ಕೆಟ್ಟ ಹವಾಮಾನದಿಂದಾಗಿ ಉಧಂಪುರದಲ್ಲಿ ಅಪಘಾತಕ್ಕೀಡಾದ ಸೇನಾ ಹೆಲಿಕಾಪ್ಟರ್; ಇಬ್ಬರು ಪೈಲಟ್​​ಗಳು ದುರ್ಮರಣ

TV9 Digital Desk

| Edited By: Rashmi Kallakatta

Updated on:Sep 21, 2021 | 4:58 PM

ಸೇನಾ ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆಯೇ ಅಥವಾ ನೆಲಕ್ಕೆ ಅಪ್ಪಳಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಗಾಯಗೊಂಡಿದ್ದಾರೆ. ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಕೆಟ್ಟ ಹವಾಮಾನದಿಂದಾಗಿ ಉಧಂಪುರದಲ್ಲಿ ಅಪಘಾತಕ್ಕೀಡಾದ ಸೇನಾ ಹೆಲಿಕಾಪ್ಟರ್; ಇಬ್ಬರು ಪೈಲಟ್​​ಗಳು ದುರ್ಮರಣ
ಹೆಲಿಕಾಪ್ಟರ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್ (Udhampur) ಜಿಲ್ಲೆಯ ಶಿವ ಗರ್ ಧಾರ್​​ನಲ್ಲಿ(Shiv Garh Dhar)  ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಪ್ರದೇಶದಲ್ಲಿ ಮಂಜು ಮುಸುಕಿದ ಕಾರಣ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಶಿವ ಗರ್ ಧಾರ್​​ನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ತಂಡಗಳನ್ನು ಕಳುಹಿಸಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚುವರಿ ಮಂಜು ಇರುವುದರಿಂದ ಗೋಚರತೆ ಕಡಿಮೆಯಾಗಿದೆ ಎಂದು ಡಿಐಜಿ ಉಧಂಪುರ್ ಸುಲೇಮಾನ್ ಚೌಧರಿ ಅವರು ಹೇಳಿದ್ದಾರೆ. ಹೆಲಿಕಾಪ್ಟರ್ ಅಪಘಾತಕ್ಕೀಡಾದ ಶಬ್ದಗಳು ಕೇಳಿಬಂದವು ಎಂದು ಅಧಿಕಾರಿ ಹೇಳಿದರು.

ಸೇನಾ ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಅಪಘಾತಕ್ಕೀಡಾಯಿತು. ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆಯೇ ಅಥವಾ ನೆಲಕ್ಕೆ ಅಪ್ಪಳಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೈಲಟ್ ಮತ್ತು ಸಹ ಪೈಲಟ್ ಇಬ್ಬರೂ ಗಾಯಗೊಂಡಿದ್ದಾರೆ. ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅಷ್ಟೊತ್ತರಲ್ಲಿ ಸ್ಥಳೀಯರು ಗಾಯಗೊಂಡ ಇಬ್ಬರು ಸೇನಾ ಸಿಬ್ಬಂದಿಯನ್ನು ಹೊರತರಲು ಸಹಾಯ ಮಾಡಿದ್ದರು

“ಇಂದು ಪಟ್ನಿಟಾಪ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿರುವಾಗ, ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಉಧಂಪುರ್ ಜಿಲ್ಲೆಯ ಶಿವ್ ಗರ್ ಧರ್ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದಾರೆ. ಅವರನ್ನುಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು  ಭಾರತೀಯ ಸೇನೆ ಹೇಳಿದೆ.

ಈ ಮೊದಲು, ಶೋಧ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಗಾಯಗೊಂಡ ಜನರನ್ನು ಆಳವಾದ ಕಣಿವೆಯಿಂದ ಮೇಲೆತ್ತಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ .

ಅಪಘಾತದಲ್ಲಿ  ಇಬ್ಬರು ಪೈಲಟ್ ಗಳು  ಮೃತಪಟ್ಟಿದ್ದಾರೆ ಎಂದು  ಸೇನಾ ಮೂಲಗಳು ಹೇಳಿವೆ

ಸೇನಾ ವಿಮಾನಯಾನ ಹೆಲಿಕಾಪ್ಟರ್ ಪತನಗೊಂಡಾಗ ಅದರ ಪೈಲಟ್‌ಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಸ್ಥಳೀಯರು ರಕ್ಷಿಸಿದರು ಮತ್ತು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಇಬ್ಬರೂ ಪೈಲಟ್‌ಗಳು ಪ್ರಮುಖ ದರ್ಜೆಯ ಅಧಿಕಾರಿಗಳು ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ನಾವು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಆದರೆ ದುರದೃಷ್ಟವಶಾತ್ ಇಬ್ಬರೂ ಪ್ರಾಣ ಕಳೆದುಕೊಂಡರು” ಎಂದು ಅಧಿಕಾರಿ ಹೇಳಿದರು.

ಸೇನೆಯ ಉತ್ತರ ಕಮಾಂಡ್ ಟ್ವಿಟರ್ ನಲ್ಲಿ ಮೇಜರ್ ರೋಹಿತ್ ಕುಮಾರ್ ಮತ್ತು ಮೇಜರ್ ಅನುಜ್ ರಜಪೂತ್ “21 ಸೆಪ್ಟೆಂಬರ್ 2021 ರಂದು ಪಟ್ನಿಟಾಪ್ ನಲ್ಲಿ ಕರ್ತವ್ಯ ನಿರ್ವಹಣೆ ವೇಳೆ  ಹುತಾತ್ಮರಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.

ಮಂಗಳವಾರ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ

(Army chopper met with the accident in Udhampur due to bad weather rescue teams on way)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada