ಭಾರತೀಯ ಸೇನೆಗೆ ಸೇರ್ಪಡೆ ಆಗಲಿರುವ ಕ್ಷಿಪಣಿ ಅಸ್ತ್ರ ಹೇಗಿದೆ ಗೊತ್ತಾ?

ಭಾರತೀಯ ಸೇನೆಗೆ ಸೇರ್ಪಡೆ ಆಗಲಿರುವ ಕ್ಷಿಪಣಿ ಅಸ್ತ್ರ ಹೇಗಿದೆ ಗೊತ್ತಾ?
ಸಾಂದರ್ಭಿಕ ಚಿತ್ರ

ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಗಡಿ ಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿವೆ. ಎರಡೂ ರಾಷ್ಟ್ರಗಳಿಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಒಂದೊಮ್ಮೆ, ಈ ಕ್ಷಿಪಣಿ ಸಂಶೋಧನೆ ಯಶಸ್ವಿಯಾದರೆ ಭಾರತದ ಬಲ ಮತ್ತಷ್ಟು ಹೆಚ್ಚಲಿದೆ.

Rajesh Duggumane

| Edited By: sadhu srinath

Dec 16, 2020 | 2:43 PM

ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೃಷ್ಟಿ ಮೀರಿದ ಗುರಿ (beyond-visual-range) ಹಾಗೂ ಆಗಸದಿಂದಲೇ ವೈರಿಯನ್ನು ಹೊಡೆದುರುಳಿಸುವ ‘ಅಸ್ತ್ರ’ ಹೆಸರಿನ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಕ್ಷಿಪಣಿ 160 ಕಿಲೋ ಮೀಟರ್​ ದೂರ ಇರುವ ವೈರಿಯನ್ನು ಕೂಡ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ಈಗಾಗಲೇ ಪಾಕಿಸ್ತಾನ ಹಾಗೂ ಚೀನಾ ರಾಷ್ಟ್ರಗಳು ಗಡಿ ಭಾಗದಲ್ಲಿ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿವೆ. ಎರಡೂ ರಾಷ್ಟ್ರಗಳಿಗೆ ಭಾರತ ತಕ್ಕ ಉತ್ತರ ನೀಡುತ್ತಿದೆ. ಒಂದೊಮ್ಮೆ, ಈ ಕ್ಷಿಪಣಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಯಾದರೆ  ಭಾರತದ ಬಲ ಮತ್ತಷ್ಟು ಹೆಚ್ಚಲಿದೆ. ಆಗಸದಲ್ಲಿ ನಿಂತು ವೈರಿಯನ್ನು ಹೊಡೆದುರುಳಿಸಲು ಅಸ್ತ್ರ ಸಹಕಾರಿ ಆಗಲಿದೆ.

2020ಕ್ಕೆ ಭಾರತೀಯ ಸೇನೆಗೆ ಸೇರ್ಪಡೆ: ಭಾರತದಲ್ಲಿರುವ ಎಂಕೆ-1 ಆಟವನ್ನೇ ಬದಲಿಸುವ ಕ್ಷಿಪಣಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಏಕೆಂದರೆ, 110 ಕಿ.ಮೀ ಇದರ ರೇಂಜ್​. ಇದು 5,500 ಕಿ.ಮೀ. ವೇಗದಲ್ಲಿ ಮುನ್ನುಗುವ ಸಾಮರ್ಥ್ಯವನ್ನು ಹೊಂದಿದೆ. ಅಸ್ತ್ರ ಕ್ಷಿಪಣಿ ಎಂಕೆ-1ನ ಮುಂದುವರಿದ ಭಾಗವಾಗಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಸ್ತ್ರ ವನ್ನು ಸಿದ್ಧಪಡಿಸುತ್ತಿದೆ. ಇದು 2022ರ ವೇಳೆಗೆ ಭಾರತದ ರಕ್ಷಣಾ ಸಂಸ್ಥೆಗೆ ಸೇರ್ಪಡೆ ಆಗುವ ನಿರೀಕ್ಷೆ ಇದೆ.

ಹೊಸ ಕ್ಷಿಪಣಿ ಉಡಾಯಿಸಿದ ಇರಾನ್: ಆದ್ರೆ ಕಕ್ಷೆ ತಲುಪದ ಮಿಸೈಲ್

Follow us on

Related Stories

Most Read Stories

Click on your DTH Provider to Add TV9 Kannada