ಪತ್ತೆಯಾಗುತ್ತಲೇ ಇವೆ ಪಾಕ್ ಕಳ್ಳಕಿಂಡಿಗಳು! ಪಾಕ್ ಗಡಿಯಲ್ಲಿ ಮತ್ತೊಂದು ಸುರಂಗ ಪತ್ತೆ
ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಪತ್ತೆ ಆಗಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ.

ಪಾಕಿಸ್ತಾನ ತೋಡಿದ ಸುರಂಗ
ಜಮ್ಮು: ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ತೋಡಿರುವ ಸುರಂಗವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಹಚ್ಚಿದೆ. ಭಾರತದ ಗಡಿ ಒಳಗೆ ನುಸುಳಲು ಉಗ್ರರು ಈ ಸುರಂಗ ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಜಮ್ಮು-ಕಾಶ್ಮೀರದ ಹಿರಾನಗರ ಸೆಕ್ಟರ್ನ ಪಾನ್ಸಾರ ಭಾಗದಲ್ಲಿ ಈ ಸುರಂಗ ಕಾಣಿಸಿದೆ. 10 ದಿನಗಳ ಹಿಂದೆ ಪತ್ತೆ ಆದ ಎರಡನೇ ಸುರಂಗ ಇದಾಗಿದೆ. ಆರು ತಿಂಗಳಿಂದ ಇಲ್ಲಿವರೆಗೆ 4 ರಹಸ್ಯ ಮಾರ್ಗಗಳನ್ನು ಸೇನೆ ಮುಚ್ಚಿದೆ.
ಜನವರಿ 13ರಂದು ಹಿರಾನಗರ ಸೆಕ್ಟರ್ನ ಬೋಬಿಯಾನ ಗ್ರಾಮದಲ್ಲಿ 150 ಮೀಟರ್ ಉದ್ದದ ಟನೆಲ್ ಪತ್ತೆ ಆಗಿತ್ತು. ಮೂರು ಮೀಟರ್ ಅಗಲ ಇದ್ದ ಈ ಸುರಂಗ ನೇರವಾಗಿ ಪಾಕಿಸ್ತಾನವನ್ನು ಸಂಪರ್ಕ ಮಾಡುತ್ತಿತ್ತು. ಸದ್ಯ, ಈ ಭಾಗದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಯಾರಾದರೂ ನುಸುಳಿ ಒಳ ಬಂದಿದ್ದಾರೆಯೇ ಎನ್ನುವುದನ್ನು ಸೇನೆ ಪತ್ತೆ ಹಚ್ಚುತ್ತಿದೆ.




