4 ತಿಂಗಳ ಹಿಂದಿನ ಹಿಟ್​ ಆ್ಯಂಡ್​ ರನ್ ಪ್ರಕರಣ, ಪೊಲೀಸರಿಗೆ ಶರಣಾದ ಚಾಲಕಿ

ಕಳೆದ ನಾಲ್ಕು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಹಿಟ್​ ಆ್ಯಂಡ್​ ರನ್ ಪ್ರಕರಣ ಮಹತ್ವದ ತಿರುವು ಪಡೆದಿದೆ. ಮಹಿಳಾ ಚಾಲಕಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಮೊದಲು ಅವರಿಗೆ ಜಾಮೀನು ಸಿಕ್ಕಿತ್ತು ಅದಾದ ಬಳಿಕ ಮತ್ತೆ ಪೊಲೀಸರು ಆಕೆಯನ್ನು ಬಂಧಿಸುವ ಪ್ರಯತ್ನ ಮಾಡಿದ್ದರು

4 ತಿಂಗಳ ಹಿಂದಿನ ಹಿಟ್​ ಆ್ಯಂಡ್​ ರನ್ ಪ್ರಕರಣ, ಪೊಲೀಸರಿಗೆ ಶರಣಾದ ಚಾಲಕಿ
ಬಂಧನ-ಸಾಂದರ್ಭಿಕ ಚಿತ್ರImage Credit source: Mid Day
Follow us
ನಯನಾ ರಾಜೀವ್
|

Updated on:Jul 02, 2024 | 10:24 AM

ಮಹಾರಾಷ್ಟ್ರದ ನಾಗ್ಪುರದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಹಿಟ್​ ಆ್ಯಂಡ್​ ರನ್(Hit And Run) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಪೊಲೀಸರಿಗೆ ಶರಣಾಗಿದ್ದಾರೆ. ಕುಡಿದ ಅಮಲಿನಲ್ಲಿ ಅವರು ಇಬ್ಬರು ಬೈಕ್​ ಸವಾರರಿಗೆ ಡಿಕ್ಕಿ ಹೊಡೆದಿದ್ದರು, ಇದರ ಪರಿಣಾಮ ಇಬ್ಬರು ಮಾರಣಾಂತಿಕವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮಹಿಳಾ ಚಾಲಕಿ ರಿತಿಕಾ ಅಲಿಯಾಸ್ ರಿತು ಸೋಮವಾರ ನಗರ ಪೊಲೀಸ್​ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದು, ಸಂಜೆ ಔಪಚಾರಿಕವಾಗಿ ಬಂಧಿಸಲಾಯಿತು.

ಕಳೆದ ತಿಂಗಳ ಕೊನೆಯಲ್ಲಿ, ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಮಹಿಳೆಗೆ ಬಂಧನ ಪೂರ್ವ ಜಾಮೀನನ್ನು ನಿರಾಕರಿಸಿತು. ವಿವೇಕವಿರುವವರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದಿಲ್ಲ ಇದು ಅವರ ದುರ್ನಡತೆಗೆ ಸಾಕ್ಷಿ ಎಂದು ಹೇಳಿದ್ದಾರೆ.

ಫೆಬ್ರವರಿ 25ರಂದು ರಾಮ್ ಜುಲಾ ಸೇತುವೆಯ ಮೇಲೆ ಘಟನೆ ನಡೆದಿದ್ದು, ಮಾಲೂ ಮದ್ಯದ ಅಮಲಿನಲ್ಲಿ ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ ಇಬ್ಬರು ಸವಾರರಾದ ಮೊಹಮ್ಮದ್ ಹುಸೇನ್ ಗುಲಾಮ್ ಮುಸ್ತಫಾ ಮತ್ತು ಮೊಹಮ್ಮದ್ ಅತೀಫ್ ಮೊಹಮ್ಮದ್ ಜಿಯಾ ಅವರಿಗೆ ಮಾರಣಾಂತಿಕ ಗಾಯಗಳಾಗಿವೆ.ಮಾಲೂ ವಿರುದ್ಧ ಆರಂಭದಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನಗಳ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಓದಿ: ಹಿಟ್ ಆ್ಯಂಡ್​ ರನ್: 300 ಕೋಟಿ ರೂ. ಆಸ್ತಿಗಾಗಿ ಮಾವನ ಹತ್ಯೆಗೆ ಸುಪಾರಿ ಕೊಟ್ಟಿದ್ದ ಸೊಸೆ

ಅಪಘಾತದ ತೀವ್ರತೆ, ಜನರ ಪ್ರತಿಭಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರಂಭದಲ್ಲಿ ಮಹಿಳೆಗೆ ಜಾಮೀನು ನೀಡಲಾಗಿತ್ತು. ಆದಾಗ್ಯೂ, ಪೊಲೀಸರು ನಂತರ ಮತ್ತೆ ಮಾಲೂನನ್ನು ಬಂಧಿಸಲು ಪ್ರಯತ್ನಿಸಿದರು. ಆಕೆಯನ್ನು ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆ

ಮಹಾರಾಷ್ಟ್ರದ ಪುಣೆಯಲ್ಲಿ ಇದೇ ಮಾದರಿಯ ಘಟನೆಯೊಂದು ನಡೆದಿತ್ತು, ವೇದಾಂತ್​ ಅಗರ್ವಾಲ್ ಎಂಬ 17 ವರ್ಷದ ಬಾಲಕ ಕುಡಿದ ಅಮಲಿನಲ್ಲಿ ಪೋಷೆ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬೈಕ್​ಗೆ ಗುದ್ದಿದ ಪರಿಣಾಮ ಇಬ್ಬರು ಎಂಜಿನಿಯರ್​ಗಳು ಸಾವನ್ನಪ್ಪಿದ್ದರು. ಇದಾದ ಬಳಿಕ ಅವರಿಗೆ ಜಾಮೀನು ನೀಡಲಾಗಿತ್ತು, ಬಳಿಕ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬಂಧಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:22 am, Tue, 2 July 24

ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
ಮೈಸೂರು: ತ್ರಿವೇಣಿ ಸಂಗಮ ಕುಂಭಮೇಳದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ನಾಲ್ಕು ಗ್ರಹಗಳ ಶುಭಫಲವಿದೆ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಹಾಸಿಗೆ ಹಿಡಿದ ಮಗನ ಚಿಕಿತ್ಸೆಗೆ ಕುಮಾರಸ್ವಾಮಿ ಬಳಿ ಸಹಾಯ ಕೇಳಿದ ತಾಯಿ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಕೊಹ್ಲಿಯ ಕೈ ಮುಟ್ಟಿ ಸ್ವರ್ಗ ಸಿಕ್ಕವನಂತೆ ಕುಣಿದಾಟಿದ ಬಾಲಕ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಬೆಂಗಳೂರು: ಮಾದಾವರ ಸುತ್ತಮುತ್ತ ಫುಲ್​ ಟ್ರಾಫಿಕ್​ಜಾಮ್, ವಾಹನ ಸವಾರರ ಪರದಾಟ
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
ಕಟಕ್‌ನಲ್ಲಿ ಅರ್ಧಕ್ಕೆ ನಿಂತ ಪಂದ್ಯ; ಮೈದಾನ ತೊರೆದ ಎಲ್ಲಾ ಆಟಗಾರರು..!
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
Aero india: ಬೆಂಗಳೂರಿನಲ್ಲಿ ರಾಜನಾಥ್​ ಸಿಂಗ್​ ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!