ವಾಷಿಂಗ್ಟನ್: ಅಮೆರಿಕಾದ ಬಾಹ್ಯಾಕಾಶ ಯೋಜನೆಯೊಂದರ ಭಾಗವಾಗಿ ಭಾರತ ಮೂಲದ ಅಮೆರಿಕಾ ನಿವಾಸಿ ಸಿರಿಶಾ ಬಾಂಡ್ಲಾ ಅಂತರಿಕ್ಷಕ್ಕೆ ಜಿಗಿಯಲು ಸಿದ್ಧರಾಗಿದ್ದಾರೆ. ಕಲ್ಪನಾ ಚಾವ್ಲಾ ನಂತರ ಅಂತರಿಕ್ಷಯಾನ ಕೈಗೊಳ್ಳುತ್ತಿರುವ ಎರಡನೇ ಭಾರತೀಯ ಮಹಿಳೆ ಇವರಾಗಿದ್ದು, ಒಟ್ಟಾರೆಯಾಗಿ ಈ ಸಾಧನೆ ಮಾಡುತ್ತಿರುವ ನಾಲ್ಕನೇ ಭಾರತೀಯ ವ್ಯಕ್ತಿ ಎಂಬ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಜುಲೈ 11ರಂದು ನ್ಯೂ ಮೆಕ್ಸಿಕೋದಿಂದ ವಿಎಸ್ಎಸ್ ಯುನಿಟಿ ಆಫ್ ವರ್ಜಿನ್ ಗೆಲಾಕ್ಟಿಕ್ ಎಂಬ ಹೆಸರಿನ ಬಾಹ್ಯಾಕಾಶ ನೌಕೆ ಪ್ರಯಾಣ ಕೈಗೊಳ್ಳುತ್ತಿದ್ದು, ಒಟ್ಟು ಆರು ಮಂದಿಯನ್ನೊಳಗೊಂಡ ಈ ನೌಕೆಯಲ್ಲಿ ಸಿರಿಶಾ ಅವರೊಂದಿಗೆ ಇನ್ನೋರ್ವ ಮಹಿಳೆ ಬೆತ್ ಮೊಸೆಸ್ ಇರಲಿದ್ದಾರೆ.
ಈ ಬಗ್ಗೆ ಮಾತನಾಡಿರುವ 34 ವರ್ಷದ ಭಾರತ ಮೂಲದ ಸಿರಿಶಾ ಬಾಂಡ್ಲಾ, ನನಗೆ ಈ ಯೋಜನೆಯ ಭಾಗವಾಗಿರುವುದು ಬಹಳ ಸಂತಸದಾಯಕವಾಗಿದೆ. ಯನಿಟಿ22 ಪಯಣದಲ್ಲಿ ಆರು ಜನರೊಟ್ಟಿಗೆ ನಾನೂ ಒಬ್ಬಳಾಗಿರುತ್ತೇನೆ. ಎಲ್ಲ ಜನರಿಗೂ ಬಾಹ್ಯಾಕಾಶ ಕೈಗೆಟಕುವಂತಾಗಬೇಕು ಎನ್ನುವುದೇ ಈ ಯೋಜನೆಯ ಉದ್ದೇಶ ಎಂದು ಸಿರಿಶಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಸದರಿ ಯೋಜನೆಯ ಬಗ್ಗೆ ಸ್ಪೇಸ್.ಕಾಂ ಜತೆ ಮಾತನಾಡಿರುವ ಸಿರಿಶಾ ಬಾಂಡ್ಲಾ, ವರ್ಜಿನ್ ಗೆಲಾಕ್ಟಿಕ್ ನೌಕೆಯು ಅಂತರಿಕ್ಷದಲ್ಲಿ ಸುಮಾರು 60ರಿಂದ 75 ನಿಮಿಷಗಳ ಕಾಲ ಇರಲಿದೆ. ನಂತರ ನ್ಯೂ ಮೆಕ್ಸಿಕೋದಲ್ಲಿ ನಿಗದಿಪಡಿಸಿದ ಪ್ರದೇಶಕ್ಕೆ ಬಂದಿಳಿಯಲಿದೆ ಎಂದು ತಿಳಿಸಿದ್ದಾರೆ.
I am so incredibly honored to be a part of the amazing crew of #Unity22, and to be a part of a company whose mission is to make space available to all. https://t.co/sPrYy1styc
— Sirisha Bandla (@SirishaBandla) July 2, 2021
ಸಿರಿಶಾ ಬಾಂಡ್ಲಾ ಮೂಲತಃ ಆಂಧ್ರಪ್ರದೇಶ ರಾಜ್ಯದ ಗುಂಟೂರಿನವರಾಗಿದ್ದು, ಟೆಕ್ಸಾಸ್ನಲ್ಲಿ ತಮ್ಮ ಬಾಲ್ಯ ಕಳೆದಿದ್ದಾರೆ. ಸಿರಿಶಾಳ ತಂದೆ ಡಾ.ಮುರಳೀಧರ ಬಾಂಡ್ಲಾ ವಿಜ್ಞಾನಿಯಾಗಿದ್ದು ಅಮೆರಿಕಾದಲ್ಲಿ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಾತ ಬಾಂಡ್ಲಾ ರಾಘಯ್ಯಾ ಕೃಷಿ ವಿಜ್ಞಾನಿಯಾಗಿದ್ದು, ಗುಂಟೂರು ಜಿಲ್ಲೆಯ ಜನಪ್ದು ಹಳ್ಳಿಯಲ್ಲಿ ವಾಸವಿದ್ದಾರೆ. ಮೊಮ್ಮಗಳ ಈ ಸಾಧನೆಯನ್ನು ನೋಡಿದ ಅವರು ಅದರ ಬಗ್ಗೆ ಬಹಳ ಹೆಮ್ಮೆ ವ್ಯಕ್ತಪಡಿಸಿದ್ದು, ಸಿರಿಶಾ ಮೊದಲಿನಿಂದಲೂ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಳು ಈಗ ಅವಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದಿದ್ದಾರೆ.
Join us July 11th for our first fully crewed rocket powered test flight, and the beginning of a new space age.
The countdown begins. #Unity22
https://t.co/5UalYT7Hjb. @RichardBranson pic.twitter.com/ZL9xbCeWQX— Virgin Galactic (@virgingalactic) July 1, 2021
ಇದನ್ನೂ ಓದಿ:
ಸೂರ್ಯನ ಅತಿಸನಿಹದ ಚಿತ್ರ ತೆಗೆದ ಬಾಹ್ಯಾಕಾಶ ನೌಕೆ: ಸೂರ್ಯನ ಅಧ್ಯಯನಕ್ಕೆ ಸಿಕ್ಕಿದೆ ಹೊಸ ವೇಗ