ಸನಾತನ ಧರ್ಮದ ವಿರುದ್ಧ ಹೋರಾಟಕ್ಕೆಂದೇ ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ; ತಮಿಳುನಾಡು ಸಚಿವ ಪೊನ್ಮುಡಿ ವಿವಾದಾತ್ಮಕ ಹೇಳಿಕೆ
K Ponmudy Statement on Sanatana Dharma; ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಪೊನ್ಮುಡಿ ಅವರು, ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು ಭಾರತ ಮೈತ್ರಿಕೂಟ ರಚನೆಯಾಗಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಮೈತ್ರಿಕೂಟದ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಅದಕ್ಕೆ ರಾಜಕೀಯ ಶಕ್ತಿ ಕೂಡ ಬೇಕಾಗಿದೆ ಎಂದು ಹೇಳಿರುವುದು ದಾಖಲಾಗಿದೆ.
ಚೆನ್ನೈ ಸೆಪ್ಟೆಂಬರ್ 12: ಸನಾತನ ಧರ್ಮದ ವಿರುದ್ಧ ಹೋರಾಡುವುದಕ್ಕೆಂದೇ ಪ್ರತಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ (I.N.D.I.A) ಅಸ್ತಿತ್ವಕ್ಕೆ ಬಂದಿದೆ ಎಂದು ತಮಿಳುನಾಡಿನ ಡಿಎಂಕೆ (DMK) ಸರ್ಕಾರದ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ (K Ponmudy) ಹೇಳಿದ್ದಾರೆ. ಅವರು ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸನಾತನ ಧರ್ಮದ ವಿರುದ್ಧ ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಪೊನ್ಮುಡಿ ಅವರಿಂದ ಸನಾತನ ಧರ್ಮದ ವಿರುದ್ಧ ಹೇಳಿಕೆ ಮೂಡಿಬಂದಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (BJP) ಎದುರಿಸುವುದಕ್ಕಾಗಿ ಇಂಡಿಯಾ ಮೈತ್ರಿಕೂಟ ಸ್ಥಾಪಿಸಲಾಗಿದೆ ಎಂದು ಪ್ರತಿಪಕ್ಷಗಳು ಹೇಳಿವೆ.
ಏನಂದ್ರು ಪೊನ್ಮುಡಿ?
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋದಲ್ಲಿ ಪೊನ್ಮುಡಿ ಅವರು, ಸನಾತನ ಧರ್ಮದ ತತ್ವಗಳ ವಿರುದ್ಧ ಹೋರಾಡಲು ಭಾರತ ಮೈತ್ರಿಕೂಟ ರಚನೆಯಾಗಿದೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಮೈತ್ರಿಕೂಟದ 26 ಪಕ್ಷಗಳು ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಒಂದಾಗಿವೆ. ಆದರೆ ಅದಕ್ಕೆ ರಾಜಕೀಯ ಶಕ್ತಿ ಕೂಡ ಬೇಕಾಗಿದೆ ಎಂದು ಹೇಳಿರುವುದು ದಾಖಲಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಕೊರೋನಾಗೆ ಹೋಲಿಸಿದ ನಂತರ ಮತ್ತು ಅದನ್ನು ನಿರ್ಮೂಲನೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ನಂತರ ಈ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಧರ್ಮದ ಬಗ್ಗೆ ತಿಳಿಯದವರಿಂದ ಇಂಥ ಮಾತು: ಉದಯನಿಧಿ ಸ್ಟಾಲಿನ್ ಹೇಳಿಕೆಗೆ ನಿರ್ಮಲಾನಂದನಾಥ ಸ್ವಾಮೀಜಿ ಆಕ್ಷೇಪ
ನಾವು ನಿರ್ಮೂಲನೆ ಮಾಡಬೇಕಾದ ಕೆಲವು ವಿಷಯಗಳಿವೆ. ಸೊಳ್ಳೆಗಳು, ಡೆಂಗ್ಯೂ ಜ್ವರ, ಮಲೇರಿಯಾ, ಕೊರೋನಾ, ಈ ಎಲ್ಲವನ್ನು ವಿರೋಧಿಸಲು ಸಾಧ್ಯವಿಲ್ಲ, ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ ಧರ್ಮವಾಗಿದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.
ಅಶ್ವತ್ಥನಾರಾಯಣ ಆಕ್ಷೇಪ; ಎಕ್ಸ್ ಪೋಸ್ಟ್ ಮಾಡಿ ಆಕ್ರೋಶ
Anti-Bharat forces have long tried to erode the essence of Bharatiyata, but they’ve failed.
Now, the I.N.D.I. Alliance and their visionless, tyrannical leaders believe they can even attempt. #Bharat is resilient and stronger than that!#SanatanaDharma https://t.co/X8bcWiuYHL pic.twitter.com/nQsueTwCqn
— Dr. C.N. Ashwath Narayan (@drashwathcn) September 12, 2023
ಭಾರತ-ವಿರೋಧಿ ಶಕ್ತಿಗಳು ಭಾರತೀಯತೆಯ ಸಾರವನ್ನು ನಾಶಮಾಡಲು ಬಹಳ ಹಿಂದೆಯೇ ಪ್ರಯತ್ನಿಸಿದ್ದವು. ಆದರೆ ಅವು ವಿಫಲವಾಗಿವೆ. ಈಗ, ಐ.ಎನ್.ಡಿ.ಐ. ಮೈತ್ರಿಕೂಟ ಮತ್ತು ಅವರ ದೃಷ್ಟಿಹೀನ, ದಬ್ಬಾಳಿಕೆಯ ನಾಯಕರು ಮತ್ತೆ ಪ್ರಯತ್ನಿಸಬಹುದು ಎಂದು ಭಾವಿಸಿದ್ದಾರೆ. ಭಾರತವು ಬಲಶಾಲಿಯಾಗಿದ್ದು, ಅವುಗಳನ್ನೆಲ್ಲ ಎದುರಿಸಿ ನಿಲ್ಲುವ ಶಕ್ತಿ ಹೊಂದಿ ಎಂದು ಕರ್ನಾಟಕದ ಮಾಜಿ ಸಚಿವ, ಬಿಜೆಪಿ ನಾಯಕ ಅಶ್ವತ್ಥನಾರಾಯಣ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Tue, 12 September 23