ದೆಹಲಿ ಆಗಸ್ಟ್ 15: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modi) ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ‘ಮುಂದಿನ ಆಗಸ್ಟ್ 15’ ಕ್ಕೆ ನಾನೇ ಧ್ವಜಾರೋಹಣ ಮಾಡುವೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) “ಅವರು (ಪಿಎಂ) ಮುಂದಿನ ವರ್ಷ ಮತ್ತೊಮ್ಮೆ ರಾಷ್ಟ್ರಧ್ವಜಾರೋಹಣ ಮಾಡುತ್ತಾರೆ, ಆದರೆ ಅದನ್ನು ತಮ್ಮ ಮನೆಯಲ್ಲಿ ಮಾಡುತ್ತಾರೆ” ಎಂದಿದ್ದಾರೆ.ಖರ್ಗೆ ಹೇಳಿಕೆ ವಿರುದ್ಧ ಗುಡುಗಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಕಾಂಗ್ರೆಸ್‌ನ ಹಿಂದಿನ ಹೇಳಿಕೆಗಳನ್ನು ನೆನಪಿಸಿಕೊಂಡಿದ್ದು, ಅದು ಇಂದು ಖರ್ಗೆ ಹೇಳಿದಂತೆಯೇ ಇದೆ ಎಂದಿದ್ದಾರೆ. 2014ಕ್ಕೂ ಮುನ್ನ ಕಾಂಗ್ರೆಸ್ ಇದೇ ಮಾತನ್ನು ಹೇಳಿತ್ತು ಆದರೆ ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ಅವರು 2019 ರ ಮೊದಲು ಅದೇ ಹೇಳಿದರು, ಆದರೆ ಪಿಎಂ ಮೋದಿ ಮತ್ತೆ ಪೂರ್ಣ ಬಹುಮತದೊಂದಿಗೆ ಮರಳಿದರು. ಕಾಂಗ್ರೆಸ್ ಏನು ಹೇಳುತ್ತದೆ ಎಂಬುದರ ಆಧಾರದ ಮೇಲೆ ಪ್ರಧಾನಿ ಮೋದಿ ಮತಗಳನ್ನು ಪಡೆಯುವುದಿಲ್ಲ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಠಾಕೂರ್, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ನ ಮಾಡಿದ ಟೀಕೆಗಳನ್ನು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ಸಿನವರು ಮೋದಿಯನ್ನು ‘ಮೌತ್ ಕಾ ಸೌದಾಗರ್’ ಎಂದು ಕರೆದರು. ಬಿಜೆಪಿಗೆ ಮತ ಹಾಕುವವರನ್ನು ‘ರಾಕ್ಷಸ ಪ್ರವೃತ್ತಿ’ ಎಂದೂ ಅವರು ಹೇಳಿದ್ದರು. “ನಾವು ಅವರನ್ನು (ಕಾಂಗ್ರೆಸ್) ‘ರಾಕ್ಷಸ’ ಎಂದು ಕರೆಯುವ ದೇವರು ಎಂದು ಪರಿಗಣಿಸುತ್ತೇವೆ. ಅವರು (ಮತದಾರರು) ಆಶೀರ್ವಾದ ಮಾಡಿ ಬಡ ಕುಟುಂಬದ ಮಗನನ್ನು ಪ್ರಧಾನಿ ಸ್ಥಾನಕ್ಕೆ ತಂದರು. ‘ಘಮಾಂಡಿಯಾ’ ಮೈತ್ರಿಯ ದುರಹಂಕಾರವನ್ನು ಸಾರ್ವಜನಿಕರು ಮತ್ತೊಮ್ಮೆ ಮುರಿಯುತ್ತಾರೆ ಎಂದು ಹೇಳಿದ್ದಾರೆ.
#WATCH | Union Minister Anurag Thakur says, “Congress had the same before 2014 too but we came (to power) with absolute majority. They said the same before 2019, but PM Modi came back with a full majority again…Those who are called ‘raakshas’ by Congress, the public of this… https://t.co/LUtb1HOPHn pic.twitter.com/0y7GkNwZLF
— ANI (@ANI) August 15, 2023
ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಮುಂದಿನ ವರ್ಷ ಕೆಂಪು ಕೋಟೆಗೆ ಹಿಂತಿರುಗುವುದಾಗಿ ಹೇಳಿದ್ದಾರೆ. ಮುಂದಿನ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿಗಾಗಿ. 2047ರ ಕನಸನ್ನು ನನಸಾಗಿಸುವ ದೊಡ್ಡ ಸುವರ್ಣ ಕ್ಷಣ ಮುಂದಿನ ಐದು ವರ್ಷಗಳು. ಮುಂದಿನ ಬಾರಿ ಆಗಸ್ಟ್ 15 ರಂದು ಈ ಕೆಂಪು ಕೋಟೆಯಿಂದ ದೇಶದ ಸಾಧನೆ ಮತ್ತು ಬೆಳವಣಿಗೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ ಎಂದು ಅವರು ಹೇಳಿದರು.
2024ರಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳುವುದು ದುರಹಂಕಾರವಾಗಿದ್ದು, ಮತ್ತೆ ಅಧಿಕಾರಕ್ಕೆ ಬರುವುದು ಮತದಾರರ ಕೈಯಲ್ಲಿದೆ ಎಂದು ಖರ್ಗೆ ಹೇಳಿದರು. “ಪ್ರತಿಯೊಬ್ಬರೂ ಗೆದ್ದ ನಂತರ ಮತ್ತೆ ಮತ್ತೆ ಬರುತ್ತಾರೆ ಎಂದು ಹೇಳುತ್ತಾರೆ, ಆದರೆ ನಿಮ್ಮನ್ನು ಗೆಲ್ಲುವುದು ಅಥವಾ ಕಳೆದುಕೊಳ್ಳುವುದು ಜನರ ಕೈಯಲ್ಲಿದೆ, ಮತದಾರರ ಕೈಯಲ್ಲಿದೆ, 2023 ರಲ್ಲಿ, 2024 ರಲ್ಲಿ ಮತ್ತೊಮ್ಮೆ ಧ್ವಜವನ್ನು ಹಾರಿಸುತ್ತೇನೆ ಎಂದು ಹೇಳುವುದು ದುರಹಂಕಾರವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಪಕ್ಷಗಳ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಇದ್ದರೆ ಅವರು ದೇಶವನ್ನು ಕಟ್ಟುವ ಕೆಲ, ಹೇಗೆ ಮಾಡುತ್ತಾರೆ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 pm, Tue, 15 August 23