
ಜಾತಿ, ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರು ದ್ವೇಷ ಕಾರುತ್ತಿರುವ ಈ ಸಮಯದಲ್ಲಿ ಇಲ್ಲೊಂದು ಮುಸ್ಲಿಂ ಕುಟುಂಬ ಹನುಮಾನ್ ಮಂದಿರವನ್ನು ಕಟ್ಟಿ ಎಲ್ಲರಿಗೂ ಮಾದಿರಿಯಾಗಿದ್ದಾರೆ. ಪೂರ್ವಜರು ಕೊಟ್ಟ ಮಾತಿಗೆ ತಲೆದೂಗಿ ಈ ಕುಟುಂಬವು ಆಂಜನೇಯನ ದೇವಸ್ಥಾನವನ್ನು ನಿರ್ಮಿಸುತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಕುಟುಂಬ 14 ವರ್ಷಗಳ ಹಿಂದೆಯೇ ಈ ಕಾಮಗಾರಿ ಆರಂಭಿಸಿತ್ತು, ಈಗಲೂ ಮುಂದುವರೆದಿದೆ. ಚಿತ್ತೂರು ಜಿಲ್ಲೆಯ ಪುಲಿಚೇರಲ್ ಮಂಡಲದ ಕೆ.ಕೊತ್ತಪೇಟ ಗ್ರಾಮದ ಫಿರೋಜ್ ಮತ್ತು ಚಾಂದ್ ಭಾಷಾ ಸಹೋದರರು ತಮ್ಮ ತಂದೆ ಅಜೀದ್ ಬಾಷಾ ಅವರ ಆಶಯದಂತೆ ಏಳು ದೇವಾಲಯಗಳ ಸಂಕೀರ್ಣದೊಂದಿಗೆ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ.
ಫಿರೋಜ್ ಮತ್ತು ಚಾಂದ್ ಬಾಷಾ ಅವರ ತಾತನಿಗೆ ಮಕ್ಕಳಿಲ್ಲದ ಕಾರಣ ಸ್ವಾಮೀಜಿಯೊಬ್ಬರ ಸಲಹೆ ಮೇರೆಗೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದರು. ಫಿರೋಜ್ ಮತ್ತು ಚಾಂದ್ ಬಾಷಾ ತಮ್ಮ ತಂದೆ ಅಜೀದ್ ಬಾಷಾ ಅವರು ತಮ್ಮ ಅಜ್ಜನ ಪೂಜೆಯ ಫಲವೆಂದು ಹೇಳುತ್ತಾರೆ. ಹಾಗಾಗಿ ತಂದೆಯ ಮಹತ್ವಾಕಾಂಕ್ಷೆಯಂತೆ ಈ ದೇವಾಲಯವನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದರು.
ಮತ್ತಷ್ಟು ಓದಿ: ಒಂದೇ ವಾರದಲ್ಲಿ 2ನೇ ಬಾರಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲು ಓಪನ್; ಕಾರಣ ಇಲ್ಲಿದೆ
ದೇವಾಲಯದಲ್ಲಿ ಏಳು ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಕಾಮಗಾರಿ ಆರಂಭವಾಗಿದೆ ಎಂದು ಫಿರೋಜ್ ತಿಳಿಸಿದರು. 2010ರಲ್ಲಿ ಈ ದೇವಸ್ಥಾನದ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಈ ದೇವಸ್ಥಾನಕ್ಕೆ ಮೇಸ್ತ್ರಿ ಹಾಗೂ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದರು. ತಮ್ಮ ಶಕ್ತಿ ಮೀರಿ ಖರ್ಚು ಮಾಡಿ ಈ ದೇವಸ್ಥಾನ ಕಟ್ಟುತ್ತಿದ್ದಾರೆ.
ಆದರೆ, ಪ್ರತಿದಿನದ ಖರ್ಚಿನ ಬಗ್ಗೆ ಯೋಚಿಸುತ್ತಿರಲಿಲ್ಲ. ಪ್ರಸ್ತುತ ಈ ದೇವಾಲಯದ ಆವರಣದಲ್ಲಿ ಆಂಜನೇಯಸ್ವಾಮಿ, ವಿನಾಯಕ ಮತ್ತು ಸಾಯಿಬಾಬಾ ಮಂದಿರಗಳನ್ನು ನಿರ್ಮಿಸಲಾಗಿದೆ. ಆದರೆ, ದಾನಿಗಳು ನೆರವು ನೀಡಿದರೆ ಉಳಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಂದಿರ ನಿರ್ಮಾಣ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ.
ಕೆ.ಕೊತ್ತಪೇಟ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ದೇವಸ್ಥಾನದಲ್ಲಿ ಏಳು ದೇವರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ, ಮೊದಲು ಆಂಜನೇಯಸ್ವಾಮಿ ಮಂದಿರ ನಿರ್ಮಾಣವಾಗಿದೆ. ನಂತರ ಅಕ್ಕಪಕ್ಕದಲ್ಲಿ ಗಣೇಶ ಮತ್ತು ಸಾಯಿಬಾಬಾರವರ ಗುಡಿಗಳನ್ನು ನಿರ್ಮಿಸಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಕಂಕಣ ಕಟ್ಟಿ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ನೀಡಿದರು. ತಿರುಮಲ ಶ್ರೀವಾರಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಬರುವ ಅನೇಕ ಭಕ್ತರಿಗೆ ವಿಶ್ರಾಂತಿ ಪಡೆಯಲು ತಮ್ಮ ದೇವಸ್ಥಾನ ಲಭ್ಯವಾಗಲಿದೆ ಎನ್ನುತ್ತಾರೆ ಈ ಮುಸ್ಲಿಂ ಬಾಂಧವರು. ಅವರ ಈ ಕಾರ್ಯ ಉಳಿದವರಿಗೂ ಮಾದರಿಯಾಗಲಿ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ