ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಟಿಡಿಪಿ ಶಾಸಕ ಕೆ ರಘುರಾಮ ಕೃಷ್ಣರಾಜು ದೂರಿನ ಮೇರೆಗೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಸಿಐಡಿ ಮಾಜಿ ಮುಖ್ಯಸ್ಥ ಪಿವಿ ಸುನೀಲ್ ಕುಮಾರ್ ಮತ್ತು ಗುಪ್ತಚರ ಮಾಜಿ ಮುಖ್ಯಸ್ಥ ಪಿಎಸ್ಆರ್ ಆಂಜನೇಯುಲು ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
2021ರಲ್ಲಿ ಸಿಐಡಿ ಅಧಿಕಾರಿಗಳು ಅವರನ್ನು ಹೈದರಾಬಾದ್‌ನಿಂದ ಬಂಧಿಸಿದ್ದರು ಎಂದು ಶಾಸಕ ರಾಜು ತಿಳಿಸಿದ್ದಾರೆ. ಉಂಡಿ ಶಾಸಕ ಕೆ ರಘುರಾಮ ಕೃಷ್ಣರಾಜು ಈ ದೂರು ನೀಡಿದ್ದು, 2021ರ ಮೇ ತಿಂಗಳಲ್ಲಿ ನನ್ನನ್ನು ಬಂಧಿಸಿದ್ದರು. ನನ್ನನ್ನು ಎಳೆದುಕೊಂಡು ಹೋಗಿ ದೈಹಿಕವಾಗಿ ಥಳಿಸಿದ್ದರು.
ಮತ್ತಷ್ಟು ಓದಿ: ರಾಜಕೀಯ ಕುರುಕ್ಷೇತ್ರದಲ್ಲಿ ಜನರೇ ಕೃಷ್ಣ, ನಾನೇ ಅರ್ಜುನ ಎಂದ ಜಗನ್ ರೆಡ್ಡಿ
ಬೆಲ್ಟ್, ದೊಣ್ಣೆಯಿಂದ ಥಳಿಸಿದ್ದರು. ಹೃದಯ ಸಂಬಂಧಿ ಸಮಸ್ಯೆ ಇದ್ದರೂ ಔಷಧಿ ತೆಗೆದುಕೊಳ್ಳಲು ಕೂಡ ಅವಕಾಶ ಮಾಡಿಕೊಡಲಿಲ್ಲ, ನಾನು ಬೈಪಾಸ್ ಸರ್ಜರಿಗೆ ಒಳಗಾಗಿರುವುದು ಕೂಡ ಅವರಿಗೆ ತಿಳಿದಿತ್ತು ಎಂದು ಆರೋಪಿಸಿದ್ದಾರೆ.
ನಂತರ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯೆ ಪ್ರಭಾವತಿ ಎಂಬುವವರು ಉತ್ತಮ ಚಿಕಿತ್ಸೆಯನ್ನೂ ನೀಡಲಿಲ್ಲ, ಅಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಟೀಕಿಸಿದರೆ ಕೊಲೆ ಮಾಡುವುದಾಗಿ ಪಿವಿ ಸುನೀಲ್ ಕುಮಾರ್ ಬೆದರಿಕೆ ಹಾಕಿದ್ದರು ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ