ಆಂಧ್ರ ರಾಜಕೀಯದಲ್ಲಿ ಸಂಚಲನ: ಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರ ಕೈಗೊಂಡ ಜಗನ್!

ಹೈದರಾಬಾದ್​: ಆಂಧ್ರದಲ್ಲಿ ವಿಧಾನಪರಿಷತ್ ರದ್ದುಪಡಿಸುವ ಮಹತ್ವದ ನಿರ್ಧಾರವನ್ನ ಸಿಎಂ ಜಗನ್ ಮೋಹನರೆಡ್ಡಿ ಕೈಗೊಂಡಿದ್ದಾರೆ. ಈ ಹಿಂದೆಯೂ ಹಲವು ಮಹತ್ವದ ನಿರ್ಣಯಗಳನ್ನ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದರು. ಇದೀಗ ಪರಿಷತ್​ನ ರದ್ದುಪಡಿಸಿರೋದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. 3 ರಾಜಧಾನಿಗಳ ರಚನೆಗೆ ಟಿಡಿಪಿ ವಿರೋಧ: ಆಂಧ್ರಪ್ರದೇಶದಲ್ಲಿ 3 ರಾಜಧಾನಿಗಳನ್ನು ರಚಿಸುವ ಜಗನ್ ಮೋಹನರೆಡ್ಡಿ ಅವರ ಯೋಜನೆಗೆ ಆಂಧ್ರ ವಿಧಾನಪರಿಷತ್ತು ತಡೆಯೊಡ್ಡಿತ್ತು. ಈ ಮಸೂದೆ ಜಾರಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ಪರಿಷತ್ತಿನಲ್ಲಿ ಅನುಮೋದನೆ ದೊರೆಯದೆ ವಿಳಂಬವಾಗುತ್ತಿತ್ತು. ಅಮರಾವತಿಯಲ್ಲಿಯೇ ರಾಜಧಾನಿ ರಚನೆಯಾಗಬೇಕೆಂದು ವಾದಿಸಿದ್ದ […]

ಆಂಧ್ರ ರಾಜಕೀಯದಲ್ಲಿ ಸಂಚಲನ: ಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರ ಕೈಗೊಂಡ ಜಗನ್!
Follow us
ಸಾಧು ಶ್ರೀನಾಥ್​
|

Updated on:Jan 29, 2020 | 6:45 AM

ಹೈದರಾಬಾದ್​: ಆಂಧ್ರದಲ್ಲಿ ವಿಧಾನಪರಿಷತ್ ರದ್ದುಪಡಿಸುವ ಮಹತ್ವದ ನಿರ್ಧಾರವನ್ನ ಸಿಎಂ ಜಗನ್ ಮೋಹನರೆಡ್ಡಿ ಕೈಗೊಂಡಿದ್ದಾರೆ. ಈ ಹಿಂದೆಯೂ ಹಲವು ಮಹತ್ವದ ನಿರ್ಣಯಗಳನ್ನ ಜಗನ್ ಮೋಹನ್ ರೆಡ್ಡಿ ಕೈಗೊಂಡಿದ್ದರು. ಇದೀಗ ಪರಿಷತ್​ನ ರದ್ದುಪಡಿಸಿರೋದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

3 ರಾಜಧಾನಿಗಳ ರಚನೆಗೆ ಟಿಡಿಪಿ ವಿರೋಧ: ಆಂಧ್ರಪ್ರದೇಶದಲ್ಲಿ 3 ರಾಜಧಾನಿಗಳನ್ನು ರಚಿಸುವ ಜಗನ್ ಮೋಹನರೆಡ್ಡಿ ಅವರ ಯೋಜನೆಗೆ ಆಂಧ್ರ ವಿಧಾನಪರಿಷತ್ತು ತಡೆಯೊಡ್ಡಿತ್ತು. ಈ ಮಸೂದೆ ಜಾರಿಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆತರೂ ಪರಿಷತ್ತಿನಲ್ಲಿ ಅನುಮೋದನೆ ದೊರೆಯದೆ ವಿಳಂಬವಾಗುತ್ತಿತ್ತು. ಅಮರಾವತಿಯಲ್ಲಿಯೇ ರಾಜಧಾನಿ ರಚನೆಯಾಗಬೇಕೆಂದು ವಾದಿಸಿದ್ದ ವಿರೋಧ ಪಕ್ಷ ಟಿಡಿಪಿ 3 ರಾಜಧಾನಿಗಳ ರಚನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಪರಿಷತ್ತಿನಲ್ಲಿ ಟಿಡಿಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು 3 ರಾಜಧಾನಿಗಳ ರಚನೆ ನಿರ್ಧಾರ ಜಾರಿಯಾಗುವುದನ್ನ ತಡೆಯುವಲ್ಲಿ ಯಶಸ್ವಿಯಾಗಿತ್ತು.

ಎಲ್ಲಾ ಬೆಳವಣಿಗೆಗಳ ಮೊದಲ ಹಂತವಾಗಿ ವಿಧಾನಪರಿಷತ್ತನ್ನೇ ರದ್ದುಪಡಿಸುವ ನಿರ್ಧಾರವನ್ನು ಜಗನಮೋಹನ ರೆಡ್ಡಿ ತೆಗೆದುಕೊಂಡಿದ್ದಾರೆ. ನಂತರ ಆಂಧ್ರದಲ್ಲಿ 3 ರಾಜಧಾನಿಗಳ ರಚನೆಯ ಮುಂದಿನ ಕ್ರಮಗಳ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದಾರೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ವಿಧಾನಸಭೆಯಲ್ಲಿ ಬಹುಸಂಖ್ಯೆಯ ಶಾಸಕರು ಪರಿಷತ್ತು ರದ್ದುಮಾಡುವ ನಿರ್ಧಾರದ ಪರವಾಗಿ ಮತಚಲಾಯಿಸಿದ್ದಾರೆ.

Published On - 7:14 am, Tue, 28 January 20

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ