Anil Hegde: ಬಿಹಾರ ರಾಜ್ಯಸಭಾ ಉಪಚುನಾವಣೆ; ಜೆಡಿಯುದಿಂದ ಮಂಗಳೂರು ಮೂಲದ ಅನಿಲ್ ಹೆಗ್ಡೆ ಕಣಕ್ಕೆ

| Updated By: ಸುಷ್ಮಾ ಚಕ್ರೆ

Updated on: May 16, 2022 | 4:45 PM

ಮೇ 30ರಂದು ನಡೆಯುವ ಬಿಹಾರ ರಾಜ್ಯಸಭಾ ಸ್ಥಾನದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯು ಕರ್ನಾಟಕದಿಂದ ಅನಿಲ್ ಹೆಗ್ಡೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ನಾಮ ನಿರ್ದೇಶನ ಮಾಡಿದೆ.

Anil Hegde: ಬಿಹಾರ ರಾಜ್ಯಸಭಾ ಉಪಚುನಾವಣೆ; ಜೆಡಿಯುದಿಂದ ಮಂಗಳೂರು ಮೂಲದ ಅನಿಲ್ ಹೆಗ್ಡೆ ಕಣಕ್ಕೆ
ಅನಿಲ್ ಹೆಗ್ಡೆ
Image Credit source: ANI
Follow us on

ಪಾಟ್ನಾ: ಬಿಹಾರದ ಉಪಚುನಾವಣೆಗೆ ಜನತಾ ದಳ ಯುನೈಟೆಡ್ (ಜೆಡಿಯು) ತನ್ನ ಅಭ್ಯರ್ಥಿಯಾಗಿ ಮಂಗಳೂರು ಮೂಲದ ಅನಿಲ್ ಹೆಗ್ಡೆ (Anil Hegde) ಅವರನ್ನು ಕಣಕ್ಕಿಳಿಸಲಿದೆ. ಮೇ 30ರಂದು ಉಪಚುನಾವಣೆ ನಡೆಯಲಿದೆ. ಡಿಸೆಂಬರ್ 27ರಂದು ಜನತಾ ದಳ ಯುನೈಟೆಡ್ (ಜೆಡಿಯು) ಸಂಸದ ಮಹೇಂದ್ರ ಪ್ರಸಾದ್ ಅವರ ನಿಧನದ ನಂತರ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಬಿಹಾರದಲ್ಲಿ ಉಪಚುನಾವಣೆ (Bihar Rajya Sabha By-poll) ನಡೆಯಲಿದೆ. ಕರ್ನಾಟಕದ ಮಂಗಳೂರು (Mangaluru) ಮೂಲದವರಾದ ಅನಿಲ್ ಹೆಗ್ಡೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ದಿವಂಗತ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ನಿಕಟ ಸಹವರ್ತಿಯಾಗಿದ್ದರು.

ತಮ್ಮ ಅಭಿಮಾನಿಗಳಲ್ಲಿ ಕಿಂಗ್ ಮಹೇಂದ್ರ ಎಂದೇ ಖ್ಯಾತರಾಗಿದ್ದ ಮಹೇಂದ್ರ ಪ್ರಸಾದ್ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಯಾಗಿ ದಾಖಲೆಯ ಏಳನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕೊನೆಯದಾಗಿ 2018ರಲ್ಲಿ ಜೆಡಿಯು ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ, ಅವರ ನಿಧನದ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಿತ್ತು. ಮೇ 30ರಂದು ಬಿಹಾರ ರಾಜ್ಯಸಭಾ ಸ್ಥಾನದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯು ಕರ್ನಾಟಕದಿಂದ ಅನಿಲ್ ಹೆಗ್ಡೆ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ನಾಮ ನಿರ್ದೇಶನ ಮಾಡಿದೆ.

ಈ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕರೊಬ್ಬರು, ರಾಜ್ಯಸಭಾ ಉಪಚುನಾವಣೆಗೆ ಅನಿಲ್ ಹೆಗ್ಡೆಯವರ ನಾಮಪತ್ರ ಘೋಷಣೆ ಆಶ್ಚರ್ಯ ತಂದಿದೆ. ಇದು ಸಂಘಟನೆ ಮತ್ತು ಪಕ್ಷಕ್ಕಾಗಿ ಮೌನವಾಗಿ ದುಡಿಯುತ್ತಿರುವ ವ್ಯಕ್ತಿಗೆ ಸಿಕ್ಕ ಪ್ರತಿಫಲವಾಗಿದೆ. ಅವರ ಕೊಡುಗೆಯನ್ನು ಜೆಡಿಯ ಪಕ್ಷ ಗುರುತಿಸಿದೆ. ಅವರು ಬಿಹಾರದಿಂದ ನಾಮನಿರ್ದೇಶಿತರಾಗುತ್ತಾರೆ ಎಂದು ಹೇಳಿದ್ದಾರೆ. (Source)

ಇದನ್ನೂ ಓದಿ
ಜ್ಞಾನವಾಪಿ ಮಸೀದಿ ವಿವಾದದ ಅರ್ಜಿ ನಾಳೆ ಸುಪ್ರೀಂಕೋರ್ಟ್​​​ನಲ್ಲಿ ವಿಚಾರಣೆ; ಸಮೀಕ್ಷೆ ಅಂತ್ಯ
‘ಸ್ವತಂತ್ರ ಭಾರತದಲ್ಲಿ ನಡೆಯಲಿರುವ ಅತೀದೊಡ್ಡ ವಿನಾಶ’: ಅತಿಕ್ರಮಣ ವಿರೋಧಿ ಅಭಿಯಾನ ವಿರುದ್ಧ ಕೇಜ್ರಿವಾಲ್ ಆಕ್ರೋಶ
PM Modi: ಬುದ್ಧ ಪೂರ್ಣಿಮೆ ಹಿನ್ನೆಲೆ; ಇಂದು ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ

ಬಿಜೆಪಿಯ ಮಿತ್ರ ಪಕ್ಷವಾದ ಜೆಡಿ (ಯು) ಉಪಚುನಾವಣೆಯಲ್ಲಿ ಸ್ಥಾನವನ್ನು ಪಡೆಯಲು ಸಿದ್ಧವಾಗಿದೆ. ಅನಿಲ್ ಹೆಗ್ಡೆಯವರು ಕರ್ನಾಟಕದ ಮಂಗಳೂರಿನವರು. ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಅನಿಲ್ ಹೆಗ್ಡೆ ಬಹಳ ವಿನಮ್ರ ಮತ್ತು ಸಂಘಟನಾಶೀಲ ವ್ಯಕ್ತಿಯಾಗಿದ್ದು, ದಶಕಗಳಿಂದ ಜೆಡಿಯು ಪಕ್ಷದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಪಾಟ್ನಾದಲ್ಲಿ ನೆಲೆಸಿದ್ದಾರೆ ಮತ್ತು ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ ಎಂದು ಜೆಡಿಯು ಹಿರಿಯ ನಾಯಕ ಎಎನ್‌ಐಗೆ ತಿಳಿಸಿದ್ದಾರೆ.

ರಾಜ್ಯಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 19 ಕೊನೆಯ ದಿನವಾಗಿದೆ. ಮತದಾನ ಮೇ 30ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ. ಮತದಾನ ಮುಗಿದ ನಂತರ ಅದೇ ದಿನ ಮತ ಎಣಿಕೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Mon, 16 May 22