Fact Check | ಶಾರುಖ್ ಖಾನ್ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ
ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರ.
ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ನಂತೆ ಕಾಣುತ್ತಿರುವ ಈ ಯುವಕ ಕಾಶ್ಮೀರದವ ಎಂಬ ಶೀರ್ಷಿಕೆಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರವಾಗಿದೆ.
Kashmiri boy is taking rounds on Social media who looks Like as Bollywood Badashah #Shahrukh Khan. pic.twitter.com/1hDizFP1B2
— ????? ????? (@MalikAshraf3) December 12, 2020
Kashmiri boy is taking rounds on Social media who looks Like as Bollywood Badashah @iamsrk pic.twitter.com/XcYZqTi8JX
— Aabid Mir Magami عابد میر ماگامی (Athlete) (@AabidMagami) December 13, 2020
ಫೇಸ್ ಆ್ಯಪ್ನಲ್ಲಿ ಯಾವುದಾದರೊಂದು ಫೋಟೊವನ್ನು ಅಪ್ ಲೋಡ್ ಮಾಡಿ ಫೋಟೊದಲ್ಲಿರುವ ವ್ಯಕ್ತಿಯನ್ನು ಯುವಕನಾಗಿ, ಮಗುವಿನಂತೆ ಕಾಣುವ ಇಲ್ಲವೇ, ಗಡ್ಡ, ಮೀಸೆ ಇರುವಂತೆ ಮಾಡುವ ಅನೇಕ ಫಿಲ್ಟರ್ಗಳಿವೆ. ಈ ಫಿಲ್ಟರ್ಗಳನ್ನು ಬಳಸಿ ಶಾರುಖ್ ಖಾನ್ ಫೋಟೊವನ್ನು ಎಡಿಟ್ ಮಾಡಲಾಗಿದೆ.
ಫ್ಯಾಕ್ಟ್ ಚೆಕ್ ಈ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಐ ಲವ್ ಇಂಡಿಯಾ ಡಾಟ್ ಕಾಂ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾದ ಶಾರುಖ್ ಖಾನ್ ಚಿತ್ರವನ್ನು ಫೇಸ್ಆ್ಯಪ್ನಲ್ಲಿ ಎಡಿಟ್ ಮಾಡಿದೆ ಎಂದು ಹೇಳಿದೆ.
Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ