ಭಾರತೀಯ ರೈಲ್ವೆ ಹೊಸ ಪ್ರಯತ್ನ: ರಿಸರ್ವೇಶನ್ ಇಲ್ಲದ ಎಕ್ಸ್​ಪ್ರೆಸ್ ರೈಲುಗಳ ಸಂಚಾರ

ದೇಶದಲ್ಲಿ ಕೊರೊನಾ ಪಿಡುಗು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸಂಚಾರವನ್ನು ಹಂತಹಂತವಾಗಿ ಆರಂಭಿಸಿದೆ. ಉತ್ತರ ರೈಲ್ವೆಯು ರಿಸರ್ವೇಶನ್ ಇಲ್ಲದ ಮೈಲ್ ಮತ್ತು ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ.

ಭಾರತೀಯ ರೈಲ್ವೆ ಹೊಸ ಪ್ರಯತ್ನ: ರಿಸರ್ವೇಶನ್ ಇಲ್ಲದ ಎಕ್ಸ್​ಪ್ರೆಸ್ ರೈಲುಗಳ ಸಂಚಾರ
ಸಂಗ್ರಹ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 29, 2021 | 5:42 PM

ದೆಹಲಿ: ದೇಶದಲ್ಲಿ ಕೊರೊನಾ ಪಿಡುಗು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸಂಚಾರವನ್ನು ಹಂತಹಂತವಾಗಿ ಆರಂಭಿಸಿದೆ. ಉತ್ತರ ರೈಲ್ವೆಯು ರಿಸರ್ವೇಶನ್ ಇಲ್ಲದ ಮೈಲ್ ಮತ್ತು ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಶಾಮ್ಲಿ, ದೆಹಲಿ, ಶದಾರಾ, ಪ್ರಯಾಗ್​ರಾಜ್ ಸಂಗಮ್, ಫೈಜಾಬಾದ್ ಮತ್ತು ಜೌನ್​ಪುರ್ ಮಾರ್ಗಗಳಲ್ಲಿ ಹೊಸ ರೈಲುಗಳು ಅಕ್ಟೋಬರ್ 1ರಿಂದ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ‘ಭಾನುವಾರ ಹೊರತುಪಡಿಸಿ ಅಕ್ಟೋಬರ್ 1ರಿಂದ ಪ್ರತಿದಿನ ಅನ್​ರಿಸರ್ವ್​ಡ್ ಮೈಲ್ ಮತ್ತು ಎಕ್ಸ್​ಪ್ರೆಸ್ ರೈಲುಗಳು ಸಂಚರಿಸಲಿವೆ’ ಎಂದು ರೈಲ್ವೆ ಇಲಾಖೆ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ.

ರೈಲುಗಳ ವಿವರ ಶಾಮ್ಲಿ-ದೆಹಲಿ ಶಾಹ್​ದಾರಾ ಸ್ಪೆಷಲ್ ಟ್ರೇನ್, ಪ್ರಯಾಗ್​ರಾಜ್ ಸಂಗಮ್-ಫೈಜಾಬಾದ್-ಪ್ರಯಾಗ್​ರಾಜ್ ಸಂಗಮ್ ಅನ್​ರಿಸರ್ವಡ್​ ಎಕ್ಸ್​ಪ್ರೆಸ್​, ಪ್ರಯಾಗ್​ರಾಜ್ ಸಂಗಮ್-ಜೌನ್​ಪುರ್ ಅನ್​ರಿಸರ್ವಡ್ ಮೈಲ್ ರೈಲುಗಳ ಸಂಚಾರ ಅಕ್ಟೋಬರ್ 1ರಿಂದ ಆರಂಭವಾಗಲಿದೆ.

ಚಾರ್​ಧಾಮ್​ಗೆ ಶೀಘ್ರ ಸುಲಭ ಸಂಪರ್ಕ ಹೃಷಿಕೇಶ್-ಕರ್ಣಪ್ರಯಾಗ್ ರೈಲು ಹಳಿ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜಾರ್ದೋಶ್ ಹೇಳಿದ್ದಾರೆ. ಉತ್ತರಾಖಂಡದ ಹೃಷಿಕೇಶ್-ಕರ್ಣಪ್ರಯಾಗ್ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಮಾರ್ಗದಲ್ಲಿ 15.1 ಕಿಮೀ ಅಂತರದ ಸುರಂಗ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹೃಷಿಕೇಶ್-ಕರ್ಣಪ್ರಯಾಗ್ ರೈಲು ಮಾರ್ಗವು 125 ಕಿಮೀ ದೂರದಲ್ಲಿ ಸಾಗಿ ಹೋಗುತ್ತದೆ. ಈ ಮಾರ್ಗದಲ್ಲಿ ಶ್ರೀನಗರ, ರುದ್ರಪ್ರಯಾಗ, ದೇವಪ್ರಯಾಗ, ಕರ್ಣಪ್ರಯಾಗ, ಗೌಚಾರ್, ಡೆಹ್ರಾಡೂನ್, ಪೌರಿ ಗರ್​ವಾಲ್, ತೆಹ್ರಿ ಗರ್​ವಾಲ್, ಚಮೋಲಿ ನಿಲ್ದಾಣಗಳು ಬರುತ್ತವೆ.

(Unreserved Trains to Start from October 1 says Indian Railways Spokesperson)

ಇದನ್ನೂ ಓದಿ: ಅದ್ದೂರಿಯಾಗಿ ಆರಂಭವಾದ 6 ತಿಂಗಳಿಗೆ ನಿಂತ ಕೆಂಪೇಗೌಡ ಏರ್ಪೋರ್ಟ್ ರೈಲು; ಲಾಕ್​ಡೌನ್​ ಮುಗಿದರೂ ಸಂಚಾರ ಸ್ಥಗಿತ

ಇದನ್ನೂ ಓದಿ: Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada