ತಿರುಮಲ ಬೆಟ್ಟ ಹತ್ತುತ್ತಿರುವಾಗ ಅಸ್ವಸ್ಥರಾದ ಭಕ್ತರು; 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು ಆಸ್ಪತ್ರೆಗೆ ಸೇರಿಸಿದ ಕಾನ್​ಸ್ಟೆಬಲ್

ಶೇಖ್​ ಅರ್ಶದ್​ ಎಂಬ ಕಾನ್​ಸ್ಟೆಬಲ್​ ನಾಗೇಶ್ವರಮ್ಮನನ್ನು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 6 ಕಿ.ಮೀ.ದೂರ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ.

ತಿರುಮಲ ಬೆಟ್ಟ ಹತ್ತುತ್ತಿರುವಾಗ ಅಸ್ವಸ್ಥರಾದ ಭಕ್ತರು; 6 ಕಿ.ಮೀ. ಹೆಗಲ ಮೇಲೆ ಹೊತ್ತು ನಡೆದು ಆಸ್ಪತ್ರೆಗೆ ಸೇರಿಸಿದ ಕಾನ್​ಸ್ಟೆಬಲ್
ಹಿರಿಯರನ್ನು ಹೆಗಲಮೇಲೆ ಹೊತ್ತು ಸಾಗುತ್ತಿರುವ ಪೊಲೀಸ್ ಕಾನ್​ಸ್ಟೆಬಲ್​
Follow us
Lakshmi Hegde
|

Updated on:Dec 24, 2020 | 6:24 PM

ತಿರುಮಲ: ದೇವರ ದರ್ಶನಕ್ಕೆಂದು ತಿರುಪತಿ ಬೆಟ್ಟ ಹತ್ತುತ್ತಿದ್ದಂತೆ ದಾರಿ ಮಧ್ಯೆಯೇ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಹಾಗೂ ಜತೆಗಿದ್ದ ಇನ್ನೋರ್ವ ವಯಸ್ಸಾದ ವ್ಯಕ್ತಿಯನ್ನು ಮುಸ್ಲಿಂ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರು ಹೆಗಲ ಮೇಲೆ ಹೊತ್ತು ಸಾಗಿದ ಮಾನವೀಯ ಘಟನೆ ನಡೆದಿದೆ.

ನಂದಲೂರ್ ಮಂಡಲ್​ ನಿವಾಸಿಯಾಗಿರುವ ಮಂಗಿ ನಾಗೇಶ್ವರಮ್ಮ (58) ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಿದ್ದರು. ಆದರೆ ಮಾರ್ಗಮಧ್ಯದಲ್ಲಿ ಅವರಿಗೆ ರಕ್ತದ ಒತ್ತಡ ಅಧಿಕವಾಗಿ ಅಸ್ವಸ್ಥರಾದರು. ಮುಂದೆ ನಡೆಯಲು ಆಕೆಗೆ ಸಾಧ್ಯವಾಗಲೇ ಇಲ್ಲ. ಈ ಹೊತ್ತಲ್ಲಿ ಭಕ್ತರೊಂದಿಗೇ ನಡೆದು ಬರುತ್ತಿದ್ದ ಕಡಪಾ ಜಿಲ್ಲೆಯ ವಿಶೇಷ ಪೊಲೀಸ್ ದಳದ ಸಿಬ್ಬಂದಿ ಇದನ್ನು ಗಮನಿಸಿದರು.

ಅವರಲ್ಲಿ ಶೇಖ್​ ಅರ್ಶದ್​ ಎಂಬ ಕಾನ್​ಸ್ಟೆಬಲ್​ ನಾಗೇಶ್ವರಮ್ಮನವರನ್ನು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 6 ಕಿ.ಮೀ.ದೂರ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗೇ, ನಾಗೇಶ್ವರ್​ ರಾವ್ ಎಂಬ ಹಿರಿಯ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರಾಗಿ, ಅವರನ್ನೂ ಭುಜದ ಮೇಲೆ ಹೊತ್ತು, ವಾಹನ ಸಂಚಾರ ಇರುವ ರಸ್ತೆಗೆ ಕರೆದೊಯ್ದಿದ್ದಾರೆ. ಅರ್ಶದ್​ರ ಈ ಕಾರ್ಯವನ್ನು ಮೇಲಧಿಕಾರಿಗಳು, ಉಳಿದ ಭಕ್ತರು ಶ್ಲಾಘಿಸಿದ್ದಾರೆ.

ಮಗುವಿಗೆ ವಾಹನ ಡಿಕ್ಕಿ: ಮಾನವೀಯತೆಯೇ ಶ್ರೇಷ್ಠ ಧರ್ಮ ಎಂದು ನೆರವು ನೀಡಿದ ಶಾ ಬಜಾರ್ ವ್ಯಾಪಾರಿಗಳು

Published On - 6:19 pm, Thu, 24 December 20

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ಮಿಡಲ್ ಸ್ಟಂಪ್... ಮೊದಲ ಇನಿಂಗ್ಸ್​ನ ಹೀರೋನ ಝೀರೋ ಮಾಡಿದ ಬುಮ್ರಾ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ