ಉಗ್ರರ ವಿರುದ್ಧದ ಕಾರ್ಯಾಚರಣೆ: ಲೋಕಸಭೆಯಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಜೈಶಂಕರ್ ಭಾಷಣಕ್ಕೆ ಮೋದಿ ಮೆಚ್ಚುಗೆ
ಉಗ್ರರ ವಿರುದ್ಧದ ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ರಕ್ಷಣಾ ಸಚಿವ ರಾಜನಾಥ್ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಡಿರುವ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ಹಿಂದಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತ್ತೀಚೆಗೆ ಕಾರಣವಾದ ಸರ್ಕಾರದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಾದ ಆಪರೇಷನ್ ಸಿಂಧೂರ್(Operation Sindoor) ಮತ್ತು ಆಪರೇಷನ್ ಮಹಾದೇವ್(Operation Mahadev) ಅನ್ನು ಅಮಿತ್ ಶಾ ವಿವರಿಸಿದ್ದರು

ನವದೆಹಲಿ, ಜುಲೈ 29: ಉಗ್ರರ ವಿರುದ್ಧದ ಭಾರತೀಯ ಸೇನೆಯ ಕಾರ್ಯಾಚರಣೆ ಕುರಿತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ರಕ್ಷಣಾ ಸಚಿವ ರಾಜನಾಥ್ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಡಿರುವ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿಯ ಹಿಂದಿರುವ ಪಾಕಿಸ್ತಾನಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಇತ್ತೀಚೆಗೆ ಕಾರಣವಾದ ಸರ್ಕಾರದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಾದ ಆಪರೇಷನ್ ಸಿಂಧೂರ್(Operation Sindoor) ಮತ್ತು ಆಪರೇಷನ್ ಮಹಾದೇವ್(Operation Mahadev) ಅನ್ನು ಅಮಿತ್ ಶಾ ವಿವರಿಸಿದ್ದರು, ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಭಾವಶಾಲಿ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಾರ್ವಜನಿಕವಾಗಿ ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಹಂಚಿಕೊಂಡ ಅಮಿತ್ ಶಾ ಭಾಷಣದ ತುಣುಕು
In this remarkable speech in the Lok Sabha, Home Minister Amit Shah Ji gives important details about Operation Sindoor and Operation Mahadev, which have played a vital role in eliminating cowardly terrorists. His address also focuses on our Government’s efforts towards keeping… https://t.co/FQ7cCNl4nO
— Narendra Modi (@narendramodi) July 29, 2025
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಮೂವರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಜುಲೈ 28 ರಂದು ಶ್ರೀನಗರ ಬಳಿ ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ ಎಂದು ಶಾ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಬಹಿರಂಗಪಡಿಸಿದ್ದಾರೆ.
ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನಿಲುವನ್ನು ಬಿಂಬಿಸುವ ಸರ್ಕಾರದ ಸಂದೇಶದ ಭಾಗವಾಗಿ ಪ್ರಧಾನಿ ಮೋದಿ ಈ ಪೋಸ್ಟ್ ಮಾಡಿದ್ದಾರೆ.
ಈ ಹೇಳಿಕೆಯು ಭಾರತದ ಆಂತರಿಕ ಭದ್ರತಾ ಸಿದ್ಧಾಂತದ ಕುರಿತು ಉನ್ನತ ರಾಜಕೀಯ ನಾಯಕತ್ವದ ನಡುವಿನ ಬಲವಾದ ಹೊಂದಾಣಿಕೆಯನ್ನು ಸೂಚಿಸುತ್ತದೆ.ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸೇರಿದಂತೆ ಮೂವರು ಭಯೋತ್ಪಾದಕರು ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಆಪರೇಷನ್ ಮಹಾದೇವ್‌ನಲ್ಲಿ ಹತರಾದರು.
ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಪಹಲ್ಗಾಮ್ ದಾಳಿ ನಡೆಸಿದ ಮೂವರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಆಪರೇಷನ್ ಮಹಾದೇವ್‌ನಲ್ಲಿ ಕೊಂದಿದ್ದಾರೆ ಎಂದು ದೃಢಪಡಿಸಿದರು.
ಏಪ್ರಿಲ್ 22 ರಂದು 26 ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಯಿತು. ಪಹಲ್ಗಾಮ್ ದಾಳಿಯ ಕೆಲವೇ ಗಂಟೆಗಳ ನಂತರ ಭಯೋತ್ಪಾದಕರನ್ನು ಬಂಧಿಸಲು ನಿಖರವಾದ ಯೋಜನೆಗಳನ್ನು ರೂಪಿಸಲಾಯಿತು ಎಂದು ಶಾ ಹೇಳಿದರು ಮತ್ತು ಅವರು ದೇಶವನ್ನು ಬಿಟ್ಟು ಹೋಗಲು ಅವಕಾಶ ನೀಡದಂತೆ ಭದ್ರತಾ ಪಡೆಗಳಿಗೆ ಆದೇಶಿಸಿದರು.
ಇದಕ್ಕೂ ಮುನ್ನ ಸೋಮವಾರ ಜೈಶಂಕರ್ ಲೋಕಸಭೆಯಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಭಾರತದ ವಿದೇಶಾಂಗ ನೀತಿಯು ಭಯೋತ್ಪಾದನೆಯ ವಿರುದ್ಧ ಇಡೀ ಜಗತ್ತನ್ನು ಒಗ್ಗೂಡಿಸಿದೆ ಎಂದು ಹೇಳಿರುವುದನ್ನು ಕೂಡ ಪ್ರಧಾನಿ ಮೋದಿ ಶ್ಲಾಘಿಷಿದ್ದರು.
ಎಸ್ ಜೈಶಂಕರ್ ಭಾಷಣದ ವಿಡಿಯೋ
The speech by EAM Dr. Jaishankar Ji was outstanding. He highlighted how the world has clearly heard India’s perspective on fighting the menace of terrorism through Operation Sindoor.@DrSJaishankar https://t.co/2k7a1XLxSE
— Narendra Modi (@narendramodi) July 28, 2025
ಪಹಲ್ಗಾಮ್ ಉಗ್ರ ದಾಳಿಯ ನಂತರ, ನಮ್ಮ ಸಶಸ್ತ್ರ ಪಡೆಗಳು ಕ್ರಮ ಕೈಗೊಂಡವು ಮತ್ತು 100 ಕ್ಕೂ ಹೆಚ್ಚು ಭಯೋತ್ಪಾದಕರು, ಅವರ ತರಬೇತುದಾರರು ಮತ್ತು ನಿರ್ವಾಹಕರು ತಂಗಿದ್ದ ಒಂಬತ್ತು ಉಗ್ರ ತಾಣಗಳ ಮೇಲೆ ನಿಖರವಾಗಿ ದಾಳಿ ಮಾಡಿದವು.ನಮ್ಮ ಸಶಸ್ತ್ರ ಪಡೆಗಳು ನಡೆಸಿದ ಸಂಘಟಿತ ದಾಳಿಗಳು 9 ಭಯೋತ್ಪಾದಕ ನೆಲೆಗಳನ್ನು ನಾಶ ಮಾಡಿದವು.
ಮತ್ತಷ್ಟು ಓದಿ: ವೋಟರ್ ಐಡಿ, ಚಾಕೊಲೇಟ್ಗಳು ಸಿಕ್ಕಿವೆ ಪಹಲ್ಗಾಮ್ ದಾಳಿಕೋರರು ಪಾಕ್ನವರು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?: ಅಮಿತ್ ಶಾ
ಅದಕ್ಕೂ ಮುನ್ನ ಆಪರೇಷನ್ ಸಿಂಧೂರ್‌ನ ಗುರಿಗಳನ್ನು ಸಾಧಿಸುವಲ್ಲಿ ಭಾರತ ಹೇಗೆ ಯಶಸ್ವಿಯಾಗಿದೆ ಎಂಬುದರ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಅದನ್ನು ಕೇಳಿ ಎಂದು ವಿಡಿಯೋವೊಂದನ್ನು ಮೋದಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರಾಜನಾಥ್ ಸಿಂಗ್ ವಿಡಿಯೋ
An excellent speech by Raksha Mantri Rajnath Singh Ji, giving an insightful perspective on the success of India’s security apparatus and the courage of our armed forces in Operation Sindoor.@rajnathsingh https://t.co/P7wXYCyRXk
— Narendra Modi (@narendramodi) July 28, 2025
ಈ ಮಿಲಿಟರಿ ಕಾರ್ಯಾಚರಣೆಯಲ್ಲಿ, ನೂರಕ್ಕೂ ಹೆಚ್ಚು ಭಯೋತ್ಪಾದಕರು, ಅವರ ತರಬೇತುದಾರರು, ನಿರ್ವಾಹಕರು ಮತ್ತು ಸಹಚರರು ಕೊಲ್ಲಲ್ಪಟ್ಟರು ಎಂದು ಅಂದಾಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಜೈಶ್-ಎ-ಮೊಹಮ್ಮದ್, ಲಷ್ಕರ್-ಎ- ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




