ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್​ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ

|

Updated on: May 28, 2021 | 5:46 PM

ಕೊರೊನಾ ರೋಗಿಗಳಿಗೆ ಈ ಔಷಧ ವರದಾನ ಎಂದೇ ಹೇಳಲಾಗಿದೆ. ಅಲ್ಪ ಪ್ರಮಾಣದ ಸಾಧಾರಣ ಲಕ್ಷಣದವರಿಗೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್​ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ
ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆಗೆ ಬಳಸುವ ಔಷಧಿ
Follow us on

ದೆಹಲಿ: ಕೊವಿಡ್ ಸೋಂಕಿತರ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಇನ್ನು ಮುಂದೆ ಅಪೊಲೊ ಆಸ್ಪತ್ರೆಗಳಲ್ಲಿ ಸಿಗಲಿದೆ. ಸೋಕು ಹೆಚ್ಚು ತೀವ್ರವಾಗಿಲ್ಲದ ಮತ್ತು ಮಧ್ಯಮ ಪ್ರಮಾಣದಲ್ಲಿರುವ ರೋಗಿಗಳಿ ಮಾತ್ರ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ನೀಡುವುದಾಗಿ ಅಪೊಲೊ ಆಸ್ಪತ್ರೆ ಹೇಳಿದೆ. ರೋಗಿಗಳಿಗೆ ಈ ಔಷಧ ವರದಾನ ಎಂದೇ ಹೇಳಲಾಗಿದೆ. ಅಲ್ಪ ಪ್ರಮಾಣದ ಸಾಧಾರಣ ಲಕ್ಷಣದವರಿಗೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಆರಂಭವಾಗಿತ್ತು. ಇದೀಗ ಅಪೊಲೊ ಆಸ್ಪತ್ರೆಯಲ್ಲಿಯೂ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಗೆ ₹ 59,750 ಶುಲ್ಕ ನಿಗದಿಪಡಿಸಲಾಗಿದೆ.

ಆಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕಳೆದ ವರ್ಷ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಡೋನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಇದೇ ಡ್ರಗ್ಸ್ ನೀಡಲಾಗಿತ್ತು. ಈ ಡ್ರಗ್ಸ್​ನ ಪರಿಣಾಮವೋ ಏನೋ ಡೋನಾಲ್ಡ್ ಟ್ರಂಪ್ ಮೂರ್ನಾಲ್ಕು ದಿನಗಳಲ್ಲೇ ಕೊರೊನಾ ನೆಗೆಟಿವ್ ಆಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದರು. ಈಗ ಅದೇ ಡ್ರಗ್ಸ್ ನಮ್ಮ ಭಾರತಕ್ಕೆ ಬಂದಿದೆ. ಅದು ಯಾವ ಡ್ರಗ್ಸ್ ಎಂಬ ಕುತೂಹಲ ನಿಮ್ಮಲ್ಲಿ ಮೂಡಿರಬಹುದು. ಅದುವೇ ಸ್ವಿಟ್ಜರ್​ಲೆಂಡ್ ದೇಶದ ರೋಚೆ ಕಂಪನಿ ಅಭಿವೃದ್ದಿಪಡಿಸಿರುವ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್, ಕಸಿರಿವಿಮಬ್ ಮತ್ತು ಇಂಡಿವಿಮಬ್ ಎಂಬ ಎರಡು ಡ್ರಗ್ಸ್​ಗಳ ಮಿಶ್ರಣದಿಂದ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್ ಅನ್ನು ತಯಾರಿಸಲಾಗಿದೆ.

ಎರಡು ಔಷಧಿಗಳ ಮಿಶ್ರಣದ ಡ್ರಗ್ಸ್ ಆಗಿರುವುದರಿಂದ ಇದು ಕಾಕ್​ಟೇಲ್ ಡ್ರಗ್ಸ್. ಇದು ಮನುಷ್ಯರ ದೇಹಗಲ್ಲಿ ಸ್ಪೈಕಡ್ ಪ್ರೋಟೀನ್ ಬೆಳವಣಿಗೆಯನ್ನು ತಡೆಯುತ್ತೆ. ಜೊತೆಗೆ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳ ಬೆಳವಣಿಗೆಗೆ ಸಹಾಯ ಮಾಡುತ್ತೆ. ಹೀಗಾಗಿ ಈ ಡ್ರಗ್ಸ್ ಜಗತ್ತಿನ ವಿವಿಧ ದೇಶಗಳಲ್ಲಿ ಬೇಡಿಕೆ ಇದೆ. ಈಗ ಇದೇ ಡ್ರಗ್ಸ್ ಭಾರತದ ಮಾರುಕಟ್ಟೆಗೂ ಬಂದಿದೆ. ಸಿಪ್ಲಾ ಕಂಪನಿಯು ಭಾರತದಲ್ಲಿ ಇದನ್ನು ಮಾರ್ಕೆಟಿಂಗ್ ಮಾಡುತ್ತಿದೆ. ಭಾರತದಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭಗಳಲ್ಲಿ ಕೊರೊನಾ ರೋಗಿಗಳಿಗೆ ನೀಡಲು ಸಿಡಿಎಸ್‌ಸಿಒ ಒಪ್ಪಿಗೆ ನೀಡಿದೆ. ನಾಳೆಯಿಂದ (ಮೇ 26ರ ಬುಧವಾರದಿಂದ) ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆ್ಯಂಟಿಬಾಡಿ ಕಾಕ್​ಟೇಲ್ ಡ್ರಗ್ಸ್ ನೀಡಲಾಗುತ್ತೆ. ಆಮೆರಿಕಾ ಹಾಗೂ ಯೂರೋಪಿಯನ್ ರಾಷ್ಟ್ರಗಳು ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಈ ಡ್ರಗ್ಸ್ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ಒಪ್ಪಿಗೆ ನೀಡಲಾಗಿದೆ.

(Antibody Cocktail Treatment in Apollo Hospitals for Coronavirus Infection)

ಇದನ್ನೂ ಓದಿ: Covid Antibody Cocktail: ಕೊರೊನಾ ಚಿಕಿತ್ಸೆಗೆ ಹೊಸ ಔಷಧಿ, ಗುರುಗ್ರಾಮದಲ್ಲಿ ಮೇ 26ರಿಂದ ಆ್ಯಂಟಿಬಾಡಿ ಕಾಕ್​ಟೇಲ್ ಚಿಕಿತ್ಸೆ ಆರಂಭ

ಇದನ್ನೂ ಓದಿ: ಆ್ಯಂಟಿಬಾಡಿ ಕಾಕ್​ಟೇಲ್ ವೈದ್ಯಕೀಯ ಪ್ರಯೋಗಕ್ಕೆ ಅವಕಾಶ ಕೇಳಿದ ಜೈಡಸ್​ ಕ್ಯಾಡಿಲಾ; ಕೊರೊನಾ ಮಣಿಸಲು ಮತ್ತೊಂದು ಅಸ್ತ್ರ ಸಿಗುವ ನಿರೀಕ್ಷೆ

Published On - 5:40 pm, Fri, 28 May 21