ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..! ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ […]

ಉಗ್ರರ ರಕ್ತ ಹರಿಸೋಕೆ ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ
ಸಾಧು ಶ್ರೀನಾಥ್​

Updated on: Nov 25, 2019 | 7:53 AM

ದೆಹಲಿ: ಜಮ್ಮುಕಾಶ್ಮೀರ. ಸದಾ ಕಾದ ಕೆಂಡದಂತೆ ಇರುವ ಕಣಿವೆ ಪ್ರದೇಶ. ಯಾವಾಗ ಏನ್ ಆಗುತ್ತೋ ಯಾವಾಗ ಉಗ್ರರು ದಾಳಿ ಮಾಡ್ತಾರೋ ಅನ್ನೋ ಭಯ ಇಲ್ಲಿ ಕಾಡ್ತಾನೆ ಇರುತ್ತೆ. ಸೈನಿಕರೂ ಕೂಡ ಉಗ್ರರ ರುಂಡ ಕತ್ತರಿಸಲು ಫುಲ್ ಅಲರ್ಟ್ ಆಗಿರ್ತಾರೆ. ಆದ್ರೆ, ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಹೊಂಚು ಹಾಕಿ ಕುಳಿತ ಶತ್ರುಗಳಿಗೆ ಈಗ ನಡುಕ ಶುರುವಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಮೂರು ವಿಶೇಷ ಪಡೆ ನಿಯೋಜನೆ..!
ಪಾಪಿ ದೇಶದಿಂದ ಜಮ್ಮುಕಾಶ್ಮಿರದ ಮೂಲಕ ಭಾರತಕ್ಕೆ ಬರುವ ಉಗ್ರರ ರಕ್ತ ಹರಿಸೋಕೆ ಮೂರು ಪವರ್ ಫುಲ್ ಪಡೆಯನ್ನ ಜಮ್ಮುಕಾಶ್ಮೀರದಲ್ಲಿ ನಿಯೋಜಿಸಲಾಗಿದೆ. ನಿಂತಲ್ಲೇ ಶತ್ರುಗಳ ಎದೆ ನಡುಗಿಸುವ ಸೇನೆ. ನೌಕಾಪಡೆ ಮತ್ತು ವಾಯುಪಡೆಯ ವಿಶೇಷ ಕಮಾಂಡೋ ಫೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ.

ಪ್ಯಾರಾ ಕಮಾಂಡೋಸ್‌ ಪಡೆ, ನೌಕಾಪಡೆಯ ಮಾರ್ಕೋಸ್ ಕಮಾಂಡೋ ಫೋರ್ಸ್ ಮತ್ತು ಭಾರತೀಯ ವಾಯುಪಡೆಯ ಗರುಡ ಕಮಾಂಡೋ ಪೋರ್ಸ್‌ಗಳನ್ನ ಕಾಶ್ಮೀರ ಕಣಿವೆಯಲ್ಲಿ ನಿಯೋಜಿಸಲಾಗಿದೆ. ಎಲ್ಲೆಲ್ಲಿ ಹೆಚ್ಚು ಉಗ್ರರು ದಾಳಿ ಮಾಡ್ತಾರೋ, ಉಗ್ರರು ಎಲ್ಲಿ ಹೆಚ್ಚಾಗಿ ಒಳ ನುಗ್ತಾರೋ ಅಂಥಾ ಪ್ರದೇಶಗಳಲ್ಲಿ ಈ ಮೂರು ವಿಶೇಷ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.

ನೌಕಾಪಡೆಯ ಮಾರ್ಕೋಸ್ ಮತ್ತು ಐಎಎಫ್‌ನ ಗರುಡ ಕಮಾಂಡೋಸ್‌ ಪಡೆ ಚಿಕ್ಕ ತಂಡಗಳು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮೂರು ಪಡೆಗಳನ್ನ ಜಂಟಿಯಾಗಿ ಅಲ್ಲಿ ನಿಯೋಜಿಸಿರುವುದು ಇದೇ ಮೊದಲು. ಮಾರ್ಕೋಸ್ ಕಮಾಂಡೋಸ್‌ ವುಲರ್ ಸರೋವರ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾಗಿದೆ. ಹಾಗೇ, ವಾಯುಪಡೆಯ ಗರುಡ ತಂಡಗಳು ಲೋಲಾಬ್ ಪ್ರದೇಶ ಮತ್ತು ಹಾಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಾರ್ಕೋಸ್‌ ಕಮಾಂಡೋ ಫೋರ್ಸ್ ನೀರಿನೂಳಗೆ ನುಗ್ಗಿ ಶತ್ರುಗಳನ್ನ ಉಡೀಸ್ ಮಾಡುವ ಸಾಮರ್ಥ್ಯ ಹೊಂದಿದ್ರೆ, ಗರುಡ ಕಮಾಂಡೋಗಳು ತಮ್ಮ ಚಾಣಾಕ್ಷ ಬುದ್ಧಿಯಿಂದ ಶತ್ರುಗಳ ಎದೆ ಸೀಳುವ ಶಕ್ತಿ ಹೊಂದಿವೆ.

Published On - 7:52 am, Mon, 25 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us