ಪಶ್ಚಿಮ ಬಂಗಾಳ ಭೇಟಿಯಿಂದ ದಿಢೀರನೆ ಹಿಂದೆ ಸರಿದ ಗೃಹ ಸಚಿವ ಅಮಿತ್ ಶಾ! ಕಾರಣವೇನು?
ದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಜ. 27ರಂದು ರೈತ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆಯಿತು. ನಿನ್ನೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಉಂಟಾಯಿತು.. ಹೀಗೆ ಒಂದಲ್ಲ ಒಂದು ಆಕಸ್ಮಿಕ, ದುರ್ಘಟನೆಯ ಹಿನ್ನೆಲೆಯಲ್ಲಿ ಇಡೀ ದೆಹಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಹೀಗಾಗಿ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿಯನ್ನು ಮುಂದೂಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ರಾಷ್ಟ್ರಮಟ್ಟದ ನಾಯಕರು ಒಬ್ಬರಾದ ಮೇಲೆ ಮತ್ತೊಬ್ಬರಂತೆ ಅಲ್ಲಿಗೆ ಧಾವಿಸಿ, ಈಗಿನಿಂದಲೇ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಜನವರಿ […]
ದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಜ. 27ರಂದು ರೈತ ಪ್ರತಿಭಟನೆಯ ಹೆಸರಲ್ಲಿ ಹಿಂಸಾಚಾರ ನಡೆಯಿತು. ನಿನ್ನೆ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಉಂಟಾಯಿತು.. ಹೀಗೆ ಒಂದಲ್ಲ ಒಂದು ಆಕಸ್ಮಿಕ, ದುರ್ಘಟನೆಯ ಹಿನ್ನೆಲೆಯಲ್ಲಿ ಇಡೀ ದೆಹಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಹೀಗಾಗಿ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿಯನ್ನು ಮುಂದೂಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ರಾಷ್ಟ್ರಮಟ್ಟದ ನಾಯಕರು ಒಬ್ಬರಾದ ಮೇಲೆ ಮತ್ತೊಬ್ಬರಂತೆ ಅಲ್ಲಿಗೆ ಧಾವಿಸಿ, ಈಗಿನಿಂದಲೇ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಜನವರಿ 23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಕೋಲ್ಕತ್ತಾಕ್ಕೆ ತೆರಳಿದ್ದರು. ಹಾಗೇ ಅಮಿತ್ ಶಾ ಅವರು ಎರಡನೇ ಬಾರಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಡುವವರು ಇದ್ದರು. ನಿನ್ನೆ ರಾತ್ರಿಯೇ ಅವರು ತೆರಳಬೇಕಿತ್ತು.
ಶನಿವಾರ (ಇಂದು) ಮತ್ತು ಭಾನುವಾರ (ನಾಳೆ) ಪಶ್ಚಿಮ ಬಂಗಾಳದಲ್ಲಿ ಎರಡು ಪ್ರಚಾರ ಸಭೆ ನಡೆಸಲಿದ್ದ ಅಮಿತ್ ಶಾ ತಮ್ಮ ಭೇಟಿಯನ್ನು ಸದ್ಯಕ್ಕೆ ಮುಂದೂಡಿದ್ದಾರೆ.
ಕೊರೊನಾ ನಂತರ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸ! ಅದೂ ಎಲ್ಲಿಗೆ, ಯಾವಾಗ ಗೊತ್ತಾ?
Published On - 12:14 pm, Sat, 30 January 21