ವಿಜಯವಾಡ: ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧಪಕ್ಷದಲ್ಲಿದ್ದಾಗ ಕೆಳ ನ್ಯಾಯಾಲಯಗಳು ನೀಡಿದ ಕೆಲವು ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಮುಚ್ಚುವ ಕುರಿತು ಆಂಧ್ರಪ್ರದೇಶ ಹೈಕೋರ್ಟ್ 11 ಸುವೊ ಮೋಟು ಪರಿಷ್ಕರಣೆ ಅರ್ಜಿಗಳನ್ನು ದಾಖಲಿಸಿದೆ. ಬುಧವಾರ ನ್ಯಾಯಮೂರ್ತಿ ಕಣ್ಣೇಗಂಟಿ ಲಲಿತಾ ಮನವಿಗಳನ್ನು ಆಲಿಸಿದರಾದರೂ, ಅಡ್ವೊಕೇಟ್ ಜನರಲ್ ಸುಬ್ರಮಣ್ಯಂ ಶ್ರೀರಾಮ್ ಅವರ ತೀವ್ರ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಿರುವ ಪೊಲೀಸರು, ಮೂಲ ಅರ್ಜಿದಾರರು, ವೈ ಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರರಿಗೆ ನೋಟಿಸ್ ನೀಡುವುದರಿಂದ ಹಿಂದೆ ಸರಿದರು.
ಹೈಕೋರ್ಟ್ ತೆಗೆದುಕೊಂಡಿರುವ ಈ ಅಭೂತಪೂರ್ವ ಸುವೊ ಮೋಟು ಕ್ರಮವು ಹೈಕೋರ್ಟ್‌ನ ಆಡಳಿತ ಸಮಿತಿ ಮಾಡಿರುವ ಶಿಫಾರಸನ್ನು ಆಧರಿಸಿದೆ. 2016 ರಲ್ಲಿ ಪ್ರತಿಪಕ್ಷದಲ್ಲಿದ್ದಾಗ, ವೈಎಸ್ಆರ್ಸಿ ಪಕ್ಷದ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಅಂದಿನ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಮತ್ತು ಅಮರಾವತಿ ಭೂ ಹಗರಣದ ವಿರುದ್ಧ ಕೆಲವು ಟೀಕೆಗಳನ್ನು ಮಾಡಿದ್ದರು. ಅದೇ ಹಿನ್ನೆಲೆಯಲ್ಲಿ ಅನಂತಪುರ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಅವರ ವಿರುದ್ಧ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಪ್ರಕರಣಗಳನ್ನು ಕೈಗೆತ್ತಿಕೊಂಡ ಪೊಲೀಸ್ ಪೂರಕ ಮತ್ತು ಕ್ರಮ ತೆಗೆದುಕೊಳ್ಳಬಹದಾದ ಸಾಕ್ಷ್ಯಾಧಾರಗಳಿಲ್ಲ ಎಂದು ಅಂತಿಮ ವರದಿ ಸಲ್ಲಿಸಿತ್ತು. ಹಾಗೆಯೇ, ಮನವಿದಾರರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ಗಳಿಗೆ ಸದರಿ ಪ್ರಕರಣಗಳನ್ನು ಮುಚ್ಚುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದರು. ಅದಾದ ನಂತರವೇ ಕೋರ್ಟುಗಳು ಆ ಪ್ರಕರಣಗಳನ್ನು ಮುಚ್ಚಿದ್ದವು. ಕೆಳಹಂತದ ಕ್ರಮಗಳಲ್ಲಿ ಪ್ರಮಾದವನ್ನು ಕಂಡಿರುವ ಉಚ್ಛ ನ್ಯಾಯಾಲಯದ ಆಡಳಿತಾತ್ಮಕ ಸಮಿತಿ ಒಂದು ಆಡಳಿತಾತ್ಮಕ ನಿರ್ಣಯ ತೆಗೆದುಕೊಂಡು ಆ ಪ್ರಕರಣಗಳ ಪುನರ್ ವಿಚಾರಣೆ ನಡೆಸುವ ಸುವೊ ಮೋಟು ನಿರ್ಧಾರ ಪ್ರಕಟಿಸಿದೆ. .
ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 397, 401, 482, 483ಗಳ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿ ಹೈಕೋರ್ಟ್ ಆಡಳಿತಾತ್ಮಕ ಸುವೊ ಮೋಟು ಕ್ರಮಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ ಎಂದು ಅಡ್ವೋಕೇಟ್ ಜನರಲ್ ಶ್ರೀರಾಮ್ ವಾದಿಸಿದರು. ನ್ಯಾಯಾಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಆಡಳಿತಾತ್ಮಕ ನಿರ್ಧಾರದ ಆಧಾರದ ಮೇಲೆ ಸುವೊ ಮೊಟು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ವಿಷಯಗಳನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ
ಅಡ್ವೊಕೇಟ್ ಜನರಲ್ ಶ್ರೀರಾಮ್ ಅವರು ಉಚ್ಛ ನ್ಯಾಯಾಲಯದ ರೆಜಿಸ್ಟ್ರೀ ಯಾವ ಸಂದರ್ಭಗಳನ್ನು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ತಿಳಿಸಿಲ್ಲ ಎಂದು ಮನವಿ ಸಲ್ಲಿಸಿದರು. ‘ನಾವು ಈ ಕ್ರಮವನ್ನು ಯಾವ ಎಂದು ಆಧಾರದಲ್ಲಿ ತೆಗದುಕೊಳ್ಳಲಾಗಿದೆ ಎಂದು ರಿಜಿಸ್ಟ್ರಾರ್ (ನ್ಯಾಯಾಂಗ) ಕೇಳಿದ್ದೇವೆ. ಸಮಿತಿಯ ವರದಿಯನ್ನು ಹಂಚಿಕೊಳ್ಳದೆ ಆಡಳಿತ ಸಮಿತಿಯ ನಿರ್ಧಾರವನ್ನು ಆಧರಿಸಿದೆ ಎಂದು ಅವರು ಉತ್ತರಿಸಿದ್ದಾರೆ,’ ಎಂದು ಹೇಳಿದ ಶ್ರೀರಾಮ್, ವರದಿಯ ವಿಷಯಗಳನ್ನು ತಿಳಿದುಕೊಳ್ಳುವ ಎಲ್ಲ ಹಕ್ಕನ್ನು ಪ್ರತಿವಾದಿಗಳು ಹೊಂದಿದ್ದಾರೆ ಎಂದರು.
ಇದಕ್ಕೆ ಮೊದಲು, ವಿಚಾರಣೆ ಆರಂಭವಾದ ನಂತರ ಪ್ರತಿವಾದಿಗಳಿಗೆ ನೋಟೀಸನ್ನು ಜಾರಿ ಮಾಡುವುದಾಗಿ ನ್ಯಾಯಮೂರ್ತಗಳು ಹೇಳಿದಾಗ ಶ್ರೀರಾಮ್ ಅವರು ಅದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದರು. ವಿಷಯಕ್ಕೆ ಸಬಂಧಿಸಿದಂತೆ ಇಂಥ ಕ್ರಮವನ್ನು ಈ ಹಿಂದೆ ಯಾವತ್ತಾದರೂ ತೆಗೆದುಕೊಳ್ಳಲಾಗಿದೆಯೇ ಎಂದು ತಾವು ಖ್ಯಾತ ನ್ಯಾಯವಾದಿಗಳನ್ನು ಕೇಳಿದ್ದು ಅವರು ನಕಾರಾತ್ಮ ಉತ್ತರ ನೀಡಿದ್ದಾರೆ ಎಂದು ಅವರ ಕೋರ್ಟ್ಗೆ ತಿಳಿಸಿದರು.
‘ಒಂದು ವೇಳೆ ಹೈಕೋರ್ಟ್ ಆಡಳಿತಾತ್ಮಕ ಸಮಿತಿಯ ವರದಿಯನ್ನು ಕಾನೂನಾತ್ಮಕ ದೃಷ್ಟಿಯಿಂದ ನೋಡಿದ್ದರೆ ಅದಕ್ಕೆ ಬೇರೆಯೇ ಅರ್ಥವಿರುತ್ತಿತ್ತು. ಆದರಿಲ್ಲಿ ಕೋರ್ಟ್ನ ಕ್ರಮ ತದ್ವಿರುದ್ಧವಾಗಿದೆ ಮತ್ತು ಅದು ಕಾನೂನು ಪರವೀಕ್ಷಣೆಯಲ್ಲಿ ಬಿದ್ದುಹೋಗುತ್ತದೆ,’ ಎಂದು ಶ್ರೀರಾಮ್ ಹೇಳಿದರು. ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.