AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರನ ಕುಟುಂಬಕ್ಕೆ ಸಿಗಲಿಲ್ಲ ವಧುವಿನ ಮನೆ ವಿಳಾಸ, ರಾತ್ರಿಯೆಲ್ಲಾ ಹುಡುಕಾಟ, ಮದುವೆ ದಿನದ ಪೇಚಾಟ

ಮದುವೆ ಸಂಬಂಧ ಜೋಡಿಸಿದ್ದ ದಲ್ಲಾಳಿಯನ್ನು ಹುಡುಗನ ಕಡೆಯವರು ಕೂಡಿಹಾಕಿದ್ದಾರೆ. ಈ ಘಟನೆಯು ಊರಲ್ಲೆಲ್ಲಾ ಸದ್ದು ಮಾಡಿದ್ದು, ನಗರದ ಪೊಲೀಸರು ಮಧ್ಯಸ್ಥಿಕೆ ವಹಿಸುವಂತಾಗಿದೆ.

ವರನ ಕುಟುಂಬಕ್ಕೆ ಸಿಗಲಿಲ್ಲ ವಧುವಿನ ಮನೆ ವಿಳಾಸ, ರಾತ್ರಿಯೆಲ್ಲಾ ಹುಡುಕಾಟ, ಮದುವೆ ದಿನದ ಪೇಚಾಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 07, 2022 | 10:41 AM

Share

ಲಖನೌ: ಮದುವೆ ದಿಬ್ಬಣ ಹೊರಟ ವರನ ಕಡೆಯವರಿಗೆ ವಧುವಿನ ಮನೆಯ ವಿಳಾಸ ಸಿಗದೇ ಪೇಚಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹುಡುಗನ ಕಡೆಯವರು ಹುಡುಗಿಗಾಗಿ ರಾತ್ರಿಯೆಲ್ಲಾ ಹುಡುಕಾಡಿದರೂ ಮದುವೆ ಹೆಣ್ಣು ಪತ್ತೆಯಾಗದೆ, ಕೊನೆಗೆ ಬರಿಗೈಯ್ಯಲ್ಲಿ ಮನೆಗೆ ವಾಪಾಸಾಗಿದ್ದಾರೆ.

ಈ ಘಟನೆ ನಡೆದ ಮರುದಿವಸ ಮದುವೆ ಸಂಬಂಧ ಜೋಡಿಸಿದ್ದ ದಲ್ಲಾಳಿಯನ್ನು ಹುಡುಗನ ಕಡೆಯವರು ಕೂಡಿಹಾಕಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಕೊತ್ವಾಲಿ ಊರಲ್ಲೆಲ್ಲಾ ಸದ್ದು ಮಾಡಿದ್ದು, ನಗರದ ಪೊಲೀಸರು ಮಧ್ಯಸ್ಥಿಕೆ ವಹಿಸುವಂತಾಗಿದೆ. ಮದುವೆಯಾಗಬೇಕಿದ್ದ ಹುಡುಗಿಯು ಮೊದಲೇ ಬಿಹಾರದ ಮತ್ತೊಬ್ಬ ಹುಡುಗನನ್ನು ವರಿಸಿದ್ದಳು ಎಂದು ತಿಳಿದುಬಂದಿದೆ.

ಇದೇ ಹುಡುಗಿಯನ್ನು ವರಿಸುವ ಸಲುವಾಗಿ ಕೇವಲ ಬ್ರೋಕರ್ ಒಬ್ಬಳ ಮೂಲಕ ಕೊತ್ವಾಲಿಯ ಹುಡುಗ ಮಾತುಕತೆ ನಡೆಸಿದ್ದ. ಹುಡುಗನ ಕೈಯಿಂದ ಮದುವೆಯ ತಯಾರಿಗೆಂದು ₹ 20 ಸಾವಿರ ಹಣವನ್ನೂ ಪಡೆಯಲಾಗಿತ್ತು. ಹುಡುಗಿಯನ್ನು ನೋಡಲು ವರನಾಗಲಿ ಆತನ ಮನೆಯವರಾಗಲಿ ಅವಳ ಮನೆಗೆ ಭೇಟಿ ಕೊಟ್ಟಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣವಾಗಿದೆ.

ಮದುವೆಯ ದಿನದಂದು ವರನ ಕಡೆಯ ದಿಬ್ಬಣ ಬಂದಾಗ ಹುಡುಗಿಯ ವಿಳಾಸ ಸಿಗದೇ ಪರದಾಡುವಂತಾಗಿದೆ. ರಾತ್ರಿಯೆಲ್ಲಾ ಹುಡುಗಿಯನ್ನು ಹುಡುಕಿ ಬಳಿಕ ಖಾಲಿ ಕೈಯಲ್ಲಿ ವಾಪಾಸಾಗುವಂತಾಗಿದೆ. ವರನ ಕಡೆಯವರು ವಧು-ವರರನ್ನು ಹೊಂದಿಸಿದ್ದ ಹೆಂಗಸನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಈ ಮಾಹಿತಿ ತಿಳಿದ ಪೊಲೀಸರು ದಲ್ಲಾಳಿ ಮಹಿಳೆ, ವರನ ತಾಯಿ ಮತ್ತು ಕುಟುಂಬದ ಕೆಲವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತನಿಖೆ ಆರಂಭಿಸಿದ್ದಾರೆ.

ಮಾತು ಬಾರದ ಮೌನ ಹಕ್ಕಿಗಳ ಪ್ರೇಮರಾಗಕ್ಕೆ ಮದುವೆಯ ಅನುಬಂಧ.. ಎಂಥಾ ಸಂಬಂಧ!

Published On - 9:17 pm, Tue, 15 December 20