Tripura Cabinet: ತ್ರಿಪುರಾದಲ್ಲಿ ಸಚಿವ ಸಂಪುಟ ರಚನೆ; 11 ನೂತನ ಮಂತ್ರಿಗಳ ಪ್ರಮಾಣವಚನ ಸ್ವೀಕಾರ

ತ್ರಿಪುರಾದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 11 ಶಾಸಕರಲ್ಲಿ ಬಿಜೆಪಿಯ ಒಂಬತ್ತು ಮತ್ತು ಐಪಿಎಫ್‌ಟಿಯ ಇಬ್ಬರು ಸೇರಿದ್ದಾರೆ.

Tripura Cabinet: ತ್ರಿಪುರಾದಲ್ಲಿ ಸಚಿವ ಸಂಪುಟ ರಚನೆ; 11 ನೂತನ ಮಂತ್ರಿಗಳ ಪ್ರಮಾಣವಚನ ಸ್ವೀಕಾರ
ತ್ರಿಪುರಾದ ನೂತನ ಸಚಿವರು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 16, 2022 | 1:44 PM

ಅಗರ್ತಲಾ: ತ್ರಿಪುರ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ (Manik Saha) ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಇಂದು ಹೊಸ ಸಚಿವ ಸಂಪುಟವೂ ರಚನೆಯಾಗಿದೆ. ತ್ರಿಪುರಾದ (Tripura) ರಾಜ್ಯಪಾಲ ಎಸ್.ಎನ್. ಆರ್ಯ ಅವರು ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 11 ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದಾರೆ. 11 ಶಾಸಕರ ಪೈಕಿ ಬಿಜೆಪಿಯ ಒಂಬತ್ತು ಮಂದಿ ಮತ್ತು ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ)ಯ ಇಬ್ಬರು ತ್ರಿಪುರಾ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಬಾರಿಯ ತ್ರಿಪುರಾ ಸಂಪುಟದಲ್ಲಿ ಇಬ್ಬರು ಹೊಸ ಸಚಿವರು ಇದ್ದಾರೆ. ಹಿರಿಯ ಬಿಜೆಪಿ ಬುಡಕಟ್ಟು ನಾಯಕ ರಾಮಪಾದ ಜಮಾತಿಯಾ ಮತ್ತು ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಶಾಸಕ ಪ್ರೇಮ್ ಕುಮಾರ್ ರಿಯಾಂಗ್ ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಒಟ್ಟಾರೆಯಾಗಿ, 11 ಶಾಸಕರಲ್ಲಿ ಬಿಜೆಪಿಯ ಒಂಬತ್ತು ಮತ್ತು ಐಪಿಎಫ್‌ಟಿಯ ಇಬ್ಬರು ಸೇರಿದ್ದಾರೆ. ಮುಖ್ಯಮಂತ್ರಿ ಮಾಣಿಕ್ ಸಹಾ, ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಜ್ಯಪಾಲ ಎಸ್‌ಎನ್ ಆರ್ಯ ಅವರು ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಸಂಪುಟಕ್ಕೆ ಸೇರ್ಪಡೆಗೊಂಡ 11 ಸಚಿವರು: ಜಿಷ್ಣು ದೇವ್ ವರ್ಮಾ, ರತನ್ ಲಾಲ್ ನಾಥ್, ಪ್ರಣಜಿತ್ ಸಿಂಗ್ ರಾಯ್, ಮನೋಜ್ ಕಾಂತಿ ದೇಬ್, ಸಂತಾನ ಚಕ್ಮಾ, ರಾಮ್ ಪ್ರಸಾದ್ ಪಾಲ್, ಭಗಬನ್ ದಾಸ್, ಸುಶಾಂತ ಚೌಧರಿ, ರಾಮಪಾದ ಜಮಾತಿಯಾ, ಎನ್​ಸಿ ದೆಬ್ಬರ್ಮಾ, ಪ್ರೇಮ್ ಕುಮಾರ್ ರಿಯಾಂಗ್ ನೂತನ ಸಚಿವರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ
Image
ಕರ್ನಾಟಕದ ಹಲವೆಡೆ ಮಳೆ ಅವಾಂತರ; ಬೆಳೆ ನಾಶ, ನಂಜನಗೂಡಿನಲ್ಲಿ ಮರ ಬಿದ್ದು ಕಾರು ಜಖಂ
Image
Karnataka Rain: ಕರ್ನಾಟಕದಾದ್ಯಂತ ಇಂದು ಗುಡುಗು ಸಹಿತ ಮಳೆ ಸಾಧ್ಯತೆ; ಮೇ 5ರಿಂದ ಇನ್ನೂ ಹೆಚ್ಚಲಿದೆ ವರುಣನ ಅಬ್ಬರ
Image
Karnataka Rain Today: ಬೆಂಗಳೂರು, ಕೊಡಗು, ಕರಾವಳಿ ಸೇರಿ ಹಲವೆಡೆ ಇಂದು ಗುಡುಗು ಸಹಿತ ಮಳೆ

ಇದಕ್ಕೂ ಮುನ್ನ ಭಾನುವಾರ ಮಾಣಿಕ್ ಸಾಹಾ ಅವರು ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಪ್ಲಬ್ ಕುಮಾರ್ ದೇಬ್ ಅವರು ರಾಜೀನಾಮೆ ಸಲ್ಲಿಸಿದ ನಂತರ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಾಣಿಕ್ ಸಾಹಾ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಬಿಜೆಪಿಯ ಹಿರಿಯ ಬುಡಕಟ್ಟು ನಾಯಕ ರಾಮಪಾದ ಜಮಾತಿಯಾ ಅವರನ್ನು ಸಂಪುಟ ಸಚಿವರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಐಪಿಎಫ್‌ಟಿ ಶಾಸಕ ಪ್ರೇಮ್ ಕುಮಾರ್ ರಿಯಾಂಗ್ ಅವರನ್ನು ಹೊಸ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿ ಬಿಪ್ಲಬ್ ಕುಮಾರ್ ದೇಬ್ ಬದಲಿಗೆ ಮಾಣಿಕ್ ಸಾಹಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ತ್ರಿಪುರಾ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿ ನಿರ್ಧರಿಸಿತ್ತು. ತ್ರಿಪುರಾದ ಹೊಸ ಮುಖ್ಯಮಂತ್ರಿಯಾಗಿ ಮಾಣಿಕ್ ಸಾಹಾ ಪ್ರಮಾಣ ವಚನ ಸ್ವೀಕರಿಸಿದ ನಂತರ, ಚುನಾವಣೆಗೆ ಒಳಪಟ್ಟಿರುವ ರಾಜ್ಯದಲ್ಲಿ ಮುಖವನ್ನು ಬದಲಾಯಿಸುವ ಮೂಲಕ ಅಧಿಕಾರ ವಿರೋಧಿಯನ್ನು ಸೋಲಿಸಲು ಬಿಜೆಪಿ ಮತ್ತೊಮ್ಮೆ ತನ್ನ ಹಳೆಯ ಮಂತ್ರವನ್ನು ಆಶ್ರಯಿಸಿದೆ.

ಕಾಂಗ್ರೆಸ್ ತೊರೆದ ನಂತರ 2016ರಲ್ಲಿ ಬಿಜೆಪಿ ಸೇರಿದ ಮಾಣಿಕ್ ಸಾಹಾ ಅವರನ್ನು 2020ರಲ್ಲಿ ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಈ ವರ್ಷದ ಮಾರ್ಚ್‌ನಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕೇವಲ ಎರಡು ತಿಂಗಳ ಹಿಂದೆ ಏಕೈಕ ಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದ ಮಾಣಿಕ್ ಸಾಹಾ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Mon, 16 May 22