ಈ ಫೋಟೋದಲ್ಲಿರುವವರು ಯಾರು ಗುರುತಿಸಬಲ್ಲಿರಾ?-ಸಿನಿಮಾ ನಿರ್ಮಾಣದ ಕನಸು ಹೊತ್ತಿದ್ದ, ಇಂದಿನ ಖ್ಯಾತ ಉದ್ಯಮಿ ಇವರು

ಈ ಫೋಟೋದಲ್ಲಿರುವವರು ಯಾರು ಗುರುತಿಸಬಲ್ಲಿರಾ?-ಸಿನಿಮಾ ನಿರ್ಮಾಣದ ಕನಸು ಹೊತ್ತಿದ್ದ, ಇಂದಿನ ಖ್ಯಾತ ಉದ್ಯಮಿ ಇವರು
ತಮ್ಮ ಹಳೇ ಫೋಟೋ ಶೇರ್ ಮಾಡಿಕೊಂಡ ಉದ್ಯಮಿ

ಥ್ರೋಬ್ಯಾಕ್ ಫೋಟೋ ಶೇರ್​ ಮಾಡುತ್ತಿದ್ದಂತೆ ಅದು ತುಂಬ ವೈರಲ್​ ಆಗುತ್ತಿದೆ. ಆಗಲೇ ತುಂಬ ಚೆನ್ನಾಗಿದ್ದಿರಿ..ನಿಮ್ಮ ಹೇರ್​ ಸ್ಟೈಲ್​ ಚೆನ್ನಾಗಿತ್ತು ಎಂಬಿತ್ಯಾದಿ ಕಮೆಂಟ್​ಗಳನ್ನೂ ನೆಟ್ಟಿಗರು ಕೊಟ್ಟಿದ್ದಾರೆ.

TV9kannada Web Team

| Edited By: Lakshmi Hegde

Jan 20, 2022 | 5:21 PM

ಈ ಫೋಟೋ ನೋಡಿ..ಇವರೊಬ್ಬರು ಭಾರತದ ಖ್ಯಾತ ಉದ್ಯಮಿ. ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಸಕ್ರಿಯರಾಗಿರುತ್ತಾರೆ. ಪರೋಪಕಾರಿಯೂ ಹೌದು. ಇವರ ಅದೆಷ್ಟೋ ಒಳ್ಳೆಯ ಕಾರ್ಯಗಳನ್ನು ದೇಶದ ಜನರು ಮೆಚ್ಚಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್​​ನಲ್ಲಿ ಸದಾ ಒಂದಿಲ್ಲೊಂದು ಉಲ್ಲಾಸಭರಿತ, ಮನಸಿಗೆ ಮುದ ಕೊಡುವ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಂಡು ತಮ್ಮ ಫಾಲೋವರ್ಸ್​ನ್ನು ಖುಷಿಯಾಗಿಡುವ ಈ ಉದ್ಯಮಿ ಇದೀಗ ತಮ್ಮದೇ ಫೋಟೋ ಹಂಚಿಕೊಂಡು ಒಂದು ಹೊಸ ವಿಷಯ ಹೇಳಿದ್ದಾರೆ. ನಿಮಗೆ ಗೊತ್ತಾಯಿತಾ ಈ ವ್ಯಕ್ತಿ ಯಾರೆಂದು?

ಹಾಗೊಮ್ಮೆ ಗೊತ್ತಾಗದೆ ಇದ್ದರೆ ನಾವೇ ಹೇಳುತ್ತೇವೆ..ಇವರು ಬೇರೆ ಯಾರೂ ಅಲ್ಲ. ಮುಂಬೈನ ಉದ್ಯಮಿ ಆನಂದ್ ಮಹೀಂದ್ರಾ. ತಮ್ಮ ಹಳೇ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ಚಲನಚಿತ್ರ ನಿರ್ದೇಶಕ ಆಗಬೇಕು ಎಂದುಕೊಂಡಿದ್ದೆ. ಅದಕ್ಕನುಗುಣವಾಗಿ ನಾನು ಕಾಲೇಜಿನಲ್ಲೂ ವಿದ್ಯಾಭ್ಯಾಸ ಮಾಡಿದೆ. ಆ ತರಬೇತಿಯ ಒಂದು ಭಾಗವಾಗಿ ಇಂದೋರ್​​ನ ಸಮೀಪ ಒಂದು ದುರ್ಗಮ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಶೂಟಿಂಗ್ ಮಾಡುವಾಗ ತೆಗೆದ ನನ್ನ ಫೋಟೋ ಇದು. ಆಗ ನಾನು 16 ಎಂಎಂ ಕ್ಯಾಮರಾ ಬಳಸಿದ್ದೆ. ಆದರೆ ಯಾರಾದರೂ ಆ ಕಾಲದವರು ಇದ್ದರೆ ನಾನು 16 ಎಂಎಂನ ಯಾವ ಕ್ಯಾಮರಾ ಬಳಸಿದ್ದೆ ಎಂದು ಹೇಳಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ. ಹಾಗೇ, ನಾನು 77 ಕುಂಭಮೇಳ ಎಂಬ ಸಿನಿಮಾ ಪ್ರಬಂಧವನ್ನೂ ಬರೆದಿದ್ದೆ ಎಂದು ತಿಳಿಸಿದ್ದಾರೆ. ಅವರು ತಮ್ಮ ಥ್ರೋಬ್ಯಾಕ್ ಫೋಟೋ ಶೇರ್​ ಮಾಡುತ್ತಿದ್ದಂತೆ ಅದು ತುಂಬ ವೈರಲ್​ ಆಗುತ್ತಿದೆ. ಆಗಲೇ ತುಂಬ ಚೆನ್ನಾಗಿದ್ದಿರಿ..ನಿಮ್ಮ ಹೇರ್​ ಸ್ಟೈಲ್​ ಚೆನ್ನಾಗಿತ್ತು ಎಂಬಿತ್ಯಾದಿ ಕಮೆಂಟ್​ಗಳನ್ನೂ ನೆಟ್ಟಿಗರು ಕೊಟ್ಟಿದ್ದಾರೆ.

ಇದನ್ನೂ ಓದಿ: ICC Men Test Team: ಐಸಿಸಿ ಟೆಸ್ಟ್ ತಂಡ ಪ್ರಕಟ: ಟೀಮ್ ಇಂಡಿಯಾದ ಮೂವರಿಗೆ ಸ್ಥಾನ

Follow us on

Related Stories

Most Read Stories

Click on your DTH Provider to Add TV9 Kannada