ರೈತ ಹೋರಾಟಕ್ಕೆ ಪಾಕ್ನಿಂದ ಶಸ್ತ್ರಾಸ್ತ್ರ, ಡ್ರಗ್ಸ್ ಪೂರೈಕೆ ಹೆಚ್ಚಿದೆ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆತಂಕದ ನುಡಿಗಳು
ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಾಗಿನಿಂದಲೂ ನಾನು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೇನೆ. ಇಲ್ಲಿ ಗಲಾಟೆ ಸೃಷ್ಟಿಸಲು ಪಾಕ್ ಪ್ರಯತ್ನ ಮಾಡುತ್ತಿರುವ ಬಗ್ಗೆಯೂ ಹೇಳಿದ್ದೇನೆ ಎಂದು ಪಂಜಾಬ್ ಸಿಎಂ ತಿಳಿಸಿದ್ದಾರೆ.
ಚಂಡೀಗಢ್: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮಧ್ಯೆ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿಯನ್ನು ತೋರುತ್ತಿದೆ. ಶಸ್ತ್ರಾಸ್ತ್ರ ಮತ್ತು ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುವ ಮೂಲಕ, ಗಡಿ ರಾಜ್ಯಗಳಲ್ಲಿ ಗಲಾಟೆಗೆ ಪ್ರಚೋದನೆ ನೀಡುವ ಬಗ್ಗೆ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಸಿಕ್ಕಿದ್ದು, ಈ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.
ಪಾಕಿಸ್ತಾನ ಡ್ರೋಣ್ ಮೂಲಕ ಶಸ್ತ್ರಾಸ್ತ್ರಗಳನ್ನು ಮತ್ತು ಡ್ರಗ್ಸ್ಗಳನ್ನು ಕಳಿಸುತ್ತಲೇ ಇರುತ್ತದೆ. ಅದರಲ್ಲೂ ರೈತರ ಹೋರಾಟ ಶುರುವಾದಾಗಿನಿಂದ ಈ ಪ್ರಮಾಣ ಹೆಚ್ಚಾಗಿದೆ. ಶಸ್ತ್ರಾಸ್ತ್ರ, ಹಣ, ಹೆರೋಯಿನ್ಗಳ ಪೂರೈಕೆ ಅಧಿಕಗೊಂಡಿದೆ ಎಂದು ಅಮರಿಂದರ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಾಗಿನಿಂದಲೂ ನಾನು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೇನೆ. ಇಲ್ಲಿ ಗಲಾಟೆ ಸೃಷ್ಟಿಸಲು ಪಾಕ್ ಪ್ರಯತ್ನ ಮಾಡುತ್ತಿರುವ ಬಗ್ಗೆಯೂ ಹೇಳಿದ್ದೇನೆ. ಕೂಡಲೇ ತನಿಖೆ ಶುರುವಾಗಬೇಕು ಎಂದೂ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಭೇಟಿಯಿಂದ ದಿಢೀರನೆ ಹಿಂದೆ ಸರಿದ ಗೃಹ ಸಚಿವ ಅಮಿತ್ ಶಾ! ಕಾರಣವೇನು?
Published On - 1:13 pm, Sat, 30 January 21