30 ನಿಮಿಷಗಳ ಕಾಲ ಕಾಯಿಸಿದ್ದಕ್ಕೆ ಆಂಧ್ರಪ್ರದೇಶ(Andhra Pradesh)ದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ(Mandipalli Ramprasad Reddy )ಪತ್ನಿ ಹರಿತಾ ನಡು ರಸ್ತೆಯಲ್ಲೇ ನಿಲ್ಲಿಸಿ ಸಬ್ಇನ್ಸ್ಪೆಕ್ಟರ್ಗೆ ಬೈದಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅವರು ಕಾರ್ಯಕ್ರಮವೊಂದಕ್ಕೆ ತೆರಳಬೇಕಿತ್ತು, ಪ್ಯಾಸೆಂಜರ್ ಸೀಟ್ನಲ್ಲಿ ಕುಳಿತು ತಾನು 30 ನಿಮಿಷಗಳಿಂದ ಕಾಯುತ್ತಿದ್ದೇನೆ ನೀವು ಏಕೆ ತಡವಾಗಿ ಬಂದಿದ್ದು ಎಂದು ಕೇಳುತ್ತಾ ಕ್ಲಾಸ್ ತೆಗೆದುಕೊಂಡಿದ್ದರು.
ಪೊಲೀಸ್ ಅಧಿಕಾರಿಗೆ ನೂರಾರು ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ, ಅವರು ನಡವಳಿಕೆ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇನ್ನೂ ನಿಮಗೆ ಬೆಳಗಾಗಿರಲಿಲ್ಲವೇ?, ನೀವು ಮದುವೆ ಮನೆಗೆ ಬಂದಿದ್ದಾ ಅಥವಾ ಕೆಲಸ ಮಾಡೋಕೆ ಬಂದಿರೋದ, ನಿಮಗಾಗಿ ಅರ್ಧ ಗಂಟೆ ಕಾಯಬೇಕಾಯಿತು, ನಿಮಗೆ ಯಾರು ಸಂಬಳ ಕೊಡುತ್ತಾರೆ ಸರ್ಕಾರ ಅಥವಾ ವೈಎಸ್ಆರ್ ಕಾಂಗ್ರೆಸ್ ಆ ಎಂದು ಗದರಿಸಿದ್ದರು.
ವಿಡಿಯೋದ ಕೊನೆಯಲ್ಲಿ ಸಬ್ ಇನ್ಸ್ಪೆಕ್ಟರ್ ಹರಿತಾ ರೆಡ್ಡಿಯವರಿಗೆ ಸೆಲ್ಯೂಟ್ ಹೊಡೆದು, ಬೆಂಗಾವಲು ಪಡೆಯನ್ನು ಮುಂದೆ ಹೋಗುವಂತೆ ಸೂಚನೆ ನೀಡಿದರು. ಆದರೆ ಹರಿತಾ ರೆಡ್ಡಿಗೆ ಬೆಂಗಾವಲಾಗಿ ಹೋಗಲು ನಿರಾಕರಿಸಿದರು.
ಮತ್ತಷ್ಟು ಓದಿ: Lok Sabha Session: ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಎಂದರೆ ಹಿಂದೂ ಸಮಾಜವಲ್ಲ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಇದಕ್ಕೆ ವೈಎಸ್ಆರ್ ಕಾಂಗ್ರೆಸ್ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದು, ಸಚಿವರ ಪತ್ನಿಗೂ ರಾಜ ಮರ್ಯಾದಎ ಬೇಕು, ಪೊಲೀಸರಿಗೆ ಜೀತದಾಳಿನಂತೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಚಾರ ಕುರಿತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಮಪ್ರಸಾದ್ ರೆಡ್ಡಿಗೆ ಕರೆ ಮಾಡಿ ವಿವರಣೆ ಕೇಳಿದ್ದಾರೆ. ಈಗ ತಾನೆ ಸಚಿವ ಸ್ಥಾನ ಸಿಕ್ಕಿದೆ, ಈ ರೀತಿ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ವೈಎಸ್ಆರ್ ಕಾಂಗ್ರೆಸ್ ಹಂಚಿಕೊಂಡ ವಿಡಿಯೋ
మంత్రి గారి భార్యకీ రాచమర్యాదలు కావాలట!
రాయచోటిలో పోలీసులు తనకి ఎస్కార్ట్గా రావాలంటూ మంత్రి రాంప్రసాద్ రెడ్డి భార్య రుబాబు
పోలీసుల్ని బానిసల్లా చూస్తూ వార్నింగ్ ఇచ్చిన మంత్రి గారి భార్య
నివ్వెరపోయిన పోలీసులు.. నిస్సహాయ స్థితిలో ఆమెకి సలాం pic.twitter.com/I8dIcSJGkz
— YSR Congress Party (@YSRCParty) July 1, 2024
ತಮ್ಮ ಪತ್ನಿ ಹರಿತಾ ರೆಡ್ಡಿ ಪೊಲೀಸರೊಂದಿಗೆ ನಡೆದುಕೊಂಡಿರುವ ರೀತಿ ನೋವಿನಿಂದ ಕೂಡಿದ್ದು, ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ರಾಮ ಪ್ರಸಾದ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Tue, 2 July 24