ಶಸ್ತ್ರಾಸ್ತ್ರ ಸಾಮಾಗ್ರಿ ತೆಗೆದುಕೊಂಡು ಹೋಗಲು ₹20 ಸಾವಿರ ನೀಡಲಾಗಿತ್ತು: ಉರಿಯಲ್ಲಿ ಬಂಧಿತ ಪಾಕ್ ಉಗ್ರ

Pakistani terrorist:ಉರಿ ಸೆಕ್ಟರ್‌ನ ಸೇನಾ ಶಿಬಿರದಲ್ಲಿ ಮಾಧ್ಯಮಗಳೊಂದಿಗೆ ಪತ್ರಾ ಸಂವಹನ ನಡೆಸುತ್ತಿರುವುದು ವಿಡಿಯೊದಲ್ಲಿದೆ.  ಬಾರಾಮುಲ್ಲಾ ಜಿಲ್ಲೆಯ ಪಟ್ಟಣಕ್ಕೆ ದಾಟಲು ಮತ್ತು ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ತಮ್ಮ ನಿರ್ವಾಹಕರು ₹ 20,000  ನೀಡಿದ್ದಾರೆ. ಇದಿಷ್ಟು ಹಣ ನೀಡಿದ ನಂತರ ಎರಡನೇ ಕಂತಿನಲ್ಲಿ ₹ 30,000 ನೀಡುವುದಾಗಿ ಭರವಸೆ ನೀಡಲಾಗಿದೆ ಎಂದು ಪಾತ್ರ ಹೇಳಿದ್ದಾನೆ.

ಶಸ್ತ್ರಾಸ್ತ್ರ ಸಾಮಾಗ್ರಿ ತೆಗೆದುಕೊಂಡು ಹೋಗಲು ₹20 ಸಾವಿರ ನೀಡಲಾಗಿತ್ತು: ಉರಿಯಲ್ಲಿ ಬಂಧಿತ ಪಾಕ್ ಉಗ್ರ
ಅಲಿ ಬಾಬರ್ ಪತ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 29, 2021 | 5:42 PM

ಶ್ರೀನಗರ: ಬಂಧಿತ ಪಾಕಿಸ್ತಾನಿ ಉಗ್ರ ಅಲಿ ಬಾಬರ್ ಪತ್ರಾ(Ali Babar Patra) ವಿಡಿಯೊವನ್ನು ಸೇನೆಯು ಇಂದು ಬಿಡುಗಡೆ ಮಾಡಿದ್ದು, ತಾನು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನ ಸೇನೆಯಿಂದ ತರಬೇತಿ ಪಡೆದಿದ್ದೇನೆ ಎಂದು ಉಗ್ರ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಸೋಮವಾರ ಸೇನೆ ನಡೆಸಿದ ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆ ವೇಳೆ 19 ವರ್ಷದ ಉಗ್ರ ಶರಣಾಗಿದ್ದಾನೆ.

ಉರಿ ಸೆಕ್ಟರ್‌ನ ಸೇನಾ ಶಿಬಿರದಲ್ಲಿ ಮಾಧ್ಯಮಗಳೊಂದಿಗೆ ಪತ್ರಾ ಸಂವಹನ ನಡೆಸುತ್ತಿರುವುದು ವಿಡಿಯೊದಲ್ಲಿದೆ. ಬಾರಾಮುಲ್ಲಾ ಜಿಲ್ಲೆಯ ಪಟ್ಟಣಕ್ಕೆ ದಾಟಲು ಮತ್ತು ಶಸ್ತ್ರಾಸ್ತ್ರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ತಮ್ಮ ನಿರ್ವಾಹಕರು ₹ 20,000  ನೀಡಿದ್ದಾರೆ. ಇದಿಷ್ಟು ಹಣ ನೀಡಿದ ನಂತರ ಎರಡನೇ ಕಂತಿನಲ್ಲಿ ₹ 30,000 ನೀಡುವುದಾಗಿ ಭರವಸೆ ನೀಡಲಾಗಿದೆ ಎಂದು ಪಾತ್ರ ಹೇಳಿದ್ದಾನೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PKO) ಮುಜಾಫರಾಬಾದ್‌ನಲ್ಲಿರುವ ಲಷ್ಕರ್ ಶಿಬಿರದಲ್ಲಿ ತಾನು ತರಬೇತಿ ಪಡೆದಿದ್ದೇನೆ ಮತ್ತು ಸೆಪ್ಟೆಂಬರ್ 18 ರಂದು ಆರು ಭಯೋತ್ಪಾದಕರ ಗುಂಪಿನೊಂದಿಗೆ ನುಸುಳಿದೆ ಎಂದು ಪತ್ರಾ ಹೇಳಿದ್ದಾನೆ.

ಇತ್ತೀಚಿನ ವರ್ಷಗಳಲ್ಲಿ ಸೇನೆಯು ಪಾಕಿಸ್ತಾನದ ಭಯೋತ್ಪಾದಕರನ್ನು ನಿಯಂತ್ರಣ ರೇಖೆ ಬಳಿ ಸೆರೆಹಿಡಿದ ಅಪರೂಪದ ಕಾರ್ಯಾಚರಣೆ ಇದಾಗಿದೆ. 2016 ರಲ್ಲಿ ಉರಿಯಲ್ಲಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಭಯೋತ್ಪಾದಕರು ದಾಟಿದ ಅದೇ ಪ್ರದೇಶದಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ತಡೆಯಲಾಗಿದೆ. ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು.

ದಿನಗಳ ನಂತರ ಭಾರತವು ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳನ್ನು ನಾಶಮಾಡಲು ಗಡಿಯುದ್ದಕ್ಕೂ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಆರಂಭಿಸಿತು.  ಭಯೋತ್ಪಾದಕ ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ ಮತ್ತು ಇತ್ತೀಚಿನ ಒಳನುಸುಳುವಿಕೆ ಪ್ರಯತ್ನಗಳು ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸುವ ಗುರಿಯನ್ನು ಹೊಂದಿವೆ ಎಂದು ಸೇನೆಯು ಹೇಳಿದೆ.

ಇದನ್ನೂ ಓದಿ: ಉರಿ ವಲಯದಲ್ಲಿ ಉಗ್ರರ ನುಸುಳುವಿಕೆ ವಿಫಲಗೊಳಿಸಿದ ಭಾರತೀಯ ಸೇನೆ; ಕಾರ್ಯಾಚರಣೆಯ ವಿವರ ಬಿಚ್ಚಿಟ್ಟ ಅಧಿಕಾರಿಗಳು

ಇದನ್ನೂ ಓದಿ: ಉರಿ ಸೆಕ್ಟರ್​​ನಲ್ಲಿ ಒಳನುಸುಳುವಿಕೆ: ಸೇನಾಪಡೆಯಿಂದ ಓರ್ವ ಪಾಕ್ ಉಗ್ರನ ಹತ್ಯೆ, ಮತ್ತೊಬ್ಬ ಸೆರೆ