Earthquake: ಲಡಾಖ್​​ನ ಗ್ರಾಮವೊಂದರಲ್ಲಿ ಮುಂಜಾನೆ ಭೂಕಂಪ; 4.3ರಷ್ಟು ತೀವ್ರತೆ ದಾಖಲು

ನಿನ್ನೆ ತಡರಾತ್ರಿ 2.52ರ ಹೊತ್ತಿಗೆ ಅಂಡಮಾನ್​-ನಿಕೋಬಾರ್​ನ ದಿಗ್ಲಿಪುರ್​ ಎಂಬಲ್ಲಿ ಭೂಕಂಪನವಾಗಿದೆ. ಇಲ್ಲಿನ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿತ್ತು.

Earthquake: ಲಡಾಖ್​​ನ ಗ್ರಾಮವೊಂದರಲ್ಲಿ ಮುಂಜಾನೆ ಭೂಕಂಪ; 4.3ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Mar 29, 2022 | 12:06 PM

ಇಂದು ಜಮ್ಮು-ಕಾಶ್ಮೀರದ ಲಡಾಖ್​​ನಲ್ಲಿರುವ ಅಲ್ಚಿ ಪ್ರದೇಶದ ಉತ್ತರದಲ್ಲಿ ಇಂದು ಮುಂಜಾನೆ ಭೂಕಂಪ (Earthquake)ವಾಗಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇಂದು ಮುಂಜಾನೆ 7.29ರ ಹೊತ್ತಿಗೆ ಲಡಾಖ್​ನ ಲೇಹ್​​ ಜಿಲ್ಲೆಯ ಆಲ್ಚಿ ಗ್ರಾಮದ ಉತ್ತರಕ್ಕೆ 186 ಕಿಮೀ ದೂರದಲ್ಲಿ ಭೂ ಮೇಲ್ಮೈನಿಂದ 186 ಕಿಮೀ ಆಳದಲ್ಲಿ ಭೂಮಿ ನಡುಗಿದ್ದಾಗಿ  ಟ್ವೀಟ್ ಮಾಡಿದೆ.

ಭೂಕಂಪದ ಕೇಂದ್ರ ಚೀನಾದಿಂದ ಉತ್ತರಕ್ಕೆ 18 ಕಿಮಿ ದೂರದಲ್ಲಿ ಇದೆ ಎಂದೂ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಭೂಮಿ ನಡುಗುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲ ಕಂಗಾಲಾಗಿದ್ದರು. ತಮ್ಮ ಮನೆಗಳಿಂದ ಹೊರಬಂದಿದ್ದರು. ಅದೃಷ್ಟವಶಾತ್​ ಏನೂ ಹಾನಿಯಾಗಲಿಲ್ಲ. ಯಾರ ಜೀವಕ್ಕೂ ಅಪಾಯವಾಗಿಲ್ಲ ಎಂದು ವರದಿಯಾಗಿದೆ.

ನಿನ್ನೆ ತಡರಾತ್ರಿ 2.52ರ ಹೊತ್ತಿಗೆ ಅಂಡಮಾನ್​-ನಿಕೋಬಾರ್​ನ ದಿಗ್ಲಿಪುರ್​ ಎಂಬಲ್ಲಿ ಭೂಕಂಪನವಾಗಿದೆ. ಇಲ್ಲಿನ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿದ್ದು, ದಿಗ್ಲಿಪುರದಿಂದ ಉತ್ತರಕ್ಕೆ ಸುಮಾರು 147 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಎಂದು ಹೇಳಲಾಗಿದೆ.

ಇದನ್ನೂ ಓದಿ: Ranjani Raghavan: ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚುವ ‘ಕನ್ನಡತಿ’; ರಂಜನಿ ರಾಘವನ್​ಗೆ ಹುಟ್ಟುಹಬ್ಬದ ಸಂಭ್ರಮ

Published On - 11:45 am, Tue, 29 March 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?