2100ರ ವೇಳೆಗೆ ಭಾರತದ ಜನಸಂಖ್ಯೆ ಎಷ್ಟಾಗುತ್ತೆ, ವಿಶ್ವಸಂಸ್ಥೆಯ ವರದಿಯಲ್ಲೇನಿದೆ? ಇಲ್ಲಿದೆ ಮಾಹಿತಿ

ಜನಸಂಖ್ಯೆ ವಿಷಯದಲ್ಲಿ ಭಾರತವು ಮೊದಲ ಸ್ಥಾನದಲ್ಲಿದ್ದರೆ, ಚೀನಾವು ಎರಡನೇ ಸ್ಥಾನದಲ್ಲಿದೆ. 2100ರ ವೇಳೆಗೆ ಭಾರತದ ಜನಸಂಖ್ಯೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಜನಸಂಖ್ಯೆಯ ಪ್ರಮಾಣ ಚೀನಾಗಿಂತ ಎರಡೂವರೆ ಪಟ್ಟು ಹೆಚ್ಚಿರಲಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ತಿಳಿಸಿದೆ.

2100ರ ವೇಳೆಗೆ ಭಾರತದ ಜನಸಂಖ್ಯೆ ಎಷ್ಟಾಗುತ್ತೆ, ವಿಶ್ವಸಂಸ್ಥೆಯ ವರದಿಯಲ್ಲೇನಿದೆ? ಇಲ್ಲಿದೆ ಮಾಹಿತಿ
Follow us
|

Updated on: Jul 12, 2024 | 12:46 PM

ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಚೀನಾವನ್ನು ಹಿಂದಿಕ್ಕಿದ ಭಾರತವು 2100ರ ವೇಳೆಗೂ ಅದೇ ಸ್ಥಾನದಲ್ಲಿ ಮುಂದುವರೆಯಲಿದೆ. 2100ರ ವೇಳೆಗೆ ಭಾರತದ ಜನಸಂಖ್ಯೆ ಕಡಿಮೆಯಾದರೂ ಕೂಡ ಚೀನಾಕ್ಕಿಂತ 2.5 ಪಟ್ಟು ಹೆಚ್ಚಿರಲಿದೆ ಎಂದು ವಿಶ್ವಸಂಸ್ಥೆಯ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ಜನಸಂಖ್ಯೆ ಈ ಶತಮಾನದಲ್ಲೇ 10.3 ಶತಕೋಟಿ ತಲುಪುವ ನಿರೀಕ್ಷೆ ಇದೆ. 2080ರ ಸಮಯದಲ್ಲಿ ಈಗಿರುವ 8.2 ಶತಕೋಟಿಯಿಂದ 10.3 ಶತಕೋಟಿ ಆಗಲಿದೆ. ಜಪಾನ್ ಹಾಗೂ ಚೀನಾ ಸೇರಿದಂತೆ 63 ರಾಷ್ಟ್ರಗಳ ಜನಸಂಖ್ಯೆ 2024ಕ್ಕೂ ಮುನ್ನವೇ ಗರಿಷ್ಠ ಮಟ್ಟವನ್ನು ತಲುಪಿದ್ದು, ಭಾರತ ಹಾಗೂ ಅಮೆರಿಕ ಸೇರಿದಂತೆ 126 ದೇಶಗಳ ಜನಸಂಖ್ಯೆ 2100ರ ಸಮಯದಲ್ಲಿ ಗರಿಷ್ಠ ಮಟ್ಟಕ್ಕೇರುವ ನಿರೀಕ್ಷೆ ಇದೆ.

2022ರ ಬಳಿಕ ಜೀವಿತಾವಧಿ ಎಲ್ಲಾ ದೇಶ ಹಾಗೂ ಪ್ರದೇಶಗಳಲ್ಲಿ ಬಹುತೇಕ ಕೋವಿಡ್ ಪೂರ್ವ ಮಟ್ಟ ತಲುಪಿದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಕುಸಿತ ಕಂಡಿತ್ತು. ಬಳಿಕ 73.3ಕ್ಕೆ ಏರಿಕೆಯಾಗಿತ್ತು. 2054ರ ವೇಳೆಗೆ ಜಾಗತಿಕವಾಗಿ ನಿರೀಕ್ಷಿತ ಜೀವಿತಾವಧಿ 77.4 ವರ್ಷಗಳಿಗೆ ಏರುವ ಸಾಧ್ಯತೆ ಇದೆ.

ಮತ್ತಷ್ಟು ಓದಿ: World Population Day 2024 : ದೇಶದ ಅಭಿವೃದ್ಧಿಗೆ ಹೊರೆಯಾಗದಿರಲಿ ಜನ ಸಂಖ್ಯೆ ಹೆಚ್ಚಳ

ಭಾರತವೀಗ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿದೆ. ಇನ್ನು 70 ವರ್ಷಗಳಲ್ಲಿ ಭಾರತದ ಜನಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

2011ರಲ್ಲಿ ನಡೆದ ಜನಗಣತಿಯಲ್ಲಿ ಭಾರತದ ಜನಸಂಖ್ಯೆ 121 ಕೋಟಿ ಇತ್ತು. ಭಾರತದಲ್ಲಿ ಪುರುಷರ ಜೀವಿತಾವಧಿ 71 ವರ್ಷ ಇತ್ತು ಮತ್ತು ಮಹಿಳೆಯರ ಸರಾಸರಿ ಆಯಸ್ಸು 74 ವರ್ಷಗಳು ಇದ್ದವು. ವಿಶ್ವಸಂಸ್ಥೆಯ ವರದಿಯ ಪ್ರಕಾರ, 2006-2023ರ ಅವಧಿಯಲ್ಲಿ ಭಾರತದಲ್ಲಿ ಬಾಲ್ಯವಿವಾಹ ಶೇ.23 ರಷ್ಟಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಲ್ಯಾಬ್ ಟೆಕ್ನಿಷಿಯನ್‌; ದಂಗಾದ ರೋಗಿಗಳು
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ನನ್ನ ಗಂಡನಿಗೆ MLA ಮತ್ತು ಮಗ 30 ಲಕ್ಷಕ್ಕೆ ಟಾರ್ಚರ್ ಕೊಟ್ಟವ್ರೆ ಸರ್
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
ಪಾದಯಾತ್ರೆ ಮುಗಿಯುವುದರೊಳಗೆ ಸಿಎಂ ರಾಜೀನಾಮೆ ಕೊಡುತ್ತಾರೆ: ಯಡಿಯೂರಪ್ಪ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
BJP JDS Padayatra: ಮೈಸೂರು ಚಲೋ ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಭಾಷಣ
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ನಥಿಂಗ್ ಫೋನ್ ಸಿರೀಸ್​ನಲ್ಲಿ ಬಂತು ಮತ್ತೊಂದು ಸೂಪರ್ ಡಿಸೈನ್ ಫೋನ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಬೌಂಡರಿ ಲೈನ್​ನಲ್ಲಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಮಿಚೆಲ್ ಸ್ಯಾಂಟ್ನರ್
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
ಹೇಗಿರಲಿದೆ ತರುಣ್ ಸುಧೀರ್-ಸೋನಲ್ ವಿವಾಹ? ಮಾಹಿತಿ ಕೊಟ್ಟ ಜೋಡಿ
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
‘ದ್ವಾಪರ..’ ಹಾಡನ್ನು ಬರೆಯೋಕೆ ನಾಗೇಂದ್ರ ಪ್ರಸಾದ್ ತೆಗೆದುಕೊಂಡ ಸಮಯ ಇಷ್ಟೇ.
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ
ಮುಡಾ ಹಗರಣ ವಿರುದ್ಧ ಮೈತ್ರಿನಾಯಕರ ಪಾದಯಾತ್ರೆ, ಲೈವ್ ವೀಕ್ಷಿಸಿ