AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಮ್ಸ್​ ಸೆಕ್ಯುರಿಟಿ ಮೇಲಿನ ಹಲ್ಲೆ ಪ್ರಕರಣ: ಆಪ್​ ಶಾಸಕ ಸೋಮನಾಥ ಭಾರ್ತಿಗೆ ಭರ್ತಿ 2 ವರ್ಷ ಜೈಲು

ಹೆಚ್ಚುವರಿ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ರವೀಂದ್ರ ಕುಮಾರ್ ಪಾಂಡೆ ಇಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದಾರೆ. ಎರಡು ವರ್ಷ ಜೈಲು ಶಿಕ್ಷೆ ಜೊತೆಗೆ ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ಏಮ್ಸ್​ ಸೆಕ್ಯುರಿಟಿ ಮೇಲಿನ ಹಲ್ಲೆ ಪ್ರಕರಣ: ಆಪ್​ ಶಾಸಕ ಸೋಮನಾಥ ಭಾರ್ತಿಗೆ ಭರ್ತಿ 2 ವರ್ಷ ಜೈಲು
ಸೋಮನಾಥ ಭಾರ್ತಿ
ರಾಜೇಶ್ ದುಗ್ಗುಮನೆ
|

Updated on:Jan 23, 2021 | 4:04 PM

Share

ನವದೆಹಲಿ: ಏಮ್ಸ್​ ಭದ್ರತಾ ಸಿಬ್ಬಂದಿ ಮೇಲೆ ಹಲ್ಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆಪ್​ ಶಾಸಕ ಸೋಮನಾಥ ಭಾರ್ತಿಗೆ ದೆಹಲಿ ಹೆಚ್ಚುವರಿ ಮೆಟ್ರೋಪಾಲಿಟನ್​ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ರವೀಂದ್ರ ಕುಮಾರ್ ಪಾಂಡೆ ಇಂದು ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದಾರೆ. ಎರಡು ವರ್ಷ ಜೈಲು ಶಿಕ್ಷೆ ಜೊತೆಗೆ ಒಂದು ಲಕ್ಷ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ಈ ಆದೇಶವನ್ನು ಪ್ರಶ್ನಿಸಿ ಸೋಮನಾಥ ಭಾರ್ತಿ ಹೈಕೋರ್ಟ್​ ಮೆಟ್ಟಿಲೇರಲಿದ್ದಾರೆ. ಹೀಗಾಗಿ, ಜೈಲು ಶಿಕ್ಷೆ ಘೋಷಣೆ ಆದ ಬೆನ್ನಲ್ಲೇ ಅವರಿಗೆ ಜಾಮೀನು ಸಿಕ್ಕಿದೆ.

2016ರ ಸೆಪ್ಟೆಂಬರ್​ 9ರಂದು ಸೋಮನಾಥ ಭಾರ್ತಿ ಹಾಗೂ ಸುಮಾರು 300 ಜನರು ಏಮ್ಸ್​ ಆಸ್ಪತ್ರೆಗೆ ತೆರಳಿದ್ದರು. ಜೆಸಿಬಿ ಸಹಾಯದಿಂದ ಆಸ್ಪತ್ರೆಯ ಗಡಿ ಗೋಡೆಯನ್ನು ನಾಶ ಮಾಡಿದ್ದರು. ಭದ್ರತಾ ಸಿಬ್ಬಂದಿ ಮೇಲೆ ಭಾರ್ತಿ ಹಲ್ಲೆ ಕೂಡ ಮಾಡಿದ್ದರು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್​ ಶಿಕ್ಷೆ ವಿಧಿಸಿದೆ.

ಹೋಟೆಲ್​ನಲ್ಲಿ ಬಿಜೆಪಿ ಕಾರ್ಯಕ್ರಮ: ರೈತ ಪ್ರತಿಭಟನಾಕಾರರನ್ನು ನೋಡಿ ಹಿಂಬಾಗಿಲಿನಿಂದ ಪರಾರಿಯಾದ ನಾಯಕರು!

Published On - 3:54 pm, Sat, 23 January 21