ಆರ್ಬಿಐ ಘೋಷಣೆ: ಮಾರ್ಚ್ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿಯ ಹಳೆಯ ನೋಟು!
ನೋಟು ಅಮಾನ್ಯೀಕರಣದ ಅನುಭವದ ಹಿನ್ನೆಲೆಯಲ್ಲಿ ಈಗ ರಿಸರ್ವ ಬ್ಯಾಂಕ್ ಹಳೆಯ ಪದ್ಧತಿ ಅನುಕರಿಸಲು ಮುಂದೆ ಬಂದಿದೆ. ಆ ಪ್ರಕಾರ 100, 10 ಹಾಗೂ 5 ರೂಪಾಯಿ ಮುಖ ಬೆಲೆಯ ನೋಟುಗಳ ಬದಲಾವಣೆಗೆ ಮಾರ್ಚ ಕೊನೆವರೆಗೆ ಅವಕಾಶವಿದೆ.
ರಿಸರ್ವ ಬ್ಯಾಂಕ್ (Reserve Bank of India) ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಅದರ ಪ್ರಕಾರ 100, 10 ಮತ್ತು 5 ರೂಪಾಯಿ ಮುಖ ಬೆಲೆಯ ಹಳೆಯ ನೋಟುಗಳು ಮಾರ್ಚ ಮತ್ತು ಏಪ್ರಿಲ್ ನಂತರ, ಚಲಾವಣೆಯಿಂದ ಹೊರಹೋಗಲಿವೆ. ಹೀಗಾಗಿ, ಹಳೇ ನೋಟುಗಳನ್ನು ಈಗಲೇ ಬದಲಾಯಿಸಿಕೊಳ್ಳಲು ಆರ್ಬಿಐ ಸೂಚಿಸಿದೆ. ಆರ್ಬಿಐ ನ ಪ್ರಧಾನ ವ್ಯವಸ್ಥಾಪಕ (General Manager), ಬಿ. ಮಹೇಶ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಆರ್ಬಿಐ ಈ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ.
ಆರ್ಬಿಐ ಅಂದುಕೊಳ್ಳುವಂತೆ ಎಲ್ಲವೂ ನಡೆದಲ್ಲಿ, 100, 10 ಮತ್ತು 5 ರೂ. ಹಳೇ ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲು ಮಾರ್ಚ ತನಕ ಅವಕಾಶವಿದೆ. ಜನ ತಮ್ಮ ಬಳಿ ಇರುವ ಹಳೇ ನೋಟುಗಳನ್ನು ಆದಷ್ಟು ಬೇಗ ಬ್ಯಾಂಕ್ಗಳಿಗೆ ಸಲ್ಲಿಸಿ ಹೊಸ ನೋಟುಗಳನ್ನು ತೆಗೆದುಕೊಳ್ಳಬಹುದಾಗಿದೆ. 2019 ರಲ್ಲಿ ಹೊಸ ರೂಪದ ರೂ. 100ರ ನೋಟುಗಳು ಈಗಾಗಲೇ ಜಾರಿಗೆ ಬಂದಿವೆ. ಅಂದರೆ, ಹೊಸ ವಿನ್ಯಾಸದಲ್ಲಿ ಚಲಾವಣೆಗೆ ಬಂದಿರುವ 100 ರೂಪಾಯಿಯ ನೋಟುಗಳು ಇನ್ನು ಚಲಾವಣೆಯಲ್ಲಿರುತ್ತವೆ.
2016ರ ನವೆಂಬರ್ 8ರಂದು 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದಾಗ ಅಲ್ಲೋಲ ಕಲ್ಲೋಲವಾಗಿತ್ತು. ಜನ ಬ್ಯಾಂಕ್ಗಳ ಮುಂದೆ ಸಾಲಿನಲ್ಲಿ ನಿಂತು ಹಳೇ ನೋಟುಗಳ ಬದಲಾವಣೆಗೆ ಬೆವರಿಳಿಸಿಕೊಂಡಿದ್ದರು. ಎಷ್ಟೋ ಜನ ಹಳೇ ನೋಟು ಬದಲಾವಣೆ ಮಾಡಲಾಗದೇ, ಹಣ ಕಳೆದುಕೊಂಡವರಿದ್ದಾರೆ. ಆ ಅನುಭವದ ಹಿನ್ನೆಲೆಯಲ್ಲಿ, ಈ ಬಾರಿ ನೋಟು ಅಮಾನ್ಯೀಕರಣದ ನಿರ್ಣಯಯವನ್ನು ಆರ್ಬಿಐ ತೆಗೆದುಕೊಂಡಿಲ್ಲ. ಅದಕ್ಕೆ ಬದಲಾಗಿ, ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.
10 ರೂ ನ ನಾಣ್ಯಗಳು ಮಾರುಕಟ್ಟೆಗೆ ಬಂದು ವರ್ಷಗಳೇ ಕಳೆದರೂ, ಸಣ್ಣ ವ್ಯಾಪಾರಿಗಳು ಅದನ್ನು ತೆಗೆದುಕೊಳ್ಳುತ್ತಿಲ್ಲ. ಇದು ಆರ್ಬಿಐಗೆ ತಲೆನೋವಾಗಿ ಪರಿಣಮಿಸಿದೆ.
Published On - 4:25 pm, Sat, 23 January 21