ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಸನಾತನ ಧರ್ಮದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ‘ಕೆಲವರು ಸನಾತನ ಧರ್ಮದ ಬಗ್ಗೆ ಸಾಕಷ್ಟು ಅಪ ಪ್ರಚಾರ ಮಾಡುತ್ತಿದ್ದಾರೆ, ಸನಾತನ ಧರ್ಮವನ್ನು ಮುಗಿಸುವುದಾಗಿ ಉದಯನಿಧಿ ಹೇಳಿಕೆ ನೀಡಿದ್ದಾರೆ. ಹಿಂದೂ ಸಂಘಟನೆಗಳನ್ನು ಲಷ್ಕರ್ ಸಂಘಟನೆಗಳಿಗೆ ಹೋಲಿಸಿದ್ದಾರೆ ಎಂದು ಆಕ್ರೋಶ ಭರಿತ ನುಡಿಗಳನ್ನಾಡಿದ್ದಾರೆ. ಕಳೆದ ಎರಡು ದಿನಗಳಿಂದ ಅವರು (ಪ್ರತಿಪಕ್ಷಗಳು) ದೇಶದ ಸಂಸ್ಕೃತಿ, ಇತಿಹಾಸ ಮತ್ತು ಸನಾತನ ಧರ್ಮವನ್ನು ಅವಮಾನಿಸುತ್ತಿದ್ದಾರೆ.
ಭಾರತ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ, ಒಬ್ಬರು ಮುಖ್ಯಮಂತ್ರಿ (ಉದಯನಿಧಿ) ಅವರ ಪುತ್ರ ಮತ್ತು ಇನ್ನೊಬ್ಬರು ಮಾಜಿ ಕೇಂದ್ರ ಹಣಕಾಸು ಸಚಿವ (ಕಾರ್ತಿ ಚಿದಂಬರಂ) ಅವರ ಪುತ್ರ ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡುತ್ತಿದ್ದಾರೆ ಎಂದು ಹೇಳಿದರು.
ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ, ಕೊರೊನಾ ವೈರಸ್ಗೆ ಹೋಲಿಸಿದ್ದರು. ಇದೆಲ್ಲದರ ವಿರುದ್ಧ ಹೋರಾಡುವುದಲ್ಲ, ಅದನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು ಎಂದು ಸ್ಟಾಲಿನ್ ಹೇಳಿದ್ದರು. ಸನಾತನ ಧರ್ಮ’ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದರ ನಿರ್ಮೂಲನೆಗೆ ಕರೆ ನೀಡಿದ್ದರು. ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತದೆ ಎಂದು ಆರೋಪಿಸಿದ್ದರು.
ಮತ್ತಷ್ಟು ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಮಾತನಾಡಿ, ಉದಯನಿಧಿ ಹಾಗೂ ಅವರ ತಂದೆ ಇಂತಹ ಆದರ್ಶಗಳನ್ನು ಕ್ರಿಶ್ಚಿಯನ್ ಮಿಷನರಿಗಳಿಂದ ಪಡೆದ ಕಲ್ಪನೆಯಾಗಿರಬಹುದು , ದುರುದ್ದೇಶಪೂರಿತ ಸಿದ್ಧಾಂತಗಳನ್ನು ಹರಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ