿರ್ವಹಣೆ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರ ಜತೆ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ರೂ 8000 ಕೋಟಿ ಮೌಲ್ಯದ ಮೂರು ಪ್ರಮುಖ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ಒಟ್ಟು ರೂ 5,000 ಕೋಟಿಗಳ ಯೋಜನೆ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಏಳು ಮಹಾನಗರಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆಗೆ ರೂ 2,500 ಕೋಟಿ ಹಣ ಅನುದಾನ ಯೋಜನೆ ಮತ್ತು ನಗರ ಪ್ರವಾಹದ ಅಪಾಯವನ್ನು ಕಡಿಮೆ ಮಾಡಲು ಮತ್ತು ಭೂಕುಸಿತವನ್ನು ತಗ್ಗಿಸಲು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 825 ಕೋಟಿ ರೂಪಾಯಿಗಳ ಯೋಜನೆಯನ್ನು ಸಚಿವರು ಘೋಷಿಸಿದ್ದಾರೆ.
#WATCH | After the meeting of Disaster Management ministers of States/UTs, Union Home Minister Amit Shah says, “In the last nine years, the Central Govt and States have achieved a lot in this area. Nobody can deny it. But we can’t stay content because disasters have changed their… pic.twitter.com/qXLjSWW8KZ
— ANI (@ANI) June 13, 2023
ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಮಾಧ್ಯಮಗಳಿಗೆ ಚಂಡಮಾರುತದ ಸನ್ನದ್ಧತೆಯ ಬಗ್ಗೆ ವಿವರಿಸಿದ್ದು, ವಿಪತ್ತು ನಿಭಾಯಿಸಲು ಸರ್ಕಾರ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಹೇಳಿದರು.
Delhi | Union Home Minister Amit Shah chairs a meeting of Disaster Management ministers of States/Union Territories. pic.twitter.com/IlKJiO0sId
— ANI (@ANI) June 13, 2023
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣೆ ಬಗ್ಗೆ ಸಚಿವರ ಸಭೆಯ ನಂತರ ಮಾತನಾಡಿದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ಒಂಬತ್ತು ವರ್ಷಗಳಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧಿಸಿವೆ. ಯಾರೂ ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾವು ಹೀಗೆ ಇರುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ವಿಪತ್ತುಗಳು ಅವುಗಳ ಸ್ವರೂಪವನ್ನು ಬದಲಾಯಿಸಿವೆ. ಅವುಗಳ ಆವರ್ತನ ಮತ್ತು ತೀವ್ರತೆಯು ಹೆಚ್ಚಾಗಿದೆ. ನಾವು ಹೆಚ್ಚು ವ್ಯಾಪಕವಾದ ಯೋಜನೆಯನ್ನು ಮಾಡಬೇಕಾಗಿದೆ ಎಂದಿದ್ದಾರೆ. ಅದೇ ವೇಳೆ ಪರಮಾಣು ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ರಾಜ್ಯಗಳಿಗೆ ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನುಸರಿಸಲು ಕಟ್ಟುನಿಟ್ಟಾದ ಪ್ರೋಟೋಕಾಲ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Delhi Earthquake: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಕಂಪಿಸಿದ ಭೂಮಿ
ಬಿಪೋರ್ಜಾಯ್ ಚಂಡಮಾರುತದ ಅಪ್ಡೇಟ್ಸ್
ಪೋರಬಂದರ್, ದೇವಭೂಮಿ ದ್ವಾರಕಾ ಜಿಲ್ಲೆಗಳಲ್ಲಿ ಕಚ್ ವರೆಗಿ ಗಾಳಿಯ ವೇಗವು ನಾಳೆ ಗಂಟೆಗೆ 65-75 ಕಿಮೀ ವೇಗದಲ್ಲಿ ಏರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶತ ಡಾ.ಮೃತ್ಯುಂಜಯ್ ಮಹಪಾತ್ರ ಹೇಳಿದ್ದಾರೆ. ಜೂನ್ 15 ರಂದು, ಗುಜರಾತ್‌ನ ದ್ವಾರಕಾ, ಜಾಮ್‌ನಗರ, ಕಚ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 125-135 ಕಿಮೀ ಮತ್ತು ಗಂಟೆಗೆ 150 ಕಿಮೀ ವೇಗದಲ್ಲಿ ಬೀಸುತ್ತದೆ, ಇದು ವ್ಯಾಪಕ ಹಾನಿಯನ್ನುಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Tue, 13 June 23