ಮುಂಬೈ: ಡ್ರಗ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ನಟ ಅರ್ಜುನ್ ರಾಮ್ ಪಾಲ್ ರನ್ನು ನಾಳೆ ಎರಡನೇ ಬಾರಿ ವಿಚಾರಣೆಗೊಳಪಡಿಸಲಿದೆ. ಡ್ರಗ್ ಕೇಸ್ ನಲ್ಲಿ ಬಂಧಿತರು ನೀಡಿದ ಮಾಹಿತಿ ಆಧರಿಸಿ ರಾಮ್ ಪಾಲ್ ರ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅತ್ಮಹತ್ಯೆ ಪ್ರಕರಣದಲ್ಲಿ ಡ್ರಗ್ಸ್ ನ ಸುಳಿವಿನ ಹಿಂದೆ ಬಿದ್ದಿರುವ NCB ರಾಮ್ ಪಾಲ್ ರ ವಿಚಾರಣೆ ನಡೆಸಲಿದೆ.ಈಗಾಗಲೇ ನಟ ಅರ್ಜುನ್ ರಾಮ್ ಪಾಲ್ ರನ್ನು NCB ಏಳು ಘಂಟೆಗಳ ಕಾಲ ವಿಚಾರಣೆ ನಡೆಸಿದೆ. ಕಳೆದ ತಿಂಗಳು ಬಾಂದ್ರಾದಲ್ಲಿರುವ ರಾಮ್ ಪಾಲ್ ನಿವಾಸದಲ್ಲಿ ಹುಡುಕಾಟ ನಡೆಸಿತ್ತು. ಈ ವೇಳೆ ಕೆಲವು ಎಲೆಕ್ರ್ಟಾನಿಕ್ ಗಾಜೆಟ್ ಮತ್ತು ನಿಷೇಧಿತ ಔಷಧಗಳು ಪತ್ತೆಯಾಗಿದ್ದವು.
ಮತ್ತೊಬ್ಬ ಡ್ರಗ್ ಸಪ್ಲೈಯರ್ ಅರೆಸ್ಟ್.. ಬಾಲಿವುಡ್ ಗಣ್ಯರಿಗೆ ನಡುಕ ಶುರು
Published On - 7:27 pm, Tue, 15 December 20