ಕೊರೊನಾ ನರ್ತನದ ನಡುವೆ ದೇಶದಲ್ಲಿ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆ

ಈ ಮ್ಯೂಕೋಮೈಕೋಸಿಸ್ Mucormycosis ರೋಗ ಮೂಗು, ಮೆದುಳು, ಶ್ವಾಸಕೋಶವನ್ನು ದುರ್ಬಲಗೊಳಿಸುವ ಜೊತೆಗೆ ಮೂಗಿನ ಸುತ್ತ ಊತ ಹಾಗೂ ಕಣ್ಣಿನ ನೋವು ಕಾಣಿಸಿಕೊಳ್ಳುತ್ತದೆ.

ಕೊರೊನಾ ನರ್ತನದ ನಡುವೆ ದೇಶದಲ್ಲಿ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆ
ಸಾಂದರ್ಭಿಕ ಚಿತ್ರ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Dec 16, 2020 | 2:18 PM

ದೆಹಲಿ: ಕೊರೊನಾ ಸೋಂಕಿನ ನರ್ತನದ ನಡುವೆ ಭಾರತದಲ್ಲೂ ಮ್ಯೂಕೋಮೈಕೋಸಿಸ್ Mucormycosis ರೋಗ ಪತ್ತೆಯಾಗಿದೆ. ಹೆಚ್ಚಾಗಿ ಫಂಗಸ್​ನಿಂದ ಬರುವ ರೋಗ ಇದಾಗಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಮೇಲೆ ಬೇಗ ಆಕ್ರಮಣ ಮಾಡಿ ಜೀವವನ್ನು ಹಿಂಡುತ್ತದೆ.

ಕೊರೊನಾ ಸೋಂಕಿನಿಂದ ಚೇತರಿಕೆ ಕಂಡವರಿಗೆ ಮತ್ತಷ್ಟು ಅಪಾಯಕ್ಕೆ ಕಾರಣವಾಗುವ ಈ ಭಯಾನಕ ರೋಗ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದ್ದು. ಈ ಮ್ಯೂಕೋಮೈಕೋಸಿಸ್ ರೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡಾ ಬೆಚ್ಚಿ ಬಿದ್ದಿದೆ. ವಯಸ್ಸಾದವರು, ಕೋಮಾರ್ಬಡಿಟಿಯಿಂದ ಬಳಲುವವರು ಈ ರೋಗದಿಂದ ಎಚ್ಚರವಿರಬೇಕು. ಈಗಾಗಲೇ ಹಲವರ ಜೀವವನ್ನು ಬಲಿ ತೆಗೆದುಕೊಂಡಿರುವ ಈ ರಕ್ಕಸ ರೋಗದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಸ್ಟೀರಾಯ್ಡ್ ತೆಗೆದುಕೊಳ್ಳುತ್ತಿದ್ದರೆ ಇದರಿಂದ ಜೀವಕ್ಕೆ ಆಗುವ ಅಪಾಯ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮ್ಯೂಕೋಮೈಕೋಸಿಸ್ ರೋಗ ಮೂಗು, ಮೆದುಳು, ಶ್ವಾಸಕೋಶವನ್ನು ದುರ್ಬಲಗೊಳಿಸುವ ಜೊತೆಗೆ ಮೂಗಿನ ಸುತ್ತ ಊತ ಹಾಗೂ ಕಣ್ಣಿನ ನೋವು ಕಾಣಿಸಿಕೊಳ್ಳುತ್ತದೆ. ಹೈಬಿಪಿ, ಶುಗರ್, ಕ್ಯಾನ್ಸರ್, ಕಿಡ್ನಿ, ಶ್ವಾಸಕೋಶ ಸಂಬಂಧಿ ಕಾಯಿಲೆ ಇದ್ದವರ ಮೇಲೆ ಈ ಮ್ಯೂಕೋಮೈಕೋಸಿಸ್ ರೋಗ ಅಟ್ಟಹಾಸ ಮೆರೆಯುವ ಪ್ರಮಾಣ ಹೆಚ್ಚಿದ್ದು, ಇದರ ಬಗ್ಗೆ ಉದಾಸೀನ ತೋರಿದರೆ ಮತ್ತಷ್ಟು ಸಮಸ್ಯೆಗೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ.

ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರ ಮೇಲೆ ಟಾರ್ಗೆಟ್: ರೋಗ ಹತ್ತಿರ ಸುಳಿಯಬಾರದೆಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಕೊರೊನಾ ಸೋಂಕು ಹೆಚ್ಚು ಪತ್ತೆಯಾಗವುದು ಕೂಡಾ ಈ ರೋಗ ನಿರೋಧಕ ಶಕ್ತಿ ಕಡಿಮೆಯಾದರಲ್ಲಿ. ಅದರಂತೆ ಈ ಹೆಮ್ಮಾರಿ ಮ್ಯೂಕೋಮೈಕೋಸಿಸ್ ರೋಗವು ಕೂಡಾ ಅಂತವರನ್ನೆ ಟಾರ್ಗೆಟ್ ಮಾಡುತ್ತದೆ. ಅಲ್ಲದೇ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಈ ಮ್ಯೂಕೋಮೈಕೋಸಿಸ್ ಕಡಿಮೆ ಸಮಯದಲ್ಲೇ ದೇಹವನ್ನು ಆವರಿಸಿಕೊಳ್ಳುತ್ತದೆ. ಟ್ರಾನ್ಸಪ್ಲಂಟ್ ರೋಗಿಗಳಲ್ಲಿ ಇದರ ಆಟ ಹೆಚ್ಚಿದ್ದು, ಕೊರೊನಾ ವೈರಸ್​ಗಿಂತಲೂ ಹೆಚ್ಚು ಅಪಾಯಕಾರಿ ಎಂದು ತಿಳಿದುಬಂದಿದೆ.

Corona Vaccine ಅಮೆರಿಕಾದಲ್ಲಿ ಬಳಕೆಗೆ ಲಭ್ಯವಾ ಫೈಜರ್, ಬಯೋಎನ್​ಟೆಕ್ ಲಸಿಕೆ?

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್