ಉರಿ ವಲಯದಲ್ಲಿ ಉಗ್ರರ ನುಸುಳುವಿಕೆ ವಿಫಲಗೊಳಿಸಿದ ಭಾರತೀಯ ಸೇನೆ; ಕಾರ್ಯಾಚರಣೆಯ ವಿವರ ಬಿಚ್ಚಿಟ್ಟ ಅಧಿಕಾರಿಗಳು

ಸೆಪ್ಟೆಂಬರ್​ 18ರಂದು ರಾತ್ರಿ ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಗಸ್ತು ತಿರುಗುತ್ತಿದ್ದ ನಮ್ಮ ಸೇನಾ ಪಡೆ ಯೋಧರು, ಉಗ್ರರ ಒಳನುಸುಳುವಿಕೆಯನ್ನು ಪತ್ತೆ ಹಚ್ಚಿದರು ಎಂದು ಮೇಜರ್ ಜನರಲ್​ ವೀರೇಂದ್ರ ವತ್ಸ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉರಿ ವಲಯದಲ್ಲಿ ಉಗ್ರರ ನುಸುಳುವಿಕೆ ವಿಫಲಗೊಳಿಸಿದ ಭಾರತೀಯ ಸೇನೆ; ಕಾರ್ಯಾಚರಣೆಯ ವಿವರ ಬಿಚ್ಚಿಟ್ಟ ಅಧಿಕಾರಿಗಳು
ಮೇಜರ್​ ವೀರೇಂದ್ರ ವತ್ಸ
Follow us
TV9 Web
| Updated By: Lakshmi Hegde

Updated on:Sep 28, 2021 | 2:31 PM

ಉರಿ ವಲಯ (Uri Sector)ದಲ್ಲಿ ಪಾಕಿಸ್ತಾನಿ ಉಗ್ರರ ಒಳನುಸುಳುವಿಕೆಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. 19ವರ್ಷದ ಲಷ್ಕರ್​ ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದು, ಇನ್ನೊಬ್ಬ ಉಗ್ರನನ್ನು ಹತ್ಯೆ ಮಾಡಿದೆ. ಸೆರೆ ಸಿಕ್ಕ ಉಗ್ರ ಪಾಕಿಸ್ತಾನದ   ಈ ಪ್ರಯತ್ನದಲ್ಲಿ ಭಾರತೀಯ ಸೇನೆ (Indian Army)ಯ ಮೂವರು ಯೋಧರು ಕೂಡ ಗಾಯಗೊಂಡಿದ್ದಾರೆ. ಸೆಪ್ಟೆಂಬರ್​ 23ರಿಂದಲೂ ಉರಿ ವಲಯದಲ್ಲಿ ಕೆಲವು ಬೆಳವಣಿಗೆಗಳು ಆಗುತ್ತಿದ್ದು ಅದರ ಬಗ್ಗೆ ಮಾಹಿತಿ ಕೊಡಲು ಇಂದು ಭಾರತೀಯ ಸೇನೆ ಸುದ್ದಿಗೋಷ್ಠಿ ನಡೆಸಿ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ.  

ಉರಿ ವಲಯದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಮೇಜರ್​ ಜನರಲ್​ ವೀರೇಂದ್ರ ವತ್ಸ, ಸೆಪ್ಟೆಂಬರ್​ 18ರಂದು ರಾತ್ರಿ ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಗಸ್ತು ತಿರುಗುತ್ತಿದ್ದ ನಮ್ಮ ಸೇನಾ ಪಡೆ ಯೋಧರು, ಉಗ್ರರ ಒಳನುಸುಳುವಿಕೆಯನ್ನು ಪತ್ತೆ ಹಚ್ಚಿದರು. ಸುಮಾರು 6 ಉಗ್ರರು ಒಳನುಸುಳಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತು. ಕೂಡಲೇ ನಮ್ಮ ಸೈನಿಕರು ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದರು.  ಈ ಎನ್​ಕೌಂಟರ್​ ಶುರುವಾದ ಮೇಲೆ ಆರು ಮಂದಿಯಲ್ಲಿ ಇಬ್ಬರು ಗಡಿ ದಾಟಿ ಭಾರತದ ಕಡೆ ಬಂದಿದ್ದರು..ಉಳಿದ ನಾಲ್ವರು ಇನ್ನೂ ಪಾಕ್​ ಬದಿಯಲ್ಲೇ ಇದ್ದರು. ಕತ್ತಲಿದ್ದ ಕಾರಣ ಅವರು ತಪ್ಪಿಸಿಕೊಂಡು ಪಾಕಿಸ್ತಾನದತ್ತ ಹಿಂದಿರುಗಿದರು. ಕತ್ತಲು ಅವರಿಗೆ ಅನುಕೂಲ ಮಾಡಿಕೊಟ್ಟಿತು ಎಂದು ತಿಳಿಸಿದರು.

ಭಾರತದತ್ತ ಇಬ್ಬರು ಉಗ್ರರು ಬರುತ್ತಿದ್ದಂತೆ ನಮ್ಮ ಸೇನಾ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಂಡಿತು. ಮತ್ತಷ್ಟು ಯೋಧರು ಆ ಸ್ಥಳವನ್ನು ಸುತ್ತುವರಿದರು. ಉರಿ ವಲಯದ ಗಡಿ ನಿಯಂತ್ರಣಾ ರೇಖೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ವಾಸವಾಗಿದ್ದರಿಂದ ಅತ್ಯಂತ ಜಾಗರೂಕರಾಗಿ ನಾವು ಇರಬೇಕಿತ್ತು. ಯಾವುದೇ ದೊಡ್ಡ ಮಟ್ಟದ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಿತ್ತು.

ಸೈನಿಕರನ್ನು ನೋಡಿದ ಉಗ್ರರೂ ಕೂಡ ಆ ಸುತ್ತಲಿನ ಪ್ರದೇಶದಲ್ಲೇ ಅಡಗಿಕೊಂಡಿದ್ದರು. ಸೆಪ್ಟೆಂಬರ್​ 25ರವರೆಗೂ ಆಗಾಗ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರು. ಆದರೆ ಅವರು ವಿಫಲರಾಗುತ್ತಿದ್ದರು. ಸೆಪ್ಟೆಂಬರ್​ 25ರ ಸಂಜೆಯಿಂದ ಮತ್ತೆ ಕಾರ್ಯಾಚರಣೆ ಚುರುಕು ಪಡೆದುಕೊಂಡಿತು. 26 ಮುಂಜಾನೆ ಒಬ್ಬ ಉಗ್ರರನ್ನು ಕೊಲ್ಲಲಾಯಿತು. ಆತನನ್ನು ಕೊಲ್ಲುತ್ತಿದ್ದಂತೆ ಅವನ ಜತೆಗಿದ್ದ ಇನ್ನೊಬ್ಬ ಶರಣಾದ. ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಂಡ ಹಾಗೂ ತನ್ನ ಬಗ್ಗೆ ಸಂಪೂರ್ಣ ವಿವರ ನೀಡಿದ. ತನ್ನ ತಾಯಿಯ ಫೋನ್​ ನಂಬರ್​ ಕೂಡ ಕೊಟ್ಟ ಎಂದು  ಮೇಜರ್​ ಜನರಲ್​ ಮಾಹಿತಿ ನೀಡಿದರು.

2016ರಲ್ಲಿ ಉರಿ ವಲಯದಲ್ಲಿ ಭಾರತೀಯ ಸೇನೆ ಮೇಲೆ ಭೀಕರ ಆತ್ಮಾಹುತಿ ದಾಳಿಯಾದಾಗ ಎಲ್ಲಿಂದ ಉಗ್ರರು ನುಸುಳಿದ್ದರೋ, ಈ ಬಾರಿಯೂ ಅಲ್ಲಿಂದಲೇ ನುಸುಳಲು ಪ್ರಯತ್ನ ಪಟ್ಟಿದ್ದಾರೆ. ಹಾಗೇ ಈ ನುಸುಳುಕೋರರಿಗೆ ಪಾಕಿಸ್ತಾನದಿಂದ ಸಂಪೂರ್ಣ ಸಹಕಾರ, ಅಗತ್ಯ ವಸ್ತುಗಳ ನೆರವು ಸಿಗುತ್ತದೆ ಎಂಬುದೂ ಸ್ಪಷ್ಟವಾಗಿದೆ. ಯಾಕೆಂದರೆ ಈಗ ಉಗ್ರರು ನುಸುಳಲು ಪ್ರಯತ್ನ ಪಟ್ಟ ಸ್ಥಳಕ್ಕೆ ಸಮಾನಾಂತರವಾಗಿ ಪಾಕಿಸ್ತಾನದ ಕಡೆಯಲ್ಲಿ ಆ ದೇಶದ ಸೇನಾ ಪೋಸ್ಟ್​ ಇದೆ. ಅಲ್ಲಿ ನಿಯೋಜನೆಗೊಂಡಿರುವ ಪಾಕ್​ ಸೇನೆಯ ಕಣ್ಣುತಪ್ಪಿಸಿ ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಭಯೋತ್ಪಾದಕರು ಇಲ್ಲಿಗೆ ಬರಲು ಸಾಧ್ಯವಿಲ್ಲ. ಖಂಡಿತ ಅವರ ಬೆಂಬಲ ಇದ್ದೇ ಇದೆ ಎಂದು ಹೇಳಿದ್ದಾರೆ.

ವಾರದಲ್ಲಿ 7 ಉಗ್ರರ ಹತ್ಯೆ ಅದರಾಚೆ ಕಳೆದ 7 ದಿನಗಳಲ್ಲಿ 7 ಉಗ್ರರನ್ನು ಹತ್ಯೆಮಾಡಲಾಗಿದೆ. ಅದರಲ್ಲಿ ಐದು ಉಗ್ರರನ್ನು ಗಡಿ ನಿಯಂತ್ರಣ ರೇಖೆ ಬಳಿಯೇ ಕೊಲ್ಲಲಾಗಿದೆ. ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ. ಇವರೆಲ್ಲರಿಂದಲೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೀರೇಂದ್ರ ವತ್ಸ ತಿಳಿಸಿದರು. ಅದಾದ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಕಮಾಂಡರ್​ ಮಾತನಾಡಿದರು. ಸೆ.18ರಂದು ನಾಲ್ವರು ಉಗ್ರರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಕತ್ತಲು ಮತ್ತು ದಟ್ಟವಾದ ಅರಣ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cyclone Shaheen: ಗುಲಾಬ್ ಚಂಡಮಾರುತದ ಬೆನ್ನಲ್ಲೇ ಶಾಹೀನ್ ಸೈಕ್ಲೋನ್ ಭೀತಿ; ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ

ಉರಿ ಸೆಕ್ಟರ್​​ನಲ್ಲಿ ಒಳನುಸುಳುವಿಕೆ: ಸೇನಾಪಡೆಯಿಂದ ಓರ್ವ ಪಾಕ್ ಉಗ್ರನ ಹತ್ಯೆ, ಮತ್ತೊಬ್ಬ ಸೆರೆ

Published On - 1:52 pm, Tue, 28 September 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ