ನರೇಂದ್ರ ಮೋದಿ ನಿಜವಾದ ಪ್ರಜಾಪ್ರಭುತ್ವವಾದಿ: ಅರ್ಜುನ್ ಮೊಧ್ವಾಡಿಯಾ

|

Updated on: Apr 30, 2024 | 12:22 PM

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದ ಅರ್ಜುನ್ ಮೊದ್ವಾಡಿಯಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಮೋದಿ ನಾಯಕತ್ವದ ಒಂದು ಪ್ರಮುಖ ಮುಖವೆಂದರೆ ಅವರು ನಿಜವಾದ ಪ್ರಜಾಪ್ರಭುತ್ವವಾದಿ, ಅವರು ಎಲ್ಲರ ಅಭಿಪ್ರಾಯಕ್ಕೆ ಬೆಲೆ ಕೊಡುವುದಲ್ಲದೆ ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೂಡ ಮಾಡುತ್ತಾರೆ ಅದನ್ನು ವಿರೋಧಿಗಳು ಕೂಡ ಒಪ್ಪಿಕೊಂಡಿದ್ದಾರೆ ಎಂದು ಅರ್ಜುನ್ ಹೇಳಿದ್ದಾರೆ.

ನರೇಂದ್ರ ಮೋದಿ ನಿಜವಾದ ಪ್ರಜಾಪ್ರಭುತ್ವವಾದಿ: ಅರ್ಜುನ್ ಮೊಧ್ವಾಡಿಯಾ
ಅರ್ಜುನ್ ಮೊಧ್ವಾಡಿಯಾ
Follow us on

ನರೇಂದ್ರ ಮೋದಿ(Narendra Modi) ನಿಜವಾದ ಪ್ರಜಾಪ್ರಭುತ್ವವಾದಿ ಎಂದು ಗುಜರಾತ್​​ ವಿರೋಧ ಪಕ್ಷದ ಮಾಜಿ ನಾಯಕ ಅರ್ಜುನ್ ಮೊಧ್ವಾಡಿಯಾ(Arjun Modhwadia) ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನಾಯಕತ್ವದ ಒಂದು ಪ್ರಮುಖ ಮುಖವೆಂದರೆ ಅವರು ನಿಜವಾದ ಪ್ರಜಾಪ್ರಭುತ್ವವಾದಿ, ಅವರು ಎಲ್ಲರ ಅಭಿಪ್ರಾಯಕ್ಕೆ ಬೆಲೆ ಕೊಡುವುದಲ್ಲದೆ ಅವುಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನವನ್ನು ಕೂಡ ಮಾಡುತ್ತಾರೆ ಅದನ್ನು ವಿರೋಧಿಗಳು ಕೂಡ ಒಪ್ಪಿಕೊಂಡಿದ್ದಾರೆ ಎಂದು ಅರ್ಜುನ್ ಹೇಳಿದ್ದಾರೆ.

ವಿರೋಧ ಪಕ್ಷದವರು ಏನೇ ಹೇಳಿದ್ದರೂ ಅದನ್ನು ಬರೆದುಕೊಂಡು ಬಳಿಕ ಒಂದೊಂದಾಗೇ ಜಾರಿಗೊಳಿಸುತ್ತಿದ್ದರು. ಪೋರಬಂದರು ಏರ್​ಪೋರ್ಟ್​ನಲ್ಲಿ ಹೊಸ ಟರ್ಮಿನಲ್​ ನಿರ್ಮಿಸಲಾಗಿತ್ತು, ಆ ಸಮಯದಲ್ಲಿ ಪ್ರಫುಲ್ ಪಟೇಲ್ ಏವಿಯೇಷನ್ ಸಚಿವರಾಗಿದ್ದರು ಅವರು ಉದ್ಘಾಟನೆ ನೆರವೇರಿಸಿದ್ದರು. ಅಂದು ನಾನು ಕೂಡ ಅಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಆ ಸಮಯದಲ್ಲಿ ನಮ್ಮ ರನ್​ವೇ ಉದ್ದ ಬಹಳ ಕಡಿಮೆ ಇದ್ದು ಇಲ್ಲಿ ದೊಡ್ಡ ವಿಮಾನಗಳ ನಿಲುಗಡೆ ಸಾಧ್ಯವಿಲ್ಲ ಎಂದು ಹೇಳಿದ್ದೆ.

ಆಗ ಪ್ರಫುಲ್ ಪಟೇಲ್ ಅವರು ಮೋದಿಯವರು ಜಾಗ ಕೊಟ್ಟರೆ ನಮಗೇನು ತೊಂದರೆ ಇಲ್ಲ ಎಂದು ಹೇಳಿದ್ದರು. ಅದೇ ಸಮಯದಲ್ಲಿ ಮೋದಿ ಕೂಡ ಜಾಗವನ್ನು ಕೊಡಲು ಒಪ್ಪಿಗೆ ನೀಡಿದ್ದರು. ಕಲೆಕ್ಟರ್​ಗೂ ತಿಳಿಸಿದ್ದರು. 2012 ಬಳಿಕ ನಾನು ಶಾಸಕನಾಗಿರಲಿಲ್ಲ, ಮೋದಿ ಕೂಡ ಪ್ರಧಾನಿಯಾಗಿದ್ದರು. ಈ ವಿಚಾರ ಅಲ್ಲಿಗೆ ನಿಂತಿತ್ತು.

ಮತ್ತಷ್ಟು ಓದಿ: ಶ್ರೀರಾಮ ಆರಾಧ್ಯ ದೈವ, ಕಾಂಗ್ರೆಸ್​ ಇಂತಹ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು: ಕಾಂಗ್ರೆಸ್​ ನಾಯಕ ಅರ್ಜುನ್ ಮೊಧ್ವಾಡಿಯಾ

ಆ ಜಮೀನನ್ನು ಕೋಸ್ಟ್​ಗಾರ್ಡ್​ಗೆ ಕೊಡಲಾಯಿತು, ಕೋಸ್ಟ್​ ಗಾರ್ಡ್​ ಡಿಫೆನ್ಸ್​ ಸರ್ವೀಸಸ್​ಗೆ ಒಳಪಡುತ್ತದೆ, ಅದನ್ನು ತಡೆಯುವ ಅಧಿಕಾರ ಗುಜರಾತ್​ ಸರ್ಕಾರಕ್ಕೆ ಇಲ್ಲ ಎಂದು ಭಾವಿಸಿ, ಮುಖ್ಯಮಂತ್ರಿ ವಿಜಯ್ ರೂಪಾನಿಯವರ ಜತೆ ಮಾತನಾಡಿ ಈ ವಿಚಾರವನ್ನು ಮೋದಿಗೆ ತಿಳಿಸಲು ಹೇಳಿದೆ. ಬಳಿಕ ಮೋದಿ ಒಪ್ಪಿಗೆ ನೀಡಿ ಆ ಜಾಗವನ್ನು ರನ್​ವೇಗಾಗಿ ನೀಡಿದ್ದರು. ಇದು ಮೋದಿಯವರ ಹೃದಯ ವೈಶಾಲ್ಯತೆಯನ್ನು ಸೂಚಿಸುತ್ತದೆ ಎಂದಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಪಕ್ಷದ ಕಾರ್ಯಕರ್ತರಿಂದ ಭಾರೀ ಹಿನ್ನಡೆ ಅನುಭವಿಸುತ್ತಿದೆ.
ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ ಅವರು ಮಾರ್ಚ್​ 4ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

ನನ್ನ ಜಿಲ್ಲೆಯ ಪೋರಬಂದರ್ ಮತ್ತು ಗುಜರಾತ್ ರಾಜ್ಯದ ಜನರಿಗೆ ಸೇವೆ ಮಾಡಲು ನಾನು ಅಸಹಾಯಕನಾಗಿದ್ದೇನೆ. ಹಾಗಾಗಿ ಕಳೆದ 40 ವರ್ಷಗಳಿಂದ ನನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ಕಳೆದ ನಾಲ್ಕು ದಶಕಗಳಿಂದ ನನಗೆ ತಮ್ಮ ಪ್ರೀತಿ ಮತ್ತು ಪ್ರೀತಿಯನ್ನು ನೀಡಿದ ಪಕ್ಷದ ನಾಯಕತ್ವ ಮತ್ತು ಕಾರ್ಯಕರ್ತರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಬರೆದು ರಾಜೀನಾಮೆ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆಗೆ ತಲುಪಿಸಿದ್ದರು. ಅರ್ಜುನ್ ಮಾರ್ಚ್​ 6ರಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:21 pm, Tue, 30 April 24